ಹೊಟ್ಟೆಯುಬ್ಬರ ಗ್ಯಾಸ್‌ ಸಮಸ್ಯೆಗೆ ರಾಮಬಾಣ ಓಮ ಕಾಳು/ ಅಜ್ವಾನ

First Published | Jan 2, 2025, 2:59 PM IST

ಬಾಯಿ ವಾಸನೆ, ಗ್ಯಾಸ್ಟ್ರಿಕ್ ಸಮಸ್ಯೆಗಳು ತುಂಬಾ ಜನರನ್ನ ಕಾಡ್ತವೆ. ಈ ಸಮಸ್ಯೆಗಳಿಗೆ ಓಮ ಕಾಳು ಅಥವಾ ಅಜ್ವಾನ ರಾಮಬಾಣವಾಗಿ ಕೆಲಸ ಮಾಡುತ್ತೆ.

ಇತ್ತೀಚಿನ ದಿನಗಳಲ್ಲಿ ಜೀರ್ಣಕ್ರಿಯೆ ಸಮಸ್ಯೆಗಳು ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿದ್ದು, ಸಾಮಾನ್ಯ ಕಾಯಿಲೆ ಎನಿಸಿದೆ. ಹಸಿವಿಲ್ಲದಿರುವುದು, ಅಜೀರ್ಣ, ಮಲಬದ್ಧತೆ, ಗ್ಯಾಸ್ಟ್ರಿಕ್ ಇವೆಲ್ಲಾ ಸಾಮಾನ್ಯ ಸಮಸ್ಯೆಗಳಾಗಿವೆ. ಕೆಟ್ಟ ಆಹಾರ ಪದ್ಧತಿ ಮತ್ತು ಜೀವನಶೈಲಿ ಇದಕ್ಕೆ ಕಾರಣ.

ಕೆಲವರಿಗೆ ಬೆಳಗ್ಗೆ ಹೊಟ್ಟೆ ಸರಿಯಾಗಿ ಖಾಲಿ ಆಗೋದಿಲ್ಲ. ಇನ್ನು ಕೆಲವರಿಗೆ ತಿಂದ ಕೂಡಲೇ ಗ್ಯಾಸ್ಟ್ರಿಕ್ ಆಗುತ್ತೆ. ಬಾಯಿ ವಾಸನೆ ಕೂಡ ಜೀರ್ಣಕ್ರಿಯೆ ಸಮಸ್ಯೆಯ ಸೂಚನೆ ಅಂತಾರೆ ತಜ್ಞರು. ಆದರೆ ಓಮ ಅಥವಾ ಅಜ್ವಾನವೂ ಈ ಸಮಸ್ಯೆಗಳಿಗೆ ಒಳ್ಳೆಯ ಪರಿಹಾರ ನೀಡುತ್ತದೆ.

Tap to resize

ಓಮ ಅಥವಾ ಅಜ್ವಾನದ ಸೇವನೆಯೂ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಗ್ಯಾಸ್ಟ್ರಿಕ್, ಬಾಯಿ ವಾಸನೆ ಕಡಿಮೆ ಮಾಡುತ್ತದೆ. ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ. ಓಮಕಾಳನ್ನು ಹೇಗೆಲ್ಲಾ ಉಪಯೋಗಿಸಬಹುದು ಅಂತ ನೋಡೋಣ.

ಗ್ಯಾಸ್, ಬಾಯಿ ವಾಸನೆಗೆ ಅಜ್ವಾನ ಹೇಗೆ ಉಪಯೋಗಿಸಬೇಕು?

ಊಟದ ನಂತರ ಹುರಿದ ಅಜ್ವಾನವನ್ನು ಕಲ್ಲುಪ್ಪಿನ ಜೊತೆ ಬಿಸಿ ನೀರಿನಲ್ಲಿ ಸೇವಿಸಬಹುದು. ಅಥವಾ ಇದರ ಟೀ ಮಾಡಿ ಕುಡಿಯಬಹುದು.

ಓಮ ಕಾಳನ್ನು ಅಡುಗೆಯಲ್ಲಿ ಬಳಸಬಹುದು, ರೊಟ್ಟಿ ಹಿಟ್ಟಿನಲ್ಲಿ ಬೆರೆಸಬಹುದು. ಅನ್ನದ ಜೊತೆ ಹುರಿದು ತಿನ್ನಬಹುದು. ಇದರಿಂದ ಗ್ಯಾಸ್, ಬಾಯಿ ವಾಸನೆ ಕಡಿಮೆಯಾಗುತ್ತದೆ. ಓಮದಲ್ಲಿರುವ ಔಷಧೀಯ ಗುಣಗಳು ಗ್ಯಾಸ್, ಆಸಿಡಿಟಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ.

ಓಮದಲ್ಲಿರುವ ಆಂಟಿಮೈಕ್ರೊಬಿಯಲ್ ಗುಣಗಳು ಆಸಿಡಿಟಿ, ಹೊಟ್ಟೆ ನೋವಿಗೆ ಪರಿಹಾರ ನೀಡುತ್ತವೆ. ಮಲಬದ್ಧತೆ ಸಮಸ್ಯೆಗೂ ಓಮಕಾಳು ಒಳ್ಳೆಯದು. ಆದರೂ ಸಮಸ್ಯೆ ಮುಂದುವರಿದರೆ ವೈದ್ಯರನ್ನು ಭೇಟಿ ಮಾಡಿ.

Latest Videos

click me!