ಲವಂಗ ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೆಚ್ಚು ತಿಂದ್ರೆ ಏನಾಗುತ್ತೆ? ದಿನಕ್ಕೆ ಎಷ್ಟು ತಿನ್ನಬಹುದು?

Ravi Janekal   | ANI
Published : Nov 15, 2026, 10:24 AM IST

ನಿಯಮಿತವಾಗಿ ಲವಂಗ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಪಲಾವ್, ಕೇಸರಿಬಾತ್ ಕೆಲವು ಆಹಾರದಲ್ಲಿ ಲವಂಗ್ ಸೇರಿಸಿದರೆ ಅದರ ರುಚಿ ಪರಿಮಳವೇ ಬೇರೆ. ಲವಂಗ ಸೇವನೆ ಆರೋಗ್ಯಕ್ಕೆ ಒಳ್ಳೆಯದಾದರೂ ಅತಿಯಾಗಿ ತಿನ್ನುವುದು ಕೂಡ ಒಳ್ಳೆಯದಲ್ಲ. ಹಾಗಾದರೆ ದಿನಕ್ಕೆ ಎಷ್ಟು ತಿನ್ನಬಹುದು?

PREV
16
ಲವಂಗ: ಆರೋಗ್ಯಕ್ಕೆ ಒಳ್ಳೆಯದು, ಅತಿಯಾದರೆ ಸಮಸ್ಯೆ

ನಿಯಮಿತವಾಗಿ ಲವಂಗ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಪಲಾವ್, ಕೇಸರಿಬಾತ್ ಕೆಲವು ಆಹಾರದಲ್ಲಿ ಲವಂಗ್ ಸೇರಿಸಿದರೆ ಅದರ ರುಚಿ ಪರಿಮಳವೇ ಬೇರೆ. ಲವಂಗ ಸೇವನೆ ಆರೋಗ್ಯಕ್ಕೆ ಒಳ್ಳೆಯದಾದರೂ ಅತಿಯಾಗಿ ತಿನ್ನುವುದು ಕೂಡ ಒಳ್ಳೆಯದಲ್ಲ. ಹಾಗಾದರೆ ದಿನಕ್ಕೆ ಎಷ್ಟು ಲವಂಗ ತಿಂದರೆ ಒಳ್ಳೆಯದು? ಅತಿಯಾಗಿ ತಿನ್ನುವುದರಿಂದಾಗುವ ಸಮಸ್ಯೆಗಳೇನು? ಇಲ್ಲಿ ತಿಳಿಯಿರಿ.

26
ಲವಂಗ ಹೆಚ್ಚು ತಿಂದರೆ ಏನಾಗುತ್ತೆ?

ಲವಂಗ ಔಷಧಿಯ ಗುಣ ಹೊಂದಿದೆ. ಅಲ್ಲದೆ ನಿಯಮಿತವಾಗಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಹೆಚ್ಚೆಚ್ಚು ತಿಂದಷ್ಟು ಹೆಚ್ಚು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ತಪ್ಪು ಕಲ್ಪನೆ ಬೇಡ. ಲವಂಗ ಅತಿಯಾಗಿ ತಿನ್ನುವುದರಿಂದ ಕೆಟ್ಟದಾಗಿ ಪರಿಣಮಿಸುತ್ತದೆ. ಅಂದರೆ ತಜ್ಞರು ಹೇಳುವ ಪ್ರಕಾರ ಲವಂಗದಲ್ಲಿರುವ ಯುಜೆನಾಲ್ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಸಮಸ್ಯೆಯೆ ಹೆಚ್ಚು. ಅತಿಯಾಗಿ ಲವಂಗ ತಿನ್ನುವುದರಿಂದ ಆಗುವ ಸೈಡ್‌ ಎಫೆಕ್ಟ್‌ಗಳೇನು ಅನ್ನೋದನ್ನು ಇಲ್ಲಿ ತಿಳಿಯೋಣ.

36
ದಿನಕ್ಕೆ ಎಷ್ಟು ಲವಂಗ ತಿನ್ನಬಹುದು?

ಲವಂಗ ಸ್ವಲ್ಪ ಖಾರವಾಗಿರುತ್ತೆ. ಇವುಗಳನ್ನು ಹೆಚ್ಚು ತಿನ್ನುವುದರಿಂದ ಕೆಲವರಿಗೆ ಎದೆಯುರಿ, ಅಜೀರ್ಣ, ಆಮ್ಲಿಯತೆ ಸಮಸ್ಯೆ ಶುರುವಾಗುತ್ತೆ. ಹೆಚ್ಚು ತಿಂದರೆ ವಾಕರಿಕೆ ಬರಬಹುದು ಹೀಗಾಗಿ ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಹೊಂದಿರುವ ಜನರು ಲವಂಗ ದಿನಕ್ಕೆ ಒಂದೆರಡು ತಿನ್ನುವುದು ಒಳ್ಳೆಯದು, ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ.

46
ಲವಂಗ ಯಾರು ತಿನ್ನಬಾರದು?

ಲವಂಗ ನೇರವಾಗಿ ಬಾಯಲ್ಲಿ ಹಾಕಿ ಅಗೆದು ತಿಂದಾಗ ಬಾಯಲ್ಲಿ ಸ್ವಲ್ಪ ಉರಿ, ಚುರ್ ಎನಿಸುವಂತಾಗುತ್ತೆ. ಕೆಲವರಿಗೆ ಅಲರ್ಜಿ ಉಂಟಾಗುತ್ತೆ. ಅಲ್ಲದೆ ಲವಂಗದಲ್ಲಿನ ಯುಜೆನಾಲ್‌ನಿಂದಾಗಿ ರಕ್ತ ಹೆಪ್ಪುಗಟ್ಟುವಿಕೆಯ ಮೇಲೆ ಪರಿಣಾಮ ಬೀರಬಹುದು. ರಕ್ತ ತೆಳುವಾಗಿಸುವ ಔಷದ ತೆಗೆದುಕೊಳ್ಳುವವರು ಲವಂಗ ಸೇವಿಸಿದಂತೆ ಎಚ್ಚರಿಕೆ ವಹಿಸಬೇಕು.

ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿರುವವರು ಹೆಚ್ಚಿನ ಪ್ರಮಾಣದಲ್ಲಿ ಲವಂಗ ತಿನ್ನುವುದಾಗಲಿ, ಲವಂಗದ ಎಣ್ಣೆ ಸೇವಿಸುವುದಾಗಲಿ ಒಳ್ಳೆಯದಲ್ಲ. ಲವಂಗ ತಿನ್ನುವ ಮುನ್ನ ಅಂಥವರು ವೈದ್ಯರ ಸಲಹೆ ಪಡೆದುಕೊಳ್ಳುವುದು ತುಂಬಾ ಮುಖ್ಯ.

56
ಆರೋಗ್ಯಕ್ಕಾಗಿ ದಿನ ಎಷ್ಟು ಲಂಗ ತಿನ್ನುವುದು ಒಳ್ಳೆಯದು?

ಅತಿಯಾಗಿ ಲವಂಗ ತಿನ್ನುವುದರಿಂದ ಅಥವಾ ಲವಂಗದ ಎಣ್ಣೆ ಸೇವನೆಯಿಂದಾಗಿ ಕಿಡ್ನಿ ಮೇಲೆಯೂ ಪರಿಣಾಮ ಬೀರುತ್ತೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮಾಣ ಇದಕ್ಕಿಂತ ತುಂಬಾ ಕಡಿಮೆ. ಹೀಗಾಗಿ ಆರೋಗ್ಯಕ್ಕಾಗಿ ಅತಿ ಹೆಚ್ಚು ಲವಂಗ ತಿನ್ನುವ ಅವಶ್ಯಕತೆಯಿಲ್ಲ. ದಿನಕ್ಕೆ ಒಂದು ಅಥವಾ ಎರಡು ಲವಂಗ ತಿನ್ನಬಹುದು. ಅದು ಅಡುಗೆ, ಚಹಾ, ಅಥಾವ ಕೆಲವು ಸಂದರ್ಭಗಲ್ಲಿ ಊಟದ ಬಳಿಕ ಒಂದು ಲವಂಗ ತಿನ್ನುವುದು ಈ ರೀತಿ ನಿಯಮಿತವಾಗಿ ತಿಂದರೆ ಸಾಕು.

66
ಇವರು ವೈದ್ಯರ ಸಲಹೆ ಪಡೆಯದೆ ಲವಂಗ ತಿನ್ನಬಾರದು

ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಲವಂಗದ ಎಣ್ಣೆಯನ್ನು ನೇರವಾಗಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಅಪಾಯಕಾರಿ. ಅದರಲ್ಲೂ ಮಕ್ಕಳು, ಗರ್ಭಿಣಿಯರು, ಕಿಡ್ನಿ ಸಮಸ್ಯೆ ಇರುವವರು ಅಥವಾ ರಕ್ತಸ್ರಾವ ಅಸ್ವಸ್ಥತೆ ಇರೋರು ವೈದ್ಯರ ಸಲಹೆ ಪಡೆಯದೆ ತಿನ್ನಲೇಬಾರದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories