Hair Care Tips: ಕೂದಲು ಕಪ್ಪಾಗಿ, ದಟ್ಟವಾಗಿ ಮತ್ತು ಹೊಳೆಯುವಂತೆ ಕಾಣಬೇಕೆಂದರೆ ಹೊರಗಿನಿಂದ ಮಾಡುವ ಆರೈಕೆ ಮಾತ್ರ ಸಾಕಾಗುವುದಿಲ್ಲ. ನಾವು ಸೇವಿಸುವ ಆಹಾರವೂ ಕೂದಲಿನ ಆರೋಗ್ಯ ಮತ್ತು ಅದರ ನೈಸರ್ಗಿಕ ಬಣ್ಣವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಂತಹ ಆಹಾರಗಳು ಯಾವುವು ನೋಡೋಣ.
ಕೂದಲಿನ ಬಣ್ಣವನ್ನು ಮೆಲನಿನ್ (Melanin) ಎಂಬ ವರ್ಣದ್ರವ್ಯ ನಿರ್ಧರಿಸುತ್ತದೆ. ವಯಸ್ಸಾಗುವಿಕೆ, ಕೆಲವು ಪೋಷಕಾಂಶಗಳ ಕೊರತೆ ಹಾಗೂ ಒತ್ತಡದಂತಹ ಕಾರಣಗಳಿಂದ ಮೆಲನಿನ್ ಉತ್ಪಾದನೆ ಕಡಿಮೆಯಾಗಬಹುದು. ಇದರಿಂದ ಕೂದಲು ಬಿಳಿ ಅಥವಾ ಬೂದು ಬಣ್ಣಕ್ಕೆ ತಿರುಗಲು ಆರಂಭಿಸುತ್ತದೆ. ಇಂತಹ ಸಂದರ್ಭದಲ್ಲಿ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಆಹಾರ ಸೇವಿಸುವುದು ಕೂದಲಿನ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡಬಹುದು.
210
ಆಹಾರದಲ್ಲಿ ನೆಲ್ಲಿಕಾಯಿಯನ್ನು ಸೇರಿಸಿಕೊಳ್ಳಿ
ಕೂದಲಿನ ಆರೈಕೆಯ ವಿಷಯ ಬಂದಾಗ ಮೊದಲು ನೆನಪಾಗುವುದೇ ನೆಲ್ಲಿಕಾಯಿ. ಇದರಲ್ಲಿ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಕಬ್ಬಿಣದ ಅಂಶ ಹೇರಳವಾಗಿವೆ. ಕೂದಲಿನ ನೈಸರ್ಗಿಕ ಬಣ್ಣವನ್ನು ಕಾಪಾಡಲು ಮತ್ತು ಅಕಾಲಿಕವಾಗಿ ಕೂದಲು ಬಿಳಿಯಾಗುವ ಸಮಸ್ಯೆಯನ್ನು ನಿಯಂತ್ರಿಸಲು ಇದನ್ನು ಸೇವಿಸಿ.
310
ಕರಿಬೇವಿನ ಎಲೆಯನ್ನೂ ನಿರ್ಲಕ್ಷಿಸಬೇಡಿ
ಕರಿಬೇವಿನ ಎಲೆಗಳಲ್ಲಿ ಬೀಟಾ ಕ್ಯಾರೋಟಿನ್, ಪ್ರೋಟೀನ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಇವು ಕೂದಲಿನ ಬುಡದ ಆರೋಗ್ಯ ಮತ್ತು ನೈಸರ್ಗಿಕ ವರ್ಣದ್ರವ್ಯಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ಪೂರಕವಾಗಬಹುದು. ಕರಿಬೇವಿನ ಎಲೆಗಳನ್ನು ಅಡುಗೆಯಲ್ಲಿ ಬಳಸುವುದರ ಜೊತೆಗೆ ತೆಂಗಿನ ಎಣ್ಣೆಯೊಂದಿಗೆ ಕುದಿಸಿ ಕೂದಲಿಗೆ ಹಚ್ಚಬಹುದು. ಚಟ್ನಿ ಮಾಡಿಯೂ ಸೇವಿಸಬಹುದು.
ಕೂದಲಿನ ನೈಸರ್ಗಿಕ ಬಣ್ಣವನ್ನು ಕಾಪಾಡುವ ಉದ್ದೇಶದಿಂದ ಆಹಾರದಲ್ಲಿ ಸೇರಿಸಿಕೊಳ್ಳಬಹುದಾದ ಮತ್ತೊಂದು ಪದಾರ್ಥವೆಂದರೆ ಕಪ್ಪು ಎಳ್ಳು. ಇದರಲ್ಲಿ ತಾಮ್ರ, ಕಬ್ಬಿಣ, ಮೆಗ್ನೀಸಿಯಂ ಮತ್ತು ಬಿ ವಿಟಮಿನ್‌ಗಳು ಹೇರಳವಾಗಿವೆ. ಈ ಪೋಷಕಾಂಶಗಳು ಕೂದಲಿನ ಬಲ ಮತ್ತು ಮೆಲನಿನ್‌ಗೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ಸಹಾಯ ಮಾಡಬಹುದು.
510
ಕ್ಯಾರೆಟ್ ಮತ್ತು ಬೀಟ್‌ರೂಟ್ ಸೇವಿಸಿ
ಕ್ಯಾರೆಟ್‌ನಲ್ಲಿ ವಿಟಮಿನ್ ಎ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿದ್ದು, ಇವು ನೆತ್ತಿಯ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ಕ್ಯಾರೆಟ್ ಅನ್ನು ಜ್ಯೂಸ್, ಸಲಾಡ್ ಅಥವಾ ಪಲ್ಯದ ರೂಪದಲ್ಲಿ ಸೇವಿಸಬಹುದು. ಬೀಟ್‌ರೂಟ್‌ನಲ್ಲಿ ಫೋಲೇಟ್, ನೈಟ್ರೇಟ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಬೀಟ್‌ರೂಟ್ ಜ್ಯೂಸ್, ಸಲಾಡ್ ಅಥವಾ ಬೇಯಿಸಿದ ರೂಪದಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
610
ಪಾಲಕ್ ಸೊಪ್ಪಿನಿಂದ ಸಿಗಲಿದೆ ಅಗತ್ಯ ಪೋಷಕಾಂಶ
ಪಾಲಕ್ ಸೊಪ್ಪಿನಲ್ಲಿ ಕಬ್ಬಿಣ, ಫೋಲೇಟ್ ಸೇರಿದಂತೆ ಕೂದಲಿನ ಸಾಮಾನ್ಯ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳಿವೆ. ಇವು ಕೂದಲಿನ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ಪಾಲಕ್ ಸೊಪ್ಪನ್ನು ಸಲಾಡ್, ಪಲ್ಯ, ಗ್ರೀನ್ ಜ್ಯೂಸ್ ಅಥವಾ ಸ್ಮೂದಿ ರೂಪದಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
710
ವಾಲ್‌ನಟ್ಸ್ ಮತ್ತು ಬಾದಾಮಿಯೂ ಪ್ರಯೋಜನಕಾರಿ
ವಾಲ್‌ನಟ್ಸ್‌ನಲ್ಲಿ ತಾಮ್ರ, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಬಯೋಟಿನ್ ಅಂಶಗಳಿವೆ. ಇವುಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಕೂದಲು ಮತ್ತು ನೆತ್ತಿಯ ಆರೋಗ್ಯಕ್ಕೆ ಪೂರಕವಾಗಬಹುದು. ಪ್ರತಿದಿನ 4-5 ವಾಲ್‌ನಟ್ಸ್ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬಹುದು.
810
ಮೊರಿಂಗಾ ಮತ್ತು ಮೊಟ್ಟೆಯನ್ನೂ ಆಹಾರದಲ್ಲಿ ಸೇರಿಸಿ
ಮೊರಿಂಗಾ ಅಥವಾ ನುಗ್ಗೆ ಸೊಪ್ಪಿನಲ್ಲಿ ಜಿಂಕ್, ಕಬ್ಬಿಣ ಮತ್ತು ವಿಟಮಿನ್ ಬಿ6 ಸೇರಿದಂತೆ ಹಲವು ಪೋಷಕಾಂಶಗಳಿವೆ. ಮೊರಿಂಗಾ ಪುಡಿಯನ್ನು ಸ್ಮೂದಿಗೆ ಸೇರಿಸಬಹುದು. ನುಗ್ಗೆ ಸೊಪ್ಪನ್ನು ಪಲ್ಯ ಅಥವಾ ಸೂಪ್ ರೂಪದಲ್ಲಿಯೂ ಸೇವಿಸಬಹುದು. ಇನ್ನು ಮೊಟ್ಟೆಯಲ್ಲಿ ಪ್ರೋಟೀನ್, ಬಯೋಟಿನ್ ಮತ್ತು ಬಿ ವಿಟಮಿನ್‌ಗಳಿವೆ. ಇವು ಕೂದಲಿನ ಸಾಮಾನ್ಯ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. .
910
ವಾರಕ್ಕೊಮ್ಮೆಯಾದರೂ ಕೂದಲಿಗೆ ಎಣ್ಣೆ ಹಚ್ಚಿ
ಆಹಾರ ಪದ್ಧತಿಯ ಜೊತೆಗೆ ಕೂದಲಿನ ಹೊರಗಿನ ಆರೈಕೆಯೂ ಮುಖ್ಯ. ವಾರಕ್ಕೊಮ್ಮೆಯಾದರೂ ಕೂದಲಿಗೆ ಎಣ್ಣೆ ಹಚ್ಚುವ ಅಭ್ಯಾಸ ರೂಢಿಸಿಕೊಳ್ಳಬಹುದು. ನೆಲ್ಲಿಕಾಯಿ, ಭೃಂಗರಾಜ ಮತ್ತು ಬ್ರಾಹ್ಮಿಯಂತಹ ಗಿಡಮೂಲಿಕೆಗಳನ್ನು ಒಳಗೊಂಡ ಎಣ್ಣೆಯಿಂದ ನೆತ್ತಿಗೆ ಮಸಾಜ್ ಮಾಡಬಹುದು.
1010
ಬಿಳಿಗೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಸಾಧ್ಯವೇ?
ಬಿಳಿಯಾದ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುವ ಯಾವುದೇ ಖಚಿತ ವಿಧಾನ ಇಲ್ಲ. ಆದರೆ ಸಮತೋಲಿತ ಆಹಾರ, ಸಾಕಷ್ಟು ಪೋಷಕಾಂಶಗಳ ಸೇವನೆ ಮತ್ತು ನಿಯಮಿತ ಕೂದಲಿನ ಆರೈಕೆಯಿಂದ ಕೂದಲಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಅಕಾಲಿಕವಾಗಿ ಕೂದಲು ಬಿಳಿಯಾಗುವ ಪ್ರಕ್ರಿಯೆಯ ವೇಗವನ್ನು ಕಡಿಮೆ ಮಾಡಲು ಸಹಾಯವಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.