ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ (Shubhman Gill) ಗಾಯಗೊಂಡು ಆಟದಿಂದ ಹೊರನಡೆದಿದ್ದರು. ಆದರೆ ಯಾವಾಗಲೂ ಎಲ್ಲಾ ಪಂದ್ಯದಲ್ಲೂ ಅದ್ಭುತ ಸ್ಕೋರ್ ಮಾಡುವ ಶುಭ್‌ಮನ್ ಗಿಲ್ ಅವರ ಫಿಟ್ನೆಸ್ (Fitness) ಬಗ್ಗೆ ಯುವಜನರಲ್ಲಿ ಹೆಚ್ಚು ಕುತೂಹಲ ಇದೆ. ಈ ಯಂಗ್ ಮತ್ತು ಎನರ್ಜಿಟಿಕ್ ಕ್ರಿಕೇಟರ್ ನ ಫಿಟ್ನೆಸ್ ಬಗ್ಗೆ ತಿಳಿಯೋಣ.
ಶುಭ್‌ಮನ್ ಗಿಲ್ ಯಾವಾಗಲೂ ತಮ್ಮ ಅತ್ಯುತ್ತಮ ಇನ್ನಿಂಗ್ಸ್ಗಳಿಗೆ ಹೆಸರುವಾಸಿಯಾಗಿದ್ದಾರೆ. ವಿಶ್ವಕಪ್ ಗೂ ಮುನ್ನ ಯೋ-ಯೋ ಟೆಸ್ಟ್ನಲ್ಲಿ (yo yo test)ವಿರಾಟ್ ಕೊಹ್ಲಿಯನ್ನು ಗಿಲ್ ಹಿಂದಿಕ್ಕಿದ್ದರು. ಯೋ-ಯೋ ಟೆಸ್ಟ್ನಲ್ಲಿ ಕೊಹ್ಲಿ 17.2 ರನ್ ಗಳಿಸಿದರೆ, ಗಿಲ್ 18.7 ರನ್ ರೇಟ್ ಗಳಿಸಿದ್ದಾರೆ. ಶುಭ್‌ಮನ್ ಗಿಲ್ ತನ್ನನ್ನು ಹೇಗೆ ಫಿಟ್ ಆಗಿರಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ನಿಮಗಿದ್ದರೆ ಇಲ್ಲಿದೆ ಅವರ ಫಿಟ್ನೆಸ್ ರಹಸ್ಯ (fitness secret).
ಶುಭ್‌ಮನ್ ಗಿಲ್ ಬಹಳ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸುತ್ತಾರೆ. ಒಬ್ಬ ವ್ಯಕ್ತಿಯು ಶಿಸ್ತುಬದ್ಧ ಮತ್ತು ಸರಿಯಾದ ಆಹಾರ ಕ್ರಮ ಮತ್ತು ವ್ಯಾಯಾಮ ಅನುಸರಿಸಿದ್ರೆ ಮಾಡಿದರೆ ಮಾತ್ರ ವ್ಯಾಯಾಮಗಳು ಪರಿಣಾಮಕಾರಿಯಾಗಿರುತ್ತವೆ ಎಂದು ಅವರು ಹೇಳುತ್ತಾರೆ. ಡಂಬಲ್ಗಳು, ಚೆಸ್ಟ್ ಪ್ರೆಸ್ ಮುಂತಾದ ವಿವಿಧ ವ್ಯಾಯಾಮಗಳ ಮೇಲೆ ಶುಭ್‌ಮನ್ ಗಮನ ಹರಿಸುತ್ತಾರೆ. ಹಾಗಾಗಿಯೇ ಅವರು ಫಿಟ್ ಆಗಿರ್ತಾರೆ. ಇನ್ನು ಅವರ ಆಹಾರ ಕ್ರಮ ಹೇಗಿದೆ ಗೊತ್ತಾ?
ಬೆಳಗ್ಗಿನ ಉಪಹಾರ: ಶುಭ್‌ಮನ್ ಗಿಲ್ ತನ್ನ ದಿನವನ್ನು ಎನರ್ಜಿ ತುಂಬಿದ ಉಪಾಹಾರದೊಂದಿಗೆ ಪ್ರಾರಂಭಿಸುತ್ತಾನೆ. ಮೊಟ್ಟೆ, ಓಟ್ ಮೀಲ್ ಮತ್ತು ಹಣ್ಣುಗಳು ಇದರಲ್ಲಿ ಪ್ರಮುಖವಾಗಿರುತ್ತೆ, ಇದು ಕ್ರಿಕೆಟ್ ಮೈದಾನದಲ್ಲಿ ಪವರ್ ಫುಲ್ ಪರ್ಫಾರ್ಮೆನ್ಸ್ ನೀಡಲು ಸಹಾಯ ಮಾಡುತ್ತೆ. ಆಮ್ಲೆಟ್ ಆಗಿರಲಿ ಅಥವಾ ಬೇಯಿಸಿದ ಮೊಟ್ಟೆಯಾಗಿರಲಿ, ಶುಭ್‌ಮನ್ ಗಿಲ್ಗೆ ತಮ್ಮ ಮುಂಜಾನೆ ಯಾವ ರೀತಿ ಆಹಾರದಿಂದ ಆರಂಭಿಸಬೇಕೆಂದು ತಿಳಿದಿದೆ.
ಮಧ್ಯಾಹ್ನದ ಊಟ: ಊಟದ ವಿಷಯಕ್ಕೆ ಬಂದಾಗ, ಗಿಲ್ ಈ ಸಮಯದಲ್ಲಿ ಕಾರ್ಬ್ ಸಮೃದ್ಧ ಆಹಾರವನ್ನು ಸೇವಿಸಲು ಬಯಸುತ್ತಾರೆ. ಗ್ರಿಲ್ಡ್ ಚಿಕನ್, ಮೀನು ಅಥವಾ ಬೇಳೆಕಾಳುಗಳೊಂದಿಗೆ ಕಂದು ಅಕ್ಕಿ ಮತ್ತು ತರಕಾರಿಗಳನ್ನು ಹೊಂದಿರೋ ಆಹಾರ ಇಷ್ಟಪಡ್ತಾರೆ. ಶುಭ್‌ಮನ್ ಗಿಲ್ ಅವರ ಫಿಟ್ನೆಸ್ನ ರಹಸ್ಯವೆಂದರೆ ಅವರು ಗ್ಲುಟೆನ್ ಮುಕ್ತ ಬ್ರೆಡ್ ತಿನ್ನುತ್ತಾರೆ.
ರಾತ್ರಿ ಊಟ: ಗಿಲ್ ತನ್ನ ದಿನವನ್ನು ಪೂರ್ಣಗೊಳಿಸಲುಅಂದರೆ ಡಿನ್ನರ್ ಗೆ ಲಘು ಆಹಾರ ಆದರೆ ಪ್ರೋಟೀನ್ ಭರಿತ ಭೋಜನವನ್ನು ತಿನ್ನೋದಕ್ಕೆ ಇಷ್ಟಪಡ್ತಾರೆ. ಸಾಕಷ್ಟು ತರಕಾರಿಗಳನ್ನು ಅವರು ಡಿನ್ನರ್ ಗೆ ತಿನ್ನೋದಕ್ಕೆ ಇಷ್ಟಪಡ್ತಾರೆ.
ಚೀಟ್ ಡೇ: ಪ್ರತಿದಿನ ಫಿಟ್ ನೆಸ್ ಕಾಪಾಡುವವರು ತಮ್ಮ ಇಷ್ಟವಾದ ಆಹಾರ ಸೇವಿಸಲು ಒಂದು ದಿನ ಚೀಟ್ ಡೇ ಬೇಕಾಗುತ್ತದೆ ಅಲ್ವಾ? ಅದೇ ರೀತಿ ಶುಭ್‌ಮನ್ ಚೀಟ್ ಡೇ ಗೆ ಜೇನುತುಪ್ಪದೊಂದಿಗೆ ಪ್ಯಾನ್ ಕೇಕ್ ತಿನ್ನಲು ಇಷ್ಟಪಡುತ್ತಾರೆ
ಸತತ ಅಭ್ಯಾಸದಿಂದ ಯಶಸ್ಸು: ಶುಭ್‌ಮನ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನಕ್ಕಾಗಿ ತಮ್ಮದೇ ನಿಗಧಿತ ಗುರಿಯನ್ನು ಹೊಂದಿದ್ದಾರೆ. ಯಶಸ್ಸಿನ ಏಣಿಯನ್ನು ಏರಲು ಅಭ್ಯಾಸ (practice) ಮಾತ್ರ ಸಹಾಯ ಮಾಡುತ್ತದೆ ಎಂದು ಅವರು ನಂಬುತ್ತಾರೆ ಮತ್ತು ಅವರು ಸ್ವತಃ ನಿರಂತರ ಅಭ್ಯಾಸ ಮಾಡುತ್ತಿರುತ್ತಾರೆ.