ಒಂದೇ ವಾರದಲ್ಲಿ ಎರಡು ಬಾರಿ ಹೃದಯಾಘಾತ, 33 ವರ್ಷದ ಫಿಟ್ನೆಸ್ ಇನ್‌ಫ್ಲುಯೆನ್ಸರ್ ನಿಧನ!

Published : Aug 31, 2023, 12:46 PM IST

ಫಿಟ್ನೆಸ್ ಕುರಿತೀ ಅತೀವ ಕಾಳಜಿ, ಜಿಮ್ ವರ್ಕೌಟ್, ಹಿತ ಮಿತ ಆಹಾರ ಸೇರಿದಂತೆ ವೈದ್ಯರು ಹೇಳಿದಂತೆ ದಿನಚರಿ ನಡೆಸಿ, ಇತರರಿಗೂ ಮಾದರಿಯಾಗಿದ್ದ ಖ್ಯಾತ ಫಿಟ್ನೆಸ್ ಇನ್‌ಫ್ಲುಯೆನ್ಸರ್ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಈಕೆಯ ವಯಸ್ಸು ಕೇವಲ 33.

PREV
18
ಒಂದೇ ವಾರದಲ್ಲಿ ಎರಡು ಬಾರಿ ಹೃದಯಾಘಾತ, 33 ವರ್ಷದ ಫಿಟ್ನೆಸ್ ಇನ್‌ಫ್ಲುಯೆನ್ಸರ್  ನಿಧನ!

ಕೋವಿಡ್ ಬಳಿಕ ವಿಶ್ವದ ಆರೋಗ್ಯ ಮಟ್ಟ ತೀವ್ರ ಕಳೆಮಟ್ಟಕ್ಕೆ ಕುಸಿದಿದೆ. ಹೃದಯಾಘತದ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅದರಲ್ಲೂ ಉತ್ತಮ ಆರೋಗ್ಯ ಕಾಪಾಡಿಕೊಂಡ ಹಲವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.  ಈ ಸಾಲಿಗೆ ಮತ್ತೊಬ್ಬ ಜನಪ್ರಿಯ ಫಿಟ್ನೆಸ್ ಇನ್‌ಫ್ಲುಯೆನ್ಸರ್ ಸೇರಿಕೊಂಡಿದ್ದಾರೆ.

28

ಈಕೆಯ ವಯಸ್ಸು ಕೇವಲ 33. ಫಿಟ್ನೆಸ್ ಇನ್‌ಫ್ಲುಯೆನ್ಸರ್ ಆಗಿ ಸಾಮಾಜಿಕ ಮಾಧ್ಯಮದಲ್ಲಿ ಕೋಟ್ಯಾಂತರ ಫಾಲೋವರ್ಸ್ ಹೊಂದಿದ್ದಾಳೆ. ಫಿಟ್ನೆಸ್ ವಿಚಾರದಲ್ಲಿ ಈಕೆ ಹೇಳುತ್ತಿದ್ದ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಆದರೆ ಈಕೆ ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.

38

ಬ್ರಿಜೆಲ್‌ನ ಖ್ಯಾತ ಫಿಟ್ನೆಸ್ ಇನ್‌ಫ್ಲುಯೆನ್ಸರ್ ಲಾರಿಸಾ ಬೋರ್ಗ್‌ಗೆ ಎರಡೆರಡು ಬಾರಿ ಹೃದಯಾಘತವಾಗಿದೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

48

ಆಗಸ್ಟ್ 20 ರಂದು ಲಾರಿಸಾ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಲಾರಿಸಾಳನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ  ಲಾರಿಸಾ ಕೋಮಾಗೆ ಜಾರಿದ್ದಳು.

58

ಆಗಸ್ಟ್ 20 ರಿಂದ ಕೋಮಾದಲ್ಲಿದ್ದ ಲಾರಿಸಾಗೆ ಆಗಸ್ಟ್ 28 ರಂದು ಎರಡನೇ ಬಾರಿಗೆ ಹೃದಯಾಘತವಾಗಿದೆ. ವೈದ್ಯರ ತಂಡ ತೀವ್ರ ನಿಘಾವಹಿಸಿದರೂ  ಕೋಮಾದಲ್ಲೇ ಲಾರಿಸಾ ಮೃತಪಟ್ಟಿದ್ದಾಳೆ.

68

ಲಾರಿಸಾ ಬೋರ್ಗ್ಸ್ ಮೃತಪಟ್ಟ ಮಾಹಿತಿಯನ್ನು ಕುಟುಂಬಸ್ಥರು ಖಚಿತಪಡಿಸಿದ್ದಾರೆ. ಇದರ ಬೆನ್ನಲ್ಲೇ ಈಕೆಯ ಫಾಲೋವರ್ಸ್ ಆಘಾತಕ್ಕೊಳಗಾಗಿದ್ದಾರೆ. ಫಿಟ್ನೆಸ್ ವಿಚಾರದಲ್ಲಿ ಮಾದರಿಯಾಗಿದ್ದ ಲಾರಿಸಾಗೆ ಯಾಕೆ ಹೀಗಾಯ್ತು ಎಂದು ಹಲವರು ಪ್ರಶ್ನಿಸಿದ್ದಾರೆ.
 

78

ಜಿಮ್ ವರ್ಕೌಟ್, ವ್ಯಾಯಾಮ, ಮಿತವಾದ ಹಾಗೂ ಸರಿಯಾದ ಆಹಾರ ಪದ್ಧತಿ ಮೂಲಕ ಲಾರಿಸಾ ಅತ್ಯುತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ಇಷ್ಟೇ ಅಲ್ಲ ಇತರ ಯಾವುದೆ ಕೆಟ್ಟ ಅಭ್ಯಾಸಗಳು ಲಾರಿಸ್‌ಗೆ ಇರಲಿಲ್ಲ.

88

ಲಾರಿಸಾ ಹೇಳುತ್ತಿದ್ದ ಫಿಟ್ನೆಸ್ ಟಿಪ್ಸ್ ಆಕೆಯ ಫಾಲೋವರ್ಸ್ ಚಾಚೂ ತಪ್ಪದೆ ಅನುಸರಿಸುತ್ತಿದ್ದರು. ಈ ಮೂಲಕ ಹಲವರು ಈಕೆಯನ್ನು ಫಿಟ್ನೆಸ್ ಟ್ರೈನರ್ ಎಂದೇ ಕರೆಯುತ್ತಿದ್ದರು.

Read more Photos on
click me!

Recommended Stories