ಗರ್ಭಪಾತಕ್ಕೆ ಕಾರಣವಾಗೋ ಆಹಾರಗಳು; ಗರ್ಭಿಣಿಯರು ದೂರ ಉಳಿಯೋದೊಳಿತು
First Published | Aug 3, 2020, 5:12 PM ISTಹೊಟ್ಟೆಯೊಳಗೆ ಭ್ರೂಣವೊಂದು ಮಗುವಾಗಿ ಬೆಳೆದು ಹೊರ ಬರುವವರೆಗೆ ಕಾಪಾಡುವುದು ಸಣ್ಣ ಜವಾಬ್ದಾರಿಯಲ್ಲ. ಇದಕ್ಕಾಗಿ ತಾಯಿಯಾಗುವವಳು ಹಲವು ರೀತಿಯಲ್ಲಿ ಕಾಳಜಿ ವಹಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾದುದು ಆಹಾರ. ಈ ಸಂದರ್ಭದಲ್ಲಿ ಆಹಾರ ಅತಿಯಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಹೀಗಾಗಿ, ಉತ್ತಮ ಡಯಟ್ ಫಾಲೋ ಮಾಡಬೇಕಾಗುತ್ತದೆ. ಭ್ರೂಣದ ಬೆಳವಣಿಗೆಗೆ ಬೇಕಾದ ಪೋಷಕಸತ್ವಗಳನ್ನೊದಗಿಸುವುದು ಮುಖ್ಯವಾಗುತ್ತದೆ. ಇದಲ್ಲದೆ, ಮತ್ತೆ ಕೆಲ ಆಹಾರಗಳು ಹೆಚ್ಚಾಗಿ ಸೇವಿಸಿದರೆ, ಅದರಲ್ಲೂ ಪ್ರಗ್ನೆನ್ಸಿಯ ಆರಂಭಿಕ ಹಂತದಲ್ಲಿ ಇವುಗಳ ಅತಿಯಾದ ಸೇವನೆಯಿಂದ ಗರ್ಭಪಾತವಾಗುವ ಸಂಭವಗಳು ಹೆಚ್ಚು. ಅಂಥ ಅಪಾಯಕಾರಿ ಆಹಾರಗಳು ಯಾವುವು ನೋಡೋಣ.