ಸ್ಟ್ರೀಟ್ ಲೈಟ್ ರಕ್ತದ ಸಕ್ಕರೆ ಹೆಚ್ಚಿಸುತ್ತಾ? ಸಂಶೋಧನೆ ಏನು ಹೇಳುತ್ತೆ?

Published : Nov 19, 2022, 05:28 PM IST

ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ದೊಡ್ಡ ನಗರಗಳಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಸಂಶೋಧಕರು ಈ ಬಗ್ಗೆ ಆಘಾತಕಾರಿ ಅಂಶ ಬಹಿರಂಗಪಡಿಸಿದ್ದಾರೆ. ಅಧ್ಯಯನದ ಪ್ರಕಾರ, ರಸ್ತೆಗಳಲ್ಲಿನ ದೊಡ್ಡ ಸ್ಟ್ರೀಟ್ ಲೈಟ್ಗಳಿಂದಾಗಿ ರಕ್ತದಲ್ಲಿನ ಸಕ್ಕರೆ ಹೆಚ್ಚಾಗಲು ಪ್ರಾರಂಭಿಸುತ್ತಂತೆ! ಈ ಶಾಕಿಂಗ್ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.  

PREV
17
ಸ್ಟ್ರೀಟ್ ಲೈಟ್ ರಕ್ತದ ಸಕ್ಕರೆ ಹೆಚ್ಚಿಸುತ್ತಾ? ಸಂಶೋಧನೆ ಏನು ಹೇಳುತ್ತೆ?

ಜಗತ್ತಿನಲ್ಲಿ 422 ಮಿಲಿಯನ್ ಜನರು ಮಧುಮೇಹದಿಂದ (Diabetes) ಬಳಲುತ್ತಿದ್ದಾರೆ. ಈ ರೋಗವು ಮೂತ್ರಪಿಂಡ ವೈಫಲ್ಯ, ಹೃದಯಾಘಾತ, ಕುರುಡುತನದಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ. ಆದರೆ ಈಗ ತಜ್ಞರು ಅದರ ತ್ವರಿತ ಹರಡುವಿಕೆಗೆ ಕಾರಣ ಕಂಡುಕೊಂಡಿದ್ದಾರೆ. ಅಧ್ಯಯನದ ಪ್ರಕಾರ, ಬೀದಿಗಳಲ್ಲಿರುವ ಬೀದಿ ದೀಪಗಳು ರಕ್ತದಲ್ಲಿನ ಸಕ್ಕರೆ ಹೆಚ್ಚಿಸುತ್ತಂತೆ.

27
ಈ ಬೆಳಕಿನಲ್ಲಿ ಉಳಿಯೋದರಿಂದ ಮಧುಮೇಹ ಹೆಚ್ಚಾಗುತ್ತೆ

ಮಧುಮೇಹ ಮತ್ತು ಬೆಳಕಿನ ನಡುವಿನ ಸಂಬಂಧ ಕಂಡುಹಿಡಿಯಲು ಚೀನಾದ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದರು. ಇದನ್ನು ಡಯಾಬೆಟೊಲೊಜಿಯಾ ಎಂಬ ಜರ್ನಲ್‌ನಲ್ಲಿ  ಪ್ರಕಟಿಸಲಾಯಿತು. ಬೀದಿಗಳಲ್ಲಿನ ದೊಡ್ಡ ಸ್ಟ್ರೀಟ್ ಲೈಟ್ ಗಳಿಗೆ(Street light) ಒಡ್ಡಿ ಕೊಳ್ಳೋದು ಮಧುಮೇಹದ ಅಪಾಯ ಹೆಚ್ಚಿಸುತ್ತೆ ಎಂದು ಅಧ್ಯಯನದ ಪ್ರಮುಖ ಸಂಶೋಧಕರು ಹೇಳಿದ್ದಾರೆ.

37
ಹಾರ್ಮೋನುಗಳು ಹದಗೆಡುತ್ತವೆ

ಈ ಸ್ಟಡಿಯಲ್ಲಿ ಚೀನಾದ ಜನರನ್ನು ಅಧ್ಯಯನ ಮಾಡಲಾಯಿತು, ಇದರಲ್ಲಿ ಈ ಲ್ಯಾನ್ ದೀಪಗಳು ಬೆಳಕಿನ ಮಾಲಿನ್ಯವನ್ನು ಹೆಚ್ಚಿಸುತ್ತಿವೆ ಎಂದು ಕಂಡುಬಂದಿದೆ. ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ತೋರಿಸುತ್ತಿದೆ. ಈ ಬೆಳಕು ರಕ್ತದ ಸಕ್ಕರೆ ನಿರ್ವಹಿಸುವ ಇನ್ಸುಲಿನ್ ಮತ್ತು ಗ್ಲುಕಾಗಾನ್ ಹಾರ್ಮೋನುಗಳನ್ನು ತೊಂದರೆಗೊಳಿಸುತ್ತೆ. ಇದರಿಂದಾಗಿ ರಕ್ತದಲ್ಲಿ ಗ್ಲುಕೋಸ್(Blood Glucose) ಹೆಚ್ಚಾಗಲು ಪ್ರಾರಂಭಿಸುತ್ತೆ  ಮತ್ತು ಮಧುಮೇಹ ಉಂಟಾಗುತ್ತೆ.

47
ನಿಯಮಿತ ಟೆಸ್ಟ್(Test) ಮಾಡಿಸಲು ಮರೆಯದಿರಿ

ಕೆಲವು ತಪ್ಪುಗಳನ್ನು ಮಾಡೋದರಿಂದ ಮಧುಮೇಹ ಗಂಭೀರವಾಗುತ್ತಿದೆ. ರೋಗಿಗಳು ರಕ್ತದ ಸಕ್ಕರೆಯ ನಿಯಮಿತ ಟೆಸ್ಟ್ ಮಾಡೋದಿಲ್ಲ ಮತ್ತು ಅದು ನಿಯಂತ್ರಣ ಮೀರುತ್ತೆ. ಪರೀಕ್ಷೆಯ ಮೂಲಕ, ಮಧುಮೇಹವು ನಿಯಂತ್ರಣದಲ್ಲಿದೆಯೇ ಅಥವಾ ಇಲ್ಲವೇ ಎಂದು ನಿಮಗೆ ತಿಳಿಯುತ್ತೆ. ಹಾಗಾಗಿ ಟೈಂಗೆ ಸರಿಯಾಗಿ ಟೆಸ್ಟ್ ಮಾಡಿಸಬೇಕು.  

57
ಸರಿಯಾದ ವ್ಯಾಯಾಮ(Exercise) ಮತ್ತು ಅಹಾರ ಸೇವನೆ

ಮಧುಮೇಹ ಹೊಂದಿರುವ ಜನರು ವ್ಯಾಯಾಮ ಮಾಡದಿರುವ ತಪ್ಪನ್ನು ಮಾಡಬಾರದು. ಯಾಕಂದ್ರೆ, ಸರಿಯಾದ ಆಹಾರ ಮತ್ತು ಸಾಕಷ್ಟು ವ್ಯಾಯಾಮವು ಮಧುಮೇಹ ಗಂಭೀರವಾಗೋದನ್ನು ತಡೆಯುತ್ತೆ. ಅದರ ಜೊತೆಗೆ ಲಘು ವ್ಯಾಯಾಮವು ಹೃದಯಾಘಾತ ಅಥವಾ ಮಧುಮೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳವನ್ನು ತಡೆಯುತ್ತೆ.

67
ವೈದ್ಯರನ್ನು ಭೇಟಿ ಮಾಡುತ್ತಲೇ ಇರಿ

ರಕ್ತದ ಸಕ್ಕರೆಯನ್ನು ಪರೀಕ್ಷಿಸೋದು ಮಾತ್ರವಲ್ಲ, ನಿಯಮಿತವಾಗಿ ವೈದ್ಯರನ್ನು ಭೇಟಿಯಾಗುತ್ತಲೇ ಇರಬೇಕು. ಯಾಕಂದ್ರೆ, ಮಧುಮೇಹದಿಂದಾಗಿ ಔಷಧಿ ಮತ್ತು ಆಹಾರಕ್ರಮ(Food) ಬದಲಾಯಿಸುವ ಅಗತ್ಯವನ್ನು ಕಾಲಕಾಲಕ್ಕೆ ಅನುಭವಿಸಬಹುದು. ಇದು ವೈದ್ಯರಿಗೆ ಚೆನ್ನಾಗಿ ತಿಳಿದಿರುತ್ತೆ. ಈ ಬಗ್ಗೆ ವೈದ್ಯರು ಸಲಹೆ ನೀಡುತ್ತಾರೆ.

77
ಮೂತ್ರವಿಸರ್ಜನೆ(Urination) ಮತ್ತು ಬಾಯಾರಿಕೆ

ಮಧುಮೇಹ ಇದ್ದಾಗ, ದೇಹವು ಕೆಲವು ರೋಗ ಲಕ್ಷಣಗಳನ್ನು ತೋರಿಸುತ್ತೆ. ಈ ರೋಗಲಕ್ಷಣಗಳನ್ನು ಸರಿಯಾಗಿ ನೋಡಿಕೊಳ್ಳೋ ಮೂಲಕ,  ರೋಗದ ತೀವ್ರತೆಯನ್ನು ಪರಿಶೀಲಿಸಬಹುದು. ರಾತ್ರಿಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆ ಮಾಡಲು ಎದ್ದೇಳ ಬೇಕಾದರೆ ಅಥವಾ ತುಂಬಾ ಬಾಯಾರಿಕೆ ಅನುಭವಿಸಲು ಪ್ರಾರಂಭಿಸಿದರೆ, ಅದು ಮಧುಮೇಹ ಗಂಭೀರವಾಗುವುದರ ಸಂಕೇತವಾಗಬಹುದು, ಹುಷಾರ್! 

Read more Photos on
click me!

Recommended Stories