ಚಳಿಗಾಲದಲ್ಲಿ ಮಕ್ಕಳಿಗೆ ತುಂಬಾ ಆರೋಗ್ಯ ಸಮಸ್ಯೆಗಳು ಬರುತ್ತೆ. ಮುಖ್ಯವಾಗಿ ಕೆಮ್ಮು, ನೆಗಡಿ, ಜ್ವರ ತರಹದ ಸಮಸ್ಯೆಗಳು ಜಾಸ್ತಿ. ಇದು ಸಾಮಾನ್ಯ ಎನಿಸಿದ್ದು. ಇದಲ್ಲದೆ ಈ ಸೀಸನ್‌ನಲ್ಲಿ ಕಿವಿ ನೋವು ಕೂಡ ಜಾಸ್ತಿ ಬರುತ್ತೆ. ಇದಕ್ಕೆ ಮುಖ್ಯ ಕಾರಣ ಚಳಿಗಾಲದಲ್ಲಿ ಬೀಸುವ ತಂಪಾದ ಗಾಳಿ. ಗಾಳಿಯಲ್ಲಿರುವ ಬ್ಯಾಕ್ಟೀರಿಯಾ, ವೈರಸ್‌ಗಳಿಂದಲೂ ಮಕ್ಕಳಿಗೆ ಕಿವಿ ನೋವು ಬರುತ್ತೆ.
ದೊಡ್ಡವರಿಗಿಂತ ಮಕ್ಕಳಿಗೆ ಕಿವಿ ನೋವು ಜಾಸ್ತಿ ಬರುತ್ತೆ ಕಾರಣ ಅವರ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು. ಚಳಿಗಾಲದಲ್ಲಿ ಮಕ್ಕಳಿಗೆ ಕೆಮ್ಮು, ನೆಗಡಿ, ಜ್ವರ ಬಂದಾಗಲೂ ಕಿವಿ ನೋವು ಬರುತ್ತೆ. ಅದ್ರಲ್ಲೂ ಅವರು ಕೆಮ್ಮಿದಾಗ ಅಥವಾ ಸೀನಿದಾಗ ಮಕ್ಕಳ ಕಿವಿಯಲ್ಲಿರುವ ಬ್ಯಾಕ್ಟೀರಿಯಾ, ವೈರಸ್‌ಗಳು ಕಿವಿಯೊಳಗೆ ತಡೆಯಲಾರದ ನೋವು ಉಂಟುಮಾಡುತ್ತೆ. ಈ ಕಿವಿ ನೋವಿನಿಂದ ಮಕ್ಕಳಿಗೆ ರಾತ್ರಿ ಸರಿಯಾಗಿ ನಿದ್ದೆ ಬರಲ್ಲ. ಜ್ವರ ಕೂಡ ಬರುತ್ತೆ. ಹಾಗಾಗಿ ಮಕ್ಕಳಿಗೆ ಕಿವಿ ನೋವು ಬಂದಾಗ ಅದನ್ನು ಹೇಗೆ ಕಡಿಮೆ ಮಾಡೋದು ಅಂತ ಈಗ ತಿಳಿದುಕೊಳ್ಳೋಣ ಬನ್ನಿ.
ಮಕ್ಕಳ ಕಿವಿ ನೋವು ಕಡಿಮೆ ಮಾಡಲು ಏನು ಮಾಡಬೇಕು?
1. ಮಕ್ಕಳಿಗೆ ಕಿವಿ ನೋವು ಬಂದಾಗ ಗಾಬರಿಯಾಗದೆ 10 ರಿಂದ 15 ನಿಮಿಷ ಕಿವಿ ಸುತ್ತ ಬಿಸಿ ನೀರಿನ ಚೀಲ ಇಡಿ. ಇದರಿಂದ ನೋವು ತುಂಬಾ ಕಡಿಮೆಯಾಗುತ್ತೆ.
2. ಕಿವಿ ನೋವಿನ ಜೊತೆಗೆ ಜ್ವರ ಇದ್ರೆ ವೈದ್ಯರನ್ನು ತೋರಿಸಿ ಔಷಧಿ ತೆಗೆದುಕೊಳ್ಳಿ.
3. ಕಿವಿ ನೋವು ಇದ್ದಾಗ ಮಕ್ಕಳಿಗೆ ನೀರು ಜಾಸ್ತಿ ಕುಡಿಸಿ. ಇದರಿಂದ ನೋವು ಕಡಿಮೆಯಾಗುತ್ತೆ.
ಗಮನದಲ್ಲಿಡಿ:
ಚಳಿಗಾಲದಲ್ಲಿ ತಂಪಾದ ಗಾಳಿಯಿಂದಲೇ ಕಿವಿ ನೋವು ಬರುತ್ತೆ. ಹಾಗಾಗಿ ಮಕ್ಕಳನ್ನು ಈ ಗಾಳಿಯಿಂದ ರಕ್ಷಿಸಬೇಕು. ಇದಕ್ಕಾಗಿ ಲೇಯರ್ಡ್ ಬಟ್ಟೆ ಹಾಕಬೇಕು. ಆದ್ರೆ ತುಂಬಾ ಬಟ್ಟೆ ಹಾಕಬಾರದು. ಚಳಿಗಾಲದಲ್ಲಿ ಮಕ್ಕಳ ಕಿವಿಗೆ ತಂಪಾದ ಗಾಳಿ ಹೋಗದ ಹಾಗೆ ಮುಚ್ಚಿಡಬೇಕು.ಮಕ್ಕಳಿಗೆ ಅತೀಯಾದ ಕಿವಿ ನೋವು ಇಲ್ಲದ ಹೊರತು ಕಿವಿಗೆ ಹತ್ತಿ ಇಡಬಾರದು. ಇದು ನೋವು ಹೆಚ್ಚಿಸುತ್ತೆ.
ಚಳಿಗಾಲದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವಾಗ ಕಿವಿಗೆ ನೀರು ಹೋಗದ ಹಾಗೆ ನೋಡಿಕೊಳ್ಳಿ. ಕಿವಿಗೆ ನೀರು ಹೋದ್ರೆ ಕಿವಿ ನೋವು ಬರುತ್ತೆ. ಸ್ನಾನ ಮಾಡಿಸಿದ ತಕ್ಷಣ ಟವೆಲ್‌ನಿಂದ ಒರೆಸಿ. ಈ ಸೀಸನ್‌ನಲ್ಲಿ ಮಕ್ಕಳಿಗೆ ಹಣ್ಣು, ತರಕಾರಿ ಜಾಸ್ತಿ ಕೊಡಿ. ಇದು ಅವರ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ. ಇದರಿಂದ ಮಕ್ಕಳು ಅನಾರೋಗ್ಯದಿಂದ ದೂರ ಇರ್ತಾರೆ. ಚಳಿಗಾಲದಲ್ಲಿ ಮಕ್ಕಳು ಆರೋಗ್ಯವಾಗಿರಬೇಕಾದ್ರೆ ಮಲಗುವ ಮುನ್ನ ಅವರ ಬಟ್ಟೆ ಒದ್ದೆಯಾಗಿರದ ಹಾಗೆ ನೋಡಿಕೊಳ್ಳಿ.