ಅತಿಯಾಗಿ ಜಂಕ್‌ಫುಡ್‌ ತಿಂದಿದ್ದಕ್ಕೇ ಅನಂತ್ ಅಂಬಾನಿ ತೂಕ 108 ಕೆಜಿಯಾಯ್ತಾ, ಫಿಟ್‌ನೆಸ್ ಟ್ರೈನರ್ ಹೇಳಿದ್ದೇನು?

Published : Jan 18, 2024, 11:44 AM ISTUpdated : Jan 18, 2024, 11:57 AM IST

ಬಿಲಿಯನೇರ್ ಮುಕೇಶ್ ಅಂಬಾನಿ ಮಗ, ಅನಂತ್ ಅಂಬಾನಿ ಒಂದು ಸಮಯದಲ್ಲಿ ಅಧಿಕ ತೂಕದಿಂದ ಬಳಲುತ್ತಿದ್ದರು. ಹೀಗಿರುವಾಗ ಕೇವಲ 18 ತಿಂಗಳುಗಳಲ್ಲಿ ಅನಂತ್ ಅಂಬಾನಿಗೆ 108 ಕೆಜಿ ತೂಕವನ್ನು ಇಳಿಸಲು  ಸಹಾಯ ಮಾಡಿದವರು ವಿನೋದ್ ಚನ್ನಾ. ಅವರ ಬಗ್ಗೆ ಇಲ್ಲಿದೆ ಮಾಹಿತಿ.

PREV
18
ಅತಿಯಾಗಿ ಜಂಕ್‌ಫುಡ್‌ ತಿಂದಿದ್ದಕ್ಕೇ ಅನಂತ್ ಅಂಬಾನಿ ತೂಕ 108 ಕೆಜಿಯಾಯ್ತಾ, ಫಿಟ್‌ನೆಸ್ ಟ್ರೈನರ್ ಹೇಳಿದ್ದೇನು?

ಮುಂಬೈ ಮೂಲದ ಹೆಸರಾಂತ ಫಿಟ್‌ನೆಸ್ ತರಬೇತುದಾರರಾದ ವಿನೋದ್ ಚನ್ನಾ ಭಾರತದ ಟಾಪ್ ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರರಲ್ಲಿ ಒಬ್ಬರು. ಕೇವಲ ಬಾಲಿವುಡ್‌ನ ನಟ-ನಟಿಯರಿಗೆ ಮಾತ್ರವಲ್ಲ ಹಲವು ಉದ್ಯಮಿಗಳಿಗೂ ವಿನೋದ್ ಚನ್ನಾ ಫಿಟ್‌ನೆಸ್ ಟ್ರೈನರ್ ಆಗಿದ್ದಾರೆ.

28

ಹಿಂದೊಮ್ಮೆ ಅವರು ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿಯವರ ವೈಯಕ್ತಿಕ ತರಬೇತುದಾರ ಸಹ ಆಗಿದ್ದರು. 

38

ಅನಂತ್ ಅಂಬಾನಿ ಒಂದು ಸಮಯದಲ್ಲಿ ಅಧಿಕ ತೂಕದಿಂದ ಬಳಲುತ್ತಿದ್ದರು. ಇಂಥಾ ಸಂದರ್ಭದಲ್ಲಿ ಕೇವಲ 18 ತಿಂಗಳುಗಳಲ್ಲಿ ಪ್ರಭಾವಶಾಲಿ 108 ಕೆಜಿ ತೂಕವನ್ನು ಇಳಿಸುವಲ್ಲಿ ಅನಂತ್ ಅಂಬಾನಿಗೆ ಸಹಾಯ ಮಾಡಿದವರು ವಿನೋದ್ ಚನ್ನಾ. ಕಠಿಣವಾದ ಆಹಾರ ಮತ್ತು ವ್ಯಾಯಾಮದಿಂದ ಅನಂತ್‌ ಅಂಬಾನಿ ತೂಕ ಇಳಿಸಿಕೊಳ್ಳಲು ನೆರವಾದರು.

48

ಆದರೆ ಫಿಟ್‌ನೆಸ್ ಟ್ರೈನರ್ ಆಗಿ ವಿನೋದ್ ಚನ್ನಾ ಪಯಣ ಸುಲಭದ್ದಾಗಿರಲ್ಲಿಲ್ಲ.ಚನ್ನಾ, ತಾವು ತಮ್ಮ ಹದಿಹರೆಯದಲ್ಲಿ ಆಹಾರವಿಲ್ಲದೆ ಅಪೌಷ್ಟಿಕತೆಯನ್ನು ಅನುಭವಿಸಿದ್ದನ್ನು ಬಹಿರಂಗ ಪಡಿಸಿದರು. ಫಿಟ್ನೆಸ್ ತರಬೇತಿ ತೊಡಗುವ ಮೊದಲು, ಮನೆಗೆಲಸ ಮತ್ತು ಭದ್ರತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದನ್ನು ನೆನಪಿಸಿಕೊಂಡರು.

58

ನಂತರದ ದಿನಗಳಲ್ಲಿ ಚನ್ನಾ ದೈಹಿಕ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸುವ ಪ್ರಾಮುಖ್ಯತೆಯನ್ನು ಅರಿತುಕೊಂಡರು. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಜಿಮ್‌ಗೆ ಸೇರಿದು. ಇದು ಫಿಟ್‌ನೆಸ್ ಬಗ್ಗೆ ಅವರ ಆಸಕ್ತಿ ಹೆಚ್ಚಾಗಲು ಕಾರಣವಾಯಿತು.

68

ಅನಂತ್ ಅಂಬಾನಿ ಅವರೊಂದಿಗಿನ ಅವರ ಕೆಲಸದ ಬಗ್ಗೆ ಮಾತನಾಡುತ್ತಾ, ವಿನೋದ್ ಚನ್ನಾ, ಅಂಬಾನಿ ತಮ್ಮ ತೂಕ ಇಳಿಸುವ ಪ್ರಯಾಣಕ್ಕೆ ಸಂಪೂರ್ಣವಾಗಿ ಬದ್ಧರಾಗಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. 

78

ಆದರೆ ಅನಂತ್‌ ಅಂಬಾನಿಗೆ ವೈಟ್ ಲಾಸ್ ಸುಲಭವಾದ ಪ್ರಕ್ರಿಯೆಯಾಗಿರಲಿಲ್ಲ, ಏಕೆಂದರೆ ಅವರ ಅತಿಯಾಗಿ ತಿನ್ನುವ ಅಭ್ಯಾಸ ಮತ್ತು ಜಂಕ್ ಫುಡ್‌ನ ಮೇಲಿನ ಒಲವಿಂದ ಇದು ಕಷ್ಟವಾಗಿತ್ತು. ಆದರೂ ಅವರು ಆಹಾರಕ್ರಮವನ್ನು ಬದಲಾಯಿಸಿಕೊಂಡರು. ಪ್ರೋಟೀನ್, ಕಡಿಮೆ ಕಾರ್ಬ್ಸ್ ಮತ್ತು ಫೈಬರ್‌ನಂತಹ ಅಂಶಗಳನ್ನು ಸೇವಿಸಿದರು ಎಂದು ಚನ್ನಾ ತಿಳಿಸಿದರು.

88

ವಿನೋದ್ ಚನ್ನಾ, ಪ್ರಮುಖ ಉದ್ಯಮಿಗಳಾದ ನೀತಾ ಅಂಬಾನಿ, ಕುಮಾರ್ ಮಂಗಳಂ ಬಿರ್ಲಾ, ಅನನ್ಯಾ ಬಿರ್ಲಾ ಮತ್ತು ಜಾನ್ ಅಬ್ರಹಾಂ, ಶಿಲ್ಪಾ ಶೆಟ್ಟಿ ಕುಂದ್ರಾ, ಹರ್ಷವರ್ಧನ್ ರಾಣೆ, ವಿವೇಕ್ ಒಬೆರಾಯ್ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳಿಗೆ ವೈಯಕ್ತಿಕ ತರಬೇತುದಾರರಾಗಿದ್ದಾರೆ. ವರದಿಗಳ ಪ್ರಕಾರ, 12 ತರಬೇತಿ ಅವಧಿಗಳ ಪ್ಯಾಕೇಜ್‌ಗೆ ವಿನೋದ್ ಚನ್ನಾ 1.5 ಲಕ್ಷ ರೂ ವಿಧಿಸುತ್ತಾರೆ.

Read more Photos on
click me!

Recommended Stories