ಭಾರತೀಯರನ್ನು ಯಾವ ಪೋಷಕಾಂಶ ಹೆಚ್ಚು ಕಾಡುತ್ತೆ ಗೊತ್ತಾ?

First Published | Mar 26, 2021, 4:13 PM IST

ಉತ್ತಮ ಪೌಷ್ಟಿಕತೆ ಆರೋಗ್ಯಕರ ಹಾಗೂ ಉತ್ತಮ ಜೀವನಕ್ಕೆ ತುಂಬಾ ಮುಖ್ಯ. ಆದರೆ, ರಿಚ್ ಫುಡ್, ಸ್ಥಳೀಯ, ವರ್ಣರಂಜಿತ  ಹೀಗೆ ಬೇರೆ ಬೇರೆ ರೀತಿಯ ಆಹಾರ ಸೇವನೆ ಹೊರತಾಗಿಯೂ, ಅನೇಕ ಭಾರತೀಯರು ಆರೋಗ್ಯವಾಗಿರುವುದಿಲ್ಲ. ಏಕೆಂದರೆ ನಮ್ಮಲ್ಲಿ ಹಲವು ಅವಶ್ಯಕ ಪೋಷಕಾಂಶಗಳು ಮತ್ತು ಖನಿಜಗಳ ಕೊರತೆ ಇದೆ.

ಸಾಮಾನ್ಯವಾಗಿ ಭಾರತದ ಆಹಾರ ಪದ್ಧತಿಯಲ್ಲಿ ಮೈಕ್ರೋನ್ಯೂಟ್ರಿಯೆಂಟ್‌ಗಳನ್ನು ಪಡೆಯುವುದು ಕಷ್ಟ. ಇದರಿಂದ ಭಾರತೀಯರು ರಕ್ತಹೀನತೆ, ಮೂಳೆ ಹಾನಿ ಮತ್ತು ಸೂಕ್ಷ್ಮ ಆರೋಗ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ದರಿಂದ ಭಾರತೀಯರಲ್ಲಿ ಕಾಡೋ ಪೋಷಕಾಂಶದ ಕೊರತೆ ಬಗ್ಗೆ ತಿಳಿದುಕೊಳ್ಳೋಣ.
ಕಬ್ಬಿಣಭಾರತೀಯರಲ್ಲಿ ಕಬ್ಬಿಣದ ಕೊರತೆ ಗಮನಾರ್ಹವಾಗಿರುವುದನ್ನು ಕಾಣಬಹುದು. ಇದರಿಂದ ಮಹಿಳೆಯರು ಆರೋಗ್ಯ ಹದಗೆಟ್ಟು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಪೌಷ್ಟಿಕಾಂಶದ ಮಾರ್ಗಸೂಚಿಗಳ ಪ್ರಕಾರ, 50 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗೆ ದಿನಕ್ಕೆ 8.7 ಮಿ.ಗ್ರಾಂ ಕಬ್ಬಿಣಅಂಶದ ಅವಶ್ಯಕತೆ ಇದೆ, ಆದರೆ ಯುವತಿಯರು ದಿನಕ್ಕೆ ಕನಿಷ್ಠ 14.6 ಮಿಗ್ರಾಂ ಕಬ್ಬಿಣ ಅಂಶ ಬೇಕಾಗುತ್ತದೆ.
Tap to resize

ಪ್ರೋಟೀನ್ನಮ್ಮ ದೇಹದ ಶಕ್ತಿಯಲ್ಲಿ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ, ಆದರೆ ಇನ್ನೂ ಶೇ.80ರಷ್ಟು ಭಾರತೀಯರಲ್ಲಿ ಪ್ರೊಟೀನ್ ಕೊರತೆ ಇದೆ. ಪೌಷ್ಟಿಕತೆಯ ಮಾರ್ಗಸೂಚಿಗಳ ಪ್ರಕಾರ, ಪ್ರತಿ ವ್ಯಕ್ತಿಯೂ ಕಿಲೋ ತೂಕಕ್ಕೆ ಒಂದು ಗ್ರಾಂ ಪ್ರೋಟೀನ್ ಅನ್ನು ಸೇವಿಸಬೇಕಾಗುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಎಲ್ಲಾ ರೀತಿಯ ಪ್ರೋಟೀನ್‌ಗಳನ್ನು ಪಡೆಯುವತ್ತ ಗಮನ ಹರಿಸಬೇಕು.
ಫೋಲೇಟ್ಹಸಿರು ಸೊಪ್ಪು ಮತ್ತು ದ್ವಿದಳ ಸಸ್ಯಗಳಲ್ಲಿ ಫೋಲೇಟ್ ನೈಸರ್ಗಿಕವಾಗಿ ದೊರೆಯುತ್ತದೆ, ಆದರೆ ಇದರ ಹೊರತಾಗಿಯೂ, ಭಾರತೀಯರಲ್ಲಿ ಫೋಲೇಟ್ ಇರುವುದಿಲ್ಲ. ಗರ್ಭಾವಸ್ಥೆಯಲ್ಲಿ ಫೋಲೇಟ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಯಾವುದೇ ಕೊರತೆ ಇದ್ದರೆ ತಕ್ಷಣ ಚಿಕಿತ್ಸೆ ನೀಡಬೇಕು.
ವಿಟಮಿನ್-ಡಿವಿಟಮಿನ್ ಡಿ ಕೊಬ್ಬಿನಲ್ಲಿ ಕರಗುವ ಖನಿಜವಾಗಿದ್ದು, ಮೂಳೆ, ಚರ್ಮ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ರೋಗಗಳನ್ನು ನಿವಾರಿಸುತ್ತದೆ. ವಿಷಾದದ ಸಂಗತಿಯೆಂದರೆ, ವಿಟಮಿನ್ ಡಿ ಕೊರತೆ ದೇಶದ ಬಹುತೇಕ ಜನರಲ್ಲಿದೆ. ಈ ನಷ್ಟವನ್ನು ವಿಟಮಿನ್-ಡಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವ ಮೂಲಕ ತಪ್ಪಿಸಬಹುದು.
ವಿಟಮಿನ್ ಬಿ12B12 ಕೊರತೆಯು ರಕ್ತ ಸಂಚಾರ, ಮೆದುಳಿನ ಆರೋಗ್ಯ ಮತ್ತು ನರಗಳಿಗೆ ತೊಂದರೆ ಉಂಟು ಮಾಡಬಹುದು. ಸಸ್ಯಾಹಾರವು ಕಡಿಮೆ ಆಯ್ಕೆಗಳನ್ನು ಹೊಂದಿದೆ, ಆದ್ದರಿಂದ ಆಹಾರವನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ. ವಿವಿಧ ಧಾನ್ಯಗಳು, ನವಣೆ ಮತ್ತು ತರಕಾರಿಗಳನ್ನು ಸೇವಿಸಬಹುದು. ಇದನ್ನು ಪ್ರತಿದಿನವೂ ನಿಯಮಿತವಾಗಿ ಸೇವಿಸಬೇಕು.
ವಿಟಮಿನ್-ಎಮಕ್ಕಳಲ್ಲಿ ವಿಟಮಿನ್ ಎ ಕೊರತೆ ಸಾಮಾನ್ಯ ಮತ್ತು ಇದರ ಕೊರತೆಯು ಅವರ ಬೆಳವಣಿಗೆಗೆ ತೊಂದರೆ ಉಂಟು ಮಾಡಬಹುದು. ವಿಟಮಿನ್ ಎ ಕೊರತೆಯು ಮೆದುಳಿನಲ್ಲಿ ಕಣ್ಣಿನ ಬೆಳಕನ್ನು ದುರ್ಬಲಗೊಳಿಸಬಹುದು ಮತ್ತು ಕಣ್ಣಿನ ತೊಂದರೆಗಳನ್ನು ಉಂಟು ಮಾಡಬಹುದು. ಆದ್ದರಿಂದ, ಆಹಾರದ ಸಹಾಯದಿಂದ ಈ ಮೂಲಭೂತ ವಿಟಮಿನ್ ಕೊರತೆಯನ್ನು ಎದುರಿಸುವುದು ತುಂಬಾ ಮುಖ್ಯ.
ಸತುಹೊಸ ಅಧ್ಯಯನಗಳು ಸತುವಿನ ಕೊರತೆ ಭಾರತದಲ್ಲಿ ಹೆಚ್ಚಾಗುತ್ತಿದೆ ಎಂದು ಹೇಳಿವೆ. ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ರೋಗಗಳ ಸಾಧ್ಯತೆ ಹೆಚ್ಚುತ್ತದೆ. ಪುರುಷರು 11 ಮಿ.ಗ್ರಾಂ. ಮಹಿಳೆಯರು 8 ಮಿ.ಗ್ರಾಂ ಸತುವನ್ನು ಸೇವಿಸುತ್ತಾರೆ.

Latest Videos

click me!