ಹಿಂದಿನ ಸಂಶೋಧನೆಗಳು ಬೊಜ್ಜು ಸ್ತನ ಕ್ಯಾನ್ಸರ್‌ಗೆ ಮಾತ್ರವಲ್ಲದೆ, ಗರ್ಭಾಶಯ, ಮೂತ್ರಪಿಂಡ, ಯಕೃತ್ತು ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಸೇರಿದಂತೆ ಇತರ 12 ರೀತಿಯ ಕ್ಯಾನ್ಸರ್‌ಗಳಿಗೂ ಅಪಾಯಕಾರಿ ಅಂಶವಾಗಿದೆ ಎಂದು ಎಚ್ಚರಿಸಿವೆ. ಇದಲ್ಲದೆ, ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನದ ಪ್ರಕಾರ, ಅಧಿಕ ತೂಕ ಹೊಂದಿರುವ ಮಹಿಳೆಯರಲ್ಲಿ ಕ್ಯಾನ್ಸರ್ ಗೆಡ್ಡೆಗಳು ದೊಡ್ಡದಾಗಿರುತ್ತವೆ. ಮುಂದುವರಿದ ಹಂತವನ್ನು ತಲುಪುವ ಸಾಧ್ಯತೆಯೂ ಹೆಚ್ಚು.