ಅಳು ಬಂದರೆ ತಡೀಬೇಡಿ, ಕಣ್ಣೀರು ಸುರಿಸಿದರೆ ಆರೋಗ್ಯಕ್ಕೆ ಒಳಿತು!

First Published Mar 31, 2021, 3:59 PM IST

ನಗುವುದರಿಂದ ಆಗುವ ಲಾಭಗಳ ಬಗ್ಗೆ  ಸಾಕಷ್ಟು ಕೇಳಿರಬಹುದು ಅಥವಾ ಓದಿರಬಹುದು. ಆದರೆ ಅಳು ಕೂಡ ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂಬುದು ತಿಳಿದಿದೆಯೇ? ಹೌದು, ಅಳುವುದೂ ಒಬ್ಬ ವ್ಯಕ್ತಿಗೆ ಕಡ್ಡಾಯ, ಮತ್ತು ಇದು ಆತನ ಮನಸ್ಸನ್ನು ಹಗುರಗೊಳಿಸುವುದಲ್ಲದೆ, ದೇಹಕ್ಕೆ ಲಾಭವನ್ನೂ ನೀಡುತ್ತದೆ. ಆದ್ದರಿಂದ ಅಳುವುದರಿಂದ ವ್ಯಕ್ತಿಗೆ ಯಾವ ರೀತಿ ಪ್ರಯೋಜನ ಎಂದು ತಿಳಿದುಕೊಳ್ಳೋಣ. 

ದೇಹದಿಂದ ವಿಷವನ್ನು ಹೊರ ಹಾಕಲಾಗುತ್ತದೆಒಬ್ಬ ವ್ಯಕ್ತಿ ಒತ್ತಡಕ್ಕೆ ಒಳಗಾದಾಗ ದೇಹದಲ್ಲಿ ಅನೇಕ ವಿಷಕಾರಿ ವಸ್ತು ಉತ್ಪತ್ತಿಯಾಗುತ್ತದೆ. ಈ ವಿಷಕಾರಿ ಅಂಶಗಳು ದೇಹದಿಂದ ಹೊರ ಹೋಗಲು ಸಾಧ್ಯವಾಗದಿದ್ದರೆ, ಅವು ದೇಹಕ್ಕೆ ಹಾನಿಯುಂಟು ಮಾಡಬಹುದು. ಆದುದರಿಂದ ಅಳುವುದು ಮುಖ್ಯ.
undefined
ಅತ್ತಾಗ ಮನಸ್ಸೂ ಹಗುರವಾಗುವುದು ಸುಳ್ಳೋಲ್ಲ. ದುಃಖವಾದಾಗ ಮನಸಾರೆ ಅತ್ತು ಬಿಡಬೇಕು.
undefined
ಉತ್ತಮ ನಿದ್ರೆ ಬರುತ್ತದೆಅಳು ಬಂದ ಮೇಲೆ ನಿದ್ರೆ ಚೆನ್ನಾಗಿ ಬರುತ್ತದೆ ಎಂದು ಅಧ್ಯಯನವೊಂದು ತೋರಿಸಿದೆ. ವಾಸ್ತವವಾಗಿ ಅಳುವುದು ವ್ಯಕ್ತಿಯ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಅವನನ್ನು ನಿದ್ರೆಗೆ ಜಾರುವಂತೆ ಮಾಡುತ್ತದೆ.
undefined
ಅಳು ಬಂದಾಗಿ ಮನಸ್ಸಿನಲ್ಲಿರುವ ಎಲ್ಲಾ ಯೋಚನೆ, ಚಿಂತೆಗಳು ದೂರ ಆಗುತ್ತವೆ. ಮನಸ್ಸು ಸಮಾಧಾನ ಆಗುತ್ತದೆ. ಮಕ್ಕಳು ಅಳು ಬಂದ ನಂತರ ನಿದ್ರೆಗೆ ಜಾರಿರುವುದನ್ನು ಕಾಣಬಹುದು.
undefined
ಒತ್ತಡದಿಂದ ಮುಕ್ತಿಯಾವುದೇ ವ್ಯಕ್ತಿ ಒತ್ತಡದಲ್ಲಿ ಸಿಲುಕಿದಾಗಲೆಲ್ಲ ಆತ ತುಂಬಾ ಭಾರವನ್ನು ಅನುಭವಿಸುತ್ತಾರೆ. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿಗೆ ಅಳು ಬಂದರೆ, ಆತನಿಗೆ ಹಗುರವಾದ ಅನುಭವವಾಗುತ್ತದೆ ಮತ್ತು ಆತನ ಒತ್ತಡವೂ ನಿವಾರಣೆಯಾಗುತ್ತದೆ.
undefined
ಅಲ್ಲದೇ ಮನುಷ್ಯನ ದೇಹದಲ್ಲಿ ಆಕ್ಸಿಟೋಸಿನ್ ಮತ್ತು ಎಂಡೊರ್ಫಿನ್ ಎಂಬ ರಾಸಾಯನಿಕಗಳನ್ನು ಬಿಡುಗಡೆ ಮಾಡಿ, ಮನುಷ್ಯನ ಮನಸ್ಥಿತಿಯನ್ನು ಸುಧಾರಿಸಲು ಅಳು ನೆರವಾಗುತ್ತದೆ.
undefined
ಕಣ್ಣುಗಳಿಗೆ ಪ್ರಯೋಜನಕಾರಿಹೆಚ್ಚುತ್ತಿರುವ ಮಾಲಿನ್ಯ ಮತ್ತು ತಂತ್ರಜ್ಞಾನದ ಬಳಕೆ ಕಣ್ಣಿಗೂ ಪರಿಣಾಮ ಬೀರುತ್ತಿದೆ. ಒಬ್ಬ ವ್ಯಕ್ತಿ ಅಳುತ್ತಾ ಇದ್ದರೆ, ಅದು ತನ್ನ ಕಣ್ಣಿನಿಂದ ಮಾಲಿನ್ಯವನ್ನು ತೆಗೆದುಹಾಕುತ್ತದೆ ಮತ್ತು ಕಣ್ಣುಗಳನ್ನು ಸ್ವಚ್ಛ ಮಾಡುತ್ತದೆ.
undefined
ಕಣ್ಣು ಹೆಚ್ಚು ಡ್ರೈ ಆಗಿರುವುದು ಉತ್ತಮವಲ್ಲ. ಇದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದುದರಿಂದ ಅಳುವುದು ಮುಖ್ಯ. ಇದರಿಂದ ಕಣ್ಣುಗಳಿಗೆ ಅತ್ಯಂತ ಪ್ರಮುಖವಾದ ದ್ರವತ್ವವು ಕಣ್ಣುಗಳಲ್ಲಿ ಇರುವಂತೆ ಮಾಡುತ್ತದೆ.
undefined
click me!