Cracked Heels And Health : ಒಡೆದ ಹಿಮ್ಮಡಿಗಳು ಹೊಟ್ಟೆಯ ಸಮಸ್ಯೆಯನ್ನು ಸೂಚಿಸುತ್ತಿರಬಹುದು!

First Published Jan 15, 2022, 11:34 AM IST

ಸತ್ತ ಚರ್ಮವನ್ನು ತೆಗೆಯಲು ವಿಫಲವಾದರೆ, ಪಾದಗಳನ್ನು ಸ್ವಚ್ಛವಾಗಿಡದಿರುವುದು ಮತ್ತು ಅತಿಯಾದ ಶೀತ ಹವಾಮಾನವು ಹಿಮ್ಮಡಿಗಳ ಛಿದ್ರಕ್ಕೆ ಕಾರಣವಾಗಬಹುದು. ಆದರೆ ಕೆಲವೊಮ್ಮೆ ಹೊಟ್ಟೆಯ ಕಾಯಿಲೆಗಳಿಂದಲೂ ಈ ಸಮಸ್ಯೆ ಉಂಟಾಗಬಹುದು.
 

ಹೊಟ್ಟೆಯ ಕಾಯಿಲೆಯಿಂದ ಉಂಟಾಗುವ ಹಿಮ್ಮಡಿಗಳ ಬಿರುಕು(Cracked Heels) ಸಮಸ್ಯೆಯನ್ನು ಗುರುತಿಸಲು ಕೆಲವು ಅಸಾಮಾನ್ಯ ರೋಗಲಕ್ಷಣಗಳನ್ನು ಪರಿಗಣಿಸಬೇಕಾಗುತ್ತದೆ. ಈ ರೋಗಲಕ್ಷಣಗಳು ನಿಮ್ಮ ಹೊಟ್ಟೆಯ ಆರೋಗ್ಯ ಸರಿಯಾಗಿಲ್ಲ ಎಂದು ತೋರಿಸುತ್ತವೆ.

ಹೊಟ್ಟೆ ತುಂಬಿದಾಗ ಪದೇ ಪದೇ ತೇಗು, ಹುಣ್ಣಾದ ನಾಲಿಗೆ, ಮೊಡವೆ(Pimples), ಗುಳ್ಳೆಗಳು, ಆಮ್ಲೀಯತೆ, ಹೊಟ್ಟೆ ಉಬ್ಬರ ಮತ್ತು ತಲೆನೋವು ಹೊಟ್ಟೆಯ ಸಮಸ್ಯೆಗಳ ಚಿಹ್ನೆಗಳಾಗಿವೆ. ಮತ್ತು ಬಿರುಕು ಬಿಟ್ಟ ಹಿಮ್ಮಡಿಗಳು ನಿಮಗೆ ಹೊಟ್ಟೆಯ ಸಮಸ್ಯೆ ಇದೆ ಎಂದು ಹೇಳುತ್ತವೆ. 

ಪಾದಗಳು ಬಿರುಕು ಬಿಡುವುದು ಇದು ಕಳಪೆ ಕರುಳಿನ ಆರೋಗ್ಯದ ಸಂಕೇತವಾಗಿದೆ. ನೀವು ಆಗಾಗ್ಗೆ ಬಿರುಕು ಬಿಟ್ಟ ಹಿಮ್ಮಡಿಗಳ ಸಮಸ್ಯೆ ಎದುರಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ. ಇಲ್ಲವಾದರೆ ಹೊಟ್ಟೆಯ ಸಮಸ್ಯೆ ಹೆಚ್ಚಾಗಬಹುದು. ಜೀರ್ಣಕ್ರಿಯೆ(Digestion) ಸಮಸ್ಯೆ ಹೆಚ್ಚುತ್ತದೆ. 

ಈ ಮನೆಮದ್ದುಗಳನ್ನು ಮಾಡಿ
ಬಿರುಕು ಬಿಟ್ಟ ಹಿಮ್ಮಡಿಗಳ ಸಮಸ್ಯೆ ಸಾಮಾನ್ಯ ಕಾರಣಗಳಿಂದ ಆಗಿದ್ದರೆ ಕೆಲವು ಮನೆಮದ್ದುಗಳನ್ನು ಸಹ ತೆಗೆದುಕೊಳ್ಳಬಹುದು. ಇದು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ(Winter) ಕರುಳಿನ ಸಮಸ್ಯೆ ಸಾಮಾನ್ಯವಾಗಿದೆ. ಆದುದರಿಂದ ಅದರ ಬಗ್ಗೆಯೂ ಗಮನ ಹರಿಸುವುದು ಮುಖ್ಯವಾಗಿದೆ. 

ಎಣ್ಣೆಯಿಂದ ಮಸಾಜ್(Oil massage)
ಹಿಮ್ಮಡಿಗಳಿಗೆ ಎಣ್ಣೆ ಯಿಂದ ಮಸಾಜ್ ಮಾಡುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಇದರಿಂದ ಪಾದಗಳಿಗೆ ತೇವಾಂಶವು ಉಳಿಯುತ್ತದೆ. ಇದರಿಂದ ಪಾದವು ಮಾಯಿಶ್ಚರೈಸ್ ಆಗಿರುತ್ತದೆ. ಇದರಿಂದ ಹಿಮ್ಮಡಿ ಒಡೆಯುವುದಿಲ್ಲ. 

ಗ್ಲಿಸರಿನ್ ಮತ್ತು ರೋಸ್ ವಾಟರ್(Rose Water) ಹಚ್ಚಿ
ಗ್ಲಿಸರಿನ್ ಉತ್ತಮ ಮಾಯಿಶ್ಚರೈಸರ್ ಆಗಿದೆ. ಇದು ಬಿರುಕುಬಿಟ್ಟ ಹಿಮ್ಮಡಿಗಳನ್ನು ಗುಣಪಡಿಸುತ್ತದೆ. ಒಂದು ಚಮಚ ಗ್ಲಿಸರಿನ್ ತೆಗೆದುಕೊಳ್ಳಿ ಮತ್ತು ಅದಕ್ಕೆ ಎರಡು ಟೀ ಚಮಚ ರೋಸ್ ವಾಟರ್ ಸೇರಿಸಿ. ಇದಕ್ಕೆ ಒಂದು ಟೀ ಚಮಚ ನಿಂಬೆ ರಸವನ್ನು ಸೇರಿಸಿ. ಮಲಗುವ ಮೊದಲು ಈ ಮಿಶ್ರಣದಿಂದ ಹಿಮ್ಮಡಿಗಳನ್ನು ಮಸಾಜ್ ಮಾಡಿ ಮತ್ತು ಒಣಗಿದಾಗ ಮೇಲಿನಿಂದ ಸಾಕ್ಸ್ ಧರಿಸಿ. ಇದು ಸಹಾಯ ಮಾಡುತ್ತದೆ.

ಅಕ್ಕಿ ಹಿಟ್ಟು(Rice Flour)
ಇದಕ್ಕೆ ಒಂದು ಚಮಚ ಅಕ್ಕಿ ಹಿಟ್ಟು, ಎರಡು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆ ರಸ ಸೇರಿಸಿ. ಈ ಪೇಸ್ಟ್ ನಿಂದ ಹಿಮ್ಮಡಿಗಳನ್ನು ಸ್ಕ್ರಬ್ ಮಾಡಿ. ಪಾದಗಳನ್ನು ಉಗುರುಬೆಚ್ಚಗಿನ ನೀರಿನಲ್ಲಿ 15 ನಿಮಿಷಗಳ ಕಾಲ ಇರಿಸುವುದು ಸಹ ಸಹಾಯ ಮಾಡುತ್ತದೆ. ಇದು ಸತ್ತ ಚರ್ಮದ ಎಕ್ಸ್ ಫೋಲಿಯೇಶನ್ ಗೆ ಸಹಾಯ ಮಾಡುತ್ತದೆ.
 

click me!