ದುರ್ಬಲ ಮೂಳೆಗಳಿಂದ ಈ ರೋಗಗಳು ಉಂಟಾಗಬಹುದುಮೂಳೆಗಳು ದುರ್ಬಲವಾಗಿದ್ದರೆ, ರಿಕೆಟ್ಗಳು ಮತ್ತು ಆಸ್ಟಿಯೊಪೊರೋಸಿಸ್ ನಂತಹ ಕಾಯಿಲೆಗಳು ಬರಬಹುದು ಮತ್ತು ಲಘು ಗಾಯವನ್ನು ಹೊಂದಿದ್ದರೆ ಸಾಕು ಮೂಳೆ ಮುರಿಯುವ ಅಪಾಯವೂ ಹೆಚ್ಚು.
undefined
ಮೂಳೆಗಳನ್ನು ಆರೋಗ್ಯವಾಗಿ ಮತ್ತು ಸದೃಢವಾಗಿಡಲು ಸಾಕಷ್ಟು ಕ್ಯಾಲ್ಸಿಯಂ ತೆಗೆದುಕೊಳ್ಳುವುದು ಬಹಳ ಮುಖ್ಯ ಮತ್ತು ವಿಟಮಿನ್ ಡಿ ಕೂಡ ದೇಹಕ್ಕೆ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಒಬ್ಬ ವಯಸ್ಕ ವ್ಯಕ್ತಿಗೆ ಪ್ರತಿದಿನ 700mg ಕ್ಯಾಲ್ಸಿಯಂ ಬೇಕಾಗುತ್ತದೆ.
undefined
ಗಟ್ಟಿಯಾದ ಮೂಳೆಗಳಿಗಾಗಿ ಮೊಸರು ಮೊಸರು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡಕ್ಕೂಉತ್ತಮ ಮೂಲ. ಮೊಸರು ಸೇವನೆಯು ಮೂಳೆಗಳ ಆರೋಗ್ಯಕರ ಮತ್ತು ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ .
undefined
ವಯಸ್ಸಾದವರಿಗೆ ಮೊಸರಿನ ಸೇವನೆಮೂಲಕ ಮೂಳೆ ಮುರಿತ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ದೈನಂದಿನ ಆಹಾರದಲ್ಲಿ ಮೊಸರನ್ನು ಸೇರಿಸಿಕೊಳ್ಳಬೇಕು.
undefined
ಮೊಟ್ಟೆ ಮೂಳೆಗಳಿಗೆ ಪ್ರಯೋಜನಕಾರಿ.ಮೊಟ್ಟೆ ಪ್ರಿಯರಿಗೆ ಇದು ಶುಭ ಸುದ್ದಿ. ಮೊಟ್ಟೆಯಲ್ಲಿ ವಿಟಮಿನ್ ಡಿ ಇದ್ದು ಮೂಳೆಗಳನ್ನು ಬಲಗೊಳಿಸಲು ನೆರವಾಗುತ್ತದೆ. ಮೊಟ್ಟೆಯ ಹಳದಿ ಭಾಗ ವಿಟಮಿನ್ ಡಿ ಯನ್ನು ಹೊಂದಿರುತ್ತದೆ.
undefined
ಮೊಟ್ಟೆಯ ಬಿಳಿಯನ್ನು ಮಾತ್ರ ತಿನ್ನುವುದಾದರೆ, ವಿಟಮಿನ್ ಡಿ ಯ ಯಾವುದೇ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೊಟ್ಟೆಯ ಹಳದಿ ಸೇರಿಇಡಿಯ ಮೊಟ್ಟೆಯನ್ನು ತಿನ್ನಬೇಕು.
undefined
ಪ್ರತಿದಿನ ಹಸಿರು ಸೊಪ್ಪುಗಳನ್ನು ಸೇವಿಸಿಪಾಲಕ್ ನಂತಹ ಹಸಿರು ಸೊಪ್ಪುಗಳು ಮೂಳೆಗಳಿಗೆ ಬಹಳ ಮುಖ್ಯ. 1 ಕಪ್ ಪಾಲಕ್ ನಲ್ಲಿ ದೈನಂದಿನ ಅಗತ್ಯದ 25% ನಷ್ಟು ಕ್ಯಾಲ್ಸಿಯಂ ಇದೆ.
undefined
ಪಾಲಕ್ ನಲ್ಲಿ ಕಬ್ಬಿಣ ಮತ್ತು ವಿಟಮಿನ್ ಎ ಅಂಶವಿದ್ದು, ಇದು ರಕ್ತ ಮತ್ತು ಕಣ್ಣಿಗೆ ಪ್ರಯೋಜನಕಾರಿ. ಆದ್ದರಿಂದ ಪಾಲಕ್ ಅನ್ನು ಆಹಾರಕ್ರಮದ ಭಾಗವಾಗಿ ಮಾಡಿಕೊಳ್ಳಿ.
undefined
ಪ್ರೋಟೀನ್ ಯುಕ್ತ ಆಹಾರಗಳನ್ನು ಸೇವಿಸಿಮೂಳೆಗಳಿಗೆ ಕ್ಯಾಲ್ಸಿಯಂ ಮಾತ್ರವಲ್ಲ, ಪ್ರೋಟೀನ್ ಕೂಡ ತುಂಬಾ ಮುಖ್ಯ. ಮೂಳೆಗಳು ಶೇ.50ರಷ್ಟು ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿವೆ. ಪ್ರೋಟೀನ್ ಕಡಿಮೆ ಸೇವಿಸಿದಲ್ಲಿಕ್ಯಾಲ್ಸಿಯಂ ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಇದರಿಂದ ಮೂಳೆ ಮುರಿತ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ.
undefined
ಬಾದಾಮಿ, ಓಟ್ಸ್, ಚೀಸ್, ಹಾಲು, ಬ್ರೊಕೋಲಿಯಂತಹ ವಸ್ತುಗಳನ್ನುಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು.ಇದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ತೊಂದರೆಗಳು ತಪ್ಪುತ್ತವೆ.
undefined