ನಾಯಿ ಜೊತೆ ವರ್ಕೌಟ್‌ ಮಾಡೋ ಅದಿತಿ ರಾವ್‌ ಹೈದರಿ!

First Published | Jul 23, 2020, 9:08 AM IST

‘ಆಗ ಕಣ್ಣೀರಲ್ಲೇ ಈಜಾಡ್ತಿದ್ದೆ ಗೊತ್ತಾ..’ ಅಂತ ಲಾಕ್‌ಡೌನ್‌ ಆರಂಭದ ದಿನಗಳನ್ನ ನೆನಸ್ಕೊಳ್ತಾರೆ ಅದಿತಿ ರಾವ್‌ ಹೈದರಿ. ಅವರಿಗೆ ಉದ್ವೇಗದ ಸಮಸ್ಯೆ ಆಗಿತ್ತು.ಪೆಟ್‌ಗಳ ಜೊತೆ ದಿನದಲ್ಲಿ ಒಂದಿಷ್ಟುಹೊತ್ತು ಕಳೆದರೆ ಏನೆಲ್ಲ ಪ್ರಯೋಜನ ಇದೆ ಅನ್ನೋದನ್ನು ಅವರಿಲ್ಲಿ ಹೇಳಿದ್ದಾರೆ.

ಬೆಳಗ್ಗೆ ಹಾಸಿಗೆಯಿಂದ ಏಳ್ತಿದ್ದ ಹಾಗೇ ಆತಂಕ, ಗೊಂದಲ, ಏನನ್ನೋ ಕಳೆದುಕೊಳ್ಳುತ್ತಿರುವ, ತಾನೆಲ್ಲೋ ಕಳೆದು ಹೋಗ್ತಿರುವ ಫೀಲ್‌. ನಿಧಾನಕ್ಕೆ ಕೌನ್ಸಿಲರ್‌ ಸಹಾಯದಿಂದ ಈ ಸಮಸ್ಯೆಯಿಂದ ಹೊರಬಂದಿದ್ದಾರೆ.
ಮತ್ತೆ ಚೇತೋಹಾರಿ ಮೂಡ್‌ಗೆ ಮರಳಲು ಸಹಾಯ ಮಾಡಿದ್ದು ಇವರ ಮನೆಯ ನಾಯಿ
Tap to resize

ನೀವು ಎಷ್ಟೇ ಬೇಜಾರಲ್ಲಿರಿ, ನಾಯಿ ಜೊತೆಗೆ ಅಥವಾ ಬೆಕ್ಕು, ಹಕ್ಕಿ, ಮೀನುಗಳ ಜೊತೆಗೆ ಒಂದಿಷ್ಟುಹೊತ್ತು ಕಳೆದರೆ ಮನಸ್ಸು ಸಮಾಧಾನವಾಗುತ್ತದೆ.
ಉದ್ವೇಗ, ಡಿಪ್ರೆಶನ್‌ನಂಥಾ ಸಮಸ್ಯೆಗಳಿಂದಾಚೆ ಬರಲು ಇದು ಸಹಕಾರಿ.
ನಾವು ಚುರುಕಾಗ್ತೀವಿ. ಇವುಗಳ ಜೊತೆಗೆ ಆಟ ಆಡ್ತಿದ್ರೆ ಮನಸ್ಸಿನ ಜೊತೆಗೆ ದೇಹನೂ ಖುಷಿಯಿಂದಿರುತ್ತೆ.
ಮಾನಸಿಕ ಸಮಸ್ಯೆ ಇರೋ ಮಕ್ಕಳನ್ನು ಪ್ರಾಣಿಗಳ ಜೊತೆಗೆ ಬೆರೆಯಲು ಬಿಡುವುದು ಪರಿಣಾಮಕಾರಿ.
ನಾಯಿ ಜೊತೆಗೆ ಓಡೋದು ಬೆಸ್ಟ್‌ ವರ್ಕೌಟ್‌.

Latest Videos

click me!