ಕೆಲಸದ ಒತ್ತಡದಿಂದ ಟೈಮ್‌ ಸಿಗುತ್ತಿಲ್ಲವೇ? ಈ ಟಿಪ್ಸ್‌ ಫಾಲೋ ಮಾಡಿ!

First Published Jan 1, 2021, 4:59 PM IST

ಹೆಚ್ಚಿನವರು ಕೆಲಸದ ಜೀವನ ಬ್ಯಾಲೆನ್ಸ್ ಮಾಡಲು ಒದ್ದಾಡುವುದನ್ನು ನೋಡಿದ್ದೇವೆ. ಯಾವಾಗಲೂ ಸುಸ್ತಾಗುತ್ತೇವೆ ಎಂದು ಹೇಳುವುದು ಸಹ ಕಾಮನ್‌. ದೈನಂದಿನ ಚಟುವಟಿಕೆಗಳನ್ನು ಸರಿಯಾಗಿ ಪ್ಲಾನ್‌ ಮಾಡುಕೊಳ್ಳುವುದು ಇದಕ್ಕೆ ಉತ್ತಮ ಪರಿಹಾರ. ಕೆಲಸದ-ಜೀವನವನ್ನು ಬ್ಯಾಲೆನ್ಸ್‌ ಮಾಡಲು ಈ ಕೆಳಗಿನ ಟಿಪ್ಸ್‌ ನಿಮಗೆ ಸಹಾಯ ಮಾಡಬಹುದು.   

ಇಮೇಲ್‌ಗಳು ಅಥವಾ ಟೆಕ್ಸ್ಟ್‌ ಮೇಸೆಜ್‌ಗಳಿಗೆ ಪ್ರತಿಕ್ರಿಯಿಸಬೇಡಿ. ಕೆಲಸ ಮತ್ತು ಮನೆಯ ನಡುವೆ ಅಂತರವನ್ನು ಕಾಪಾಡಿಕೊಳ್ಳುವುದನ್ನು ಪ್ರಾರಂಭಿಸಿ. ಮನೆಯಲ್ಲಿ ಕೆಲಸದ ಕಾಲ್‌ಗಳು, ಇಮೇಲ್‌ಗಳು ಅಥವಾ ಮೆಸೇಜ್‌ಗಗಳಿಗೆ ಉತ್ತರಿಸಬೇಡಿ. ಇದು ನಿಮಗೆ ವಿಶ್ರಾಂತಿ ಮತ್ತು ಕೆಲಸ-ಸಂಬಂಧಿತ ಒತ್ತಡದಿಂದ ವಿರಾಮ ತೆಗೆದುಕೊಳ್ಳಲು ಅನುವು ಮಾಡಿ ಕೊಡುತ್ತದೆ.
undefined
ನಿಮ್ಮ ಫೋನ್ ಸ್ವಿಚ್ ಆಫ್ ಮಾಡಲು ಸಾಧ್ಯವಿಲ್ಲ ಎಂದು ನಿಮಗೆ ಅನಿಸಿದರೆ, ನೀವು ಮನೆಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಬೇಕು.
undefined
ಧ್ಯಾನ ಅಥವಾ ವ್ಯಾಯಾಮಗಳನ್ನು ರೂಡಿಸಿಕೊಳ್ಳಿ. ಸ್ವಲ್ಪ ವ್ಯಾಯಾಮ ಅಥವಾ ಧ್ಯಾನ ದೇಹದ ಜೊತೆ ಮನಸ್ಸನ್ನು ಸಂತೋಷಗೊಳಿಸುತ್ತದೆ.
undefined
ಸಮಯದ ಅಭಾವ ಇದ್ದಲ್ಲಿ ಕೆಲಸಕ್ಕೆ ಹೋಗುವ ದಾರಿಯಲ್ಲಿ ಧ್ಯಾನವನ್ನು ಅಭ್ಯಾಸ ಮಾಡಿ ಅಥವಾ ಧೀರ್ಘ ಉಸಿರನ್ನು ತೆಗೆದುಕೊಳ್ಳಿ. ಪ್ರತಿದಿನ ಜಿಮ್‌ ಅಥವಾ ವರ್ಕೌಟ್‌ ಮಾಡಲು ಸಾಧ್ಯವಾಗದಿದ್ದರೆ, ವಾರಕ್ಕೆ ಎರಡು ಬಾರಿಯಾದರೂ ಮಾಡಿ.
undefined
ಫೋನ್ ಆಫ್ ಮಾಡಿ. ಸ್ವಲ್ಪ ಸಮಯದವರೆಗೆ ತಂತ್ರಜ್ಞಾನದಿಂದ ಸಂಪರ್ಕ ಕಡಿತಗೊಳಿಸುವುದು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.
undefined
ಇತರರಿಗೆ ಕೆಲಸವನ್ನು ನಿಯೋಜಿಸಿ. ಮನೆಯಲ್ಲಿ ಈ ಅಭ್ಯಾಸ ಬೆಳೆಸಿಕೊಳ್ಳುವುದರಿಂದ ನಿಮ್ಮ ಮೇಲಿನ ಹೊರೆ ಕಡಿಮೆಯಾಗುತ್ತದೆ ಮತ್ತು ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯ ಬಹುದು. ದಿನಸಿ ಶಾಪಿಂಗ್ ಮಾಡಲು ಸಂಗಾತಿಯಲ್ಲಿ ಅಥವಾ ಮಕ್ಕಳ ಸಹಾಯ ಪಡೆದುಕೊಳ್ಳಿ.
undefined
click me!