ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಯುವಕರಲ್ಲಿ ಸ್ತನ ಕ್ಯಾನ್ಸರ್ (breast cancer) ಪ್ರಕರಣಗಳ ಹೆಚ್ಚಳವು ಆತಂಕಕಾರಿಯಾಗಿದೆ. ಭಾರತದಲ್ಲಿ, ಮೂವತ್ತು, ನಲವತ್ತರ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಂಡು ಬರುತ್ತಿರುವುದು ಆತಂಕಕಾರಿ. ಕೆಲವು ಸಮಸ್ಯೆಗಳು ಒಟ್ಟಾಗಿ ಮಹಿಳೆಯರನ್ನು ಚಿಕ್ಕ ವಯಸ್ಸಿನಲ್ಲಿಯೇ ಸ್ತನ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳಿಗೆ ಬಲಿಪಶುಗಳನ್ನಾಗಿ ಮಾಡುತ್ತಿವೆ.