ಪುರುಷರನ್ನು ಕಾಡುವ andropause, ಕೇರ್ ಲೆಸ್ ಮಾಡಿದ್ರೆ ಸೆಕ್ಸ್ ಲೈಫ್‌ಗೆ ಡೇಂಜರ್ !
First Published | Oct 4, 2022, 12:29 PM ISTವೃದ್ಧಾಪ್ಯವು ಜೀವನದ ಸ್ವಾಭಾವಿಕ ಭಾಗವಾಗಿದೆ, ವಯಸ್ಸಾದಂತೆ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತೆ, ಕೆಲವು ಒಳ್ಳೆಯದು ಮತ್ತು ಕೆಲವು ಕೆಟ್ಟವು. ಆ ಬದಲಾವಣೆಗಳಲ್ಲಿ, ಹಾರ್ಮೋನುಗಳ ಬದಲಾವಣೆ ಸ್ವಾಭಾವಿಕವಾಗಿ ಸಂಭವಿಸುತ್ತೆ. ಮಹಿಳೆಯರು ವಯಸ್ಸಾದಂತೆ ಹಾರ್ಮೋನುಗಳ ಬದಲಾವಣೆಗಳಿಗೆ ಒಳಗಾಗೋದು ಮಾತ್ರವಲ್ಲ, ಪುರುಷರೂ ವಯಸ್ಸಾದಂತೆ ಅಂತಹ ಕೆಲವು ರೋಗಲಕ್ಷಣಗಳನ್ನು ಅನುಭವಿಸ್ತಾರೆ ಎಂದು ವೈದ್ಯರು ಹೇಳ್ತಾರೆ. ಪುರುಷರಲ್ಲಿನ ಈ ಬದಲಾವಣೆಯನ್ನು ವೈದ್ಯಕೀಯ ಭಾಷೆಯಲ್ಲಿ 'ಆಂಡ್ರೋಪಾಸ್' ಎಂದು ಕರೆಯಲಾಗುತ್ತೆ.