ಅನೇಕ ಜನರು ಬೆಳಿಗ್ಗೆ ಎದ್ದ ತಕ್ಷಣ ಉಪ್ಪುನೀರು (salt water)ಕುಡಿಯುತ್ತಾರೆ. ಆದರೆ ಅದು ದೇಹದಲ್ಲಿ ಯಾವ ಬದಲಾವಣೆಗಳನ್ನು ತರಬಹುದು ಎಂದು ನಿಮಗೆ ತಿಳಿದಿದೆಯೇ? ಇಲ್ಲಿದೆ ಆ ಕುರಿತು ಪೂರ್ಣ ಮಾಹಿತಿ. ಉತ್ತಮ ಆರೋಗ್ಯಕ್ಕಾಗಿ ನೀವು ಸಹ ಉಪ್ಪು ನೀರನ್ನು ಕುಡಿಯಬಹುದು.
27
ಒಂದು ಲೋಟ ಉಗುರು ಬೆಚ್ಚಗಿನ ನೀರಿನ ಸ್ವಲ್ಪ ಉಪ್ಪು ಹಾಕಿ, ಆ ನೀರು ಕುಡಿಯೋದ್ರಿಂದ ಜೀರ್ಣಾಂಗ ವ್ಯವಸ್ಥೆ (digestion system) ಬಲಗೊಳ್ಳುತ್ತದೆ. ಇದು ಒಳಗೆ ಹೋಗುವ ಆಹಾರದ ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗೋದು ತಪ್ಪುತ್ತದೆ.
37
ಉಪ್ಪು ನೀರು ಚರ್ಮ ಮತ್ತು ಮೂಳೆಗಳು (skin and bones)ಎರಡಕ್ಕೂ ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ನಿಮ್ಮ ತ್ವಚೆ ಹೊಳೆಯುತ್ತಿರಬೇಕು ಅಂದ್ರೆ ನೀವು ಕೂಡ ನಿತ್ಯ ಉಪ್ಪು ನೀರು ಕುಡಿಯೋದು ಉತ್ತಮ.
ಉಪ್ಪು ನೀರು ಹೈಡ್ರೇಶನ್ (hydration) ವಿಷಯದಲ್ಲಿ ತುಂಬಾ ಪ್ರಯೋಜನಕಾರಿ. ಯಾಕಂದ್ರೆ ಬೆಳಗ್ಗೆ ಎದ್ದ ತಕ್ಷಣ ಉಪ್ಪು ನೀರು ಕುಡಿಯೋದ್ರಿಂದ ಹೆಚ್ಚು ಬಾಯಾರಿಕೆ ಆಗೋದಿಲ್ಲ, ಆದರೆ ದೇಹವು ಖಂಡಿತವಾಗಿಯೂ ಹೈಡ್ರೇಟ್ ಆಗಿರುತ್ತೆ.
57
ಉಪ್ಪು ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖನಿಜಗಳು ಮತ್ತು ಕಿಣ್ವಗಳು ಇರೋದರಿಂದ, ನೀವು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರನ್ನು ಕುಡಿಯೋದರಿಂದ ನಿಮ್ಮ ಶಕ್ತಿ ಕೂಡ ಹೆಚ್ಚಾಗುತ್ತದೆ. ಇದರಿಂದ ನೀವು ಕೂಡ ದಿನವಿಡಿ ಹೆಚ್ಚು ಆಕ್ಟಿವ್ ಆಗಿರೋದಕ್ಕೆ ಸಾಧ್ಯವಾಗುತ್ತೆ.
67
ಅಷ್ಟೇ ಅಲ್ಲ, ನಿಮಗೆ ನಿದ್ರೆ ಸಮಸ್ಯೆ ಇದ್ದರೂ ಉಪ್ಪು ನೀರು ಅದನ್ನು ಸರಿ ಮಾಡುತ್ತೆ. ಹೌದು, ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಉಪ್ಪು ನೀರು ಕುಡಿಯೋದರಿಂದ ನಿಮ್ಮ ನಿದ್ರೆಯೂ (good sleep) ಸುಧಾರಿಸುತ್ತದೆ. ಇದರೊಂದಿಗೆ ನೀವು ಗಾಢವಾಗಿ ನಿದ್ರಿಸಲು ಪ್ರಾರಂಭಿಸುತ್ತೀರಿ.
77
ಆದರೆ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷ್ಯ ಏನಪ್ಪಾ ಅಂದ್ರೆ, ಅಧಿಕ ರಕ್ತದೊತ್ತಡ (high blood pressure) ಮತ್ತು ಮೂತ್ರಪಿಂಡದ ಕಾಯಿಲೆ ಇರುವ ರೋಗಿಗಳು ಉಪ್ಪುನೀರನ್ನು ಕುಡಿಯಬಾರದು. ಇದರಿಂದ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತೆ.