ಸೋಶಿಯಲ್ ಮೀಡಿಯಾದಲ್ಲಿ ಕಾಲ ಕಳೆಯುತ್ತೀರಾ? ರೀಲ್ಸ್, ಪೋಸ್ಟ್ ಹೀಗೆ ಒಂದು ಎರಡು ಎಂದು ಕೆಲ ಹೊತ್ತು ಸೋಶಿಯಲ್ ಮೀಡಿಯಾ ನೋಡುತ್ತಾ ಸಮಯ ಹೋಗಿದ್ದೇ ಗೊತ್ತಾಗುತ್ತಿಲ್ಲವೇ? ಹೀಗಾದರೆ ಡಿಜಿಟಲ್ ಡಿಟಾಕ್ಸ್ ಅತೀ ಅವಶ್ಯಕ.
ಸಾಮಾಜಿಕ ಜಾಲತಾಣಗಳು ಆಧುನಿಕ ಜೀವನದ ಕೇಂದ್ರಬಿಂದುವಾಗಿದೆ. ಆದರೆ, ಅತಿಯಾದ ಬಳಕೆಯು ಚಟಕ್ಕೆ ಕಾರಣವಾಗಬಹುದು, ಮಾನಸಿಕ ಆರೋಗ್ಯ, ಉತ್ಪಾದಕತೆ ಮತ್ತು ನಿಜ ಜೀವನದ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಮಗೆ ಗೊತ್ತಿಲ್ಲದಂತೆ ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತೇವೆ. ಒಂದು ರೀಲ್ಸ್ ಎಂದು ಗಂಟೆಗಳ ಕಾಲ ರೀಲ್ಸ್ ನೋಡಿ ಕಾಲ ಕಲೆಯುತ್ತೇವೆ. ನಮಗೆ ಗೊತ್ತಿಲ್ಲದಂತೆ ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದೇವೆ. ಇದರಿಂದ ಮುಕ್ತಿ ಅತೀ ಅಗತ್ಯ.
25
ಸಾಮಾಜಿಕ ಜಾಲತಾಣಗಳ ಚಟದ ಹಿಂದಿನ ವಿಜ್ಞಾನ
ಸಾಮಾಜಿಕ ಜಾಲತಾಣಗಳು ಬಳಕೆದಾರರನ್ನು ತೊಡಗಿಸಿಕೊಳ್ಳಲು ಡೋಪಮೈನ್-ಚಾಲಿತ ಪ್ರತಿಫಲ ವ್ಯವಸ್ಥೆಗಳನ್ನು ಬಳಸುತ್ತವೆ. ಪ್ರತಿ ಲೈಕ್, ಕಾಮೆಂಟ್ ಮತ್ತು ಅಧಿಸೂಚನೆಯು ಮೆದುಳಿನ ಆನಂದ ಕೇಂದ್ರವನ್ನು ಪ್ರಚೋದಿಸುತ್ತದೆ. ಇದರಿಂದ ಹೆಚ್ಚಿನ ಸಮಯ ಸೋಶಿಯಲ್ ಮೀಡಿಯಾದಲ್ಲಿ ಕಳೆಯುವ ಕಾರಣ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
35
ಅತಿಯಾದ ಸಾಮಾಜಿಕ ಜಾಲತಾಣ ಬಳಕೆಯ ಮಾನಸಿಕ ಪರಿಣಾಮಗಳು
ದೀರ್ಘಕಾಲದ ಸಾಮಾಜಿಕ ಜಾಲತಾಣಗಳ ಬಳಕೆಯು ಒತ್ತಡ, ಆತಂಕ ಮತ್ತು ಕೀಳರಿಮೆಗೆ ಕಾರಣವಾಗಬಹುದು. ಇತರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಲಿದೆ. ಸೋಶಿಯಲ್ ಮೀಡಿಯಾ ಸುಂದರ ಬದುಕನ್ನೇ ಕಸಿದುಕೊಳ್ಳಲಿದೆ.
ಸಾಮಾಜಿಕ ಜಾಲತಾಣಗಳ ಬಳಕೆಯ ಮೇಲೆ ನಿಯಂತ್ರಣವನ್ನು ಮರಳಿ ಪಡೆಯಲು ಉದ್ದೇಶಪೂರ್ವಕ ಕ್ರಮಗಳು ಬೇಕಾಗುತ್ತವೆ. ಸಮಯ ಮಿತಿಗಳನ್ನು ಹೊಂದಿಸಿ. ಕೆಲ ಕಟ್ಟು ನಿಟ್ಟಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಆರಂಭದಲ್ಲಿ ಇದು ಸವಾಲಾದರೂ ಬಳಿಕ ಜೀವನ ಪದ್ಧತಿಯಾಗಿ ಬದಲಾಗುತ್ತದೆ. ಉತ್ತಮ ಹಾಗೂ ಆರೋಗ್ಯಕರ ಜೀವನ ನಿಮ್ಮದಾಗಲಿದೆ.
55
ಸಾಮಾಜಿಕ ಜಾಲತಾಣಗಳ ಚಟದ ಚಕ್ರವನ್ನು ಮುರಿಯುವುದು ಹೇಗೆ
ಆಫ್‌ಲೈನ್ ಚಟುವಟಿಕೆಗಳೊಂದಿಗೆ ಸ್ಕ್ರೀನ್ ಸಮಯವನ್ನು ಬದಲಾಯಿಸಿ. ಅನಗತ್ಯ ನೋಟಿಫೀಕೇಶನ್ ಆಫ್ ಮಾಡಿ. ಸೋಶಿಯಲ್ ಮೀಡಿಯಾ ಬಳಕೆ ದಿನದಿಂದ ದಿನಕ್ಕೆ ಕಡಿಮೆ ಮಾಡುತ್ತಾ ಬನ್ನಿ. ಕ್ರೀಡೆ, ಓದು, ಇತರರೊಂದಿಗೆ ಹರಟೆ, ಮಾತುಕತೆ, ಸಮಯ ಸಿಕ್ಕಾಗೆ ಪ್ರೇಕ್ಷಣೀಯ ಸ್ಥಳ, ಟ್ರಿಪ್, ಸುತ್ತಾಟ ಮಾಡಿ. ಅಮೂಲ್ಯ ಸಮಯವನ್ನು ಮೊಬೈಲ್ ಸ್ಕ್ರೀನ್ ಮುಂದೆ ಕಳೆಯಬೇಡಿ.