ಗರ್ಭಿಣಿಯ ಕಾಡೋ ಸಮಸ್ಯೆ ಒಂದೆರಡಲ್ಲ, ಹೊಟ್ಟೆ ತುರಿಕೆಗೇನು ಕಾರಣ?

First Published | Aug 30, 2023, 7:00 AM IST

ಗರ್ಭಾವಸ್ಥೆಯಲ್ಲಿ ಹೊಟ್ಟೆಯ ತುರಿಕೆಯಿಂದ ಪರಿಹಾರ ಪಡೆಯಲು ಬಯಸುವಿರಾ ... ಹಾಗಿದ್ರೆ ಇಲ್ಲಿ ತಿಳಿಸಿದಂತಹ ಟಿಪ್ಸ್ ಗಳನ್ನು ಟ್ರೈ ಮಾಡಿ, ನೀವು ಕೆಲವೇ ನಿಮಿಷಗಳಲ್ಲಿ ಪರಿಹಾರ ಪಡೆಯುತ್ತೀರಿ
 

ಗರ್ಭಾವಸ್ಥೆಯಲ್ಲಿ ಹೊಟ್ಟೆ ಮೇಲೆ ತುರಿಕೆ ಆಗೋದಕ್ಕೆ ಮುಖ್ಯ ಕಾರಣ, ಚರ್ಮದ ಒತ್ತಡ ಮತ್ತು ಹಾರ್ಮೋನುಗಳ ಬದಲಾವಣೆ. ಇದು ಸಾಮಾನ್ಯ ಲಕ್ಷಣ. ಇದು ಬಹುಶಃ ಇದನ್ನು ಪ್ರತಿಯೊಬ್ಬ ಮಹಿಳೆಯೂ ಅನುಭವಿಸುತ್ತಾಳೆ. ಹಾಗಿದ್ರೆ ಇದು ಯಾಕೆ?
 

ಗರ್ಭಾವಸ್ಥೆಯಲ್ಲಿ (Pregnancy), ಮಹಿಳೆಯ ದೇಹದಲ್ಲಿ ಅನೇಕ ಹಾರ್ಮೋನುಗಳ ಬದಲಾವಣೆಗಳು ಉಂಟಾಗುತ್ತವೆ? ಇದು ಯಾವುದೇ ಮಹಿಳೆಯ ಜೀವನದಲ್ಲಿ ಸಂತೋಷದ ಕ್ಷಣವಾಗಿದ್ದರೂ, ಆ 9 ತಿಂಗಳುಗಳು ಯಾವುದೇ ಮಹಿಳೆಯ ಜೀವನವು ಏರಿಳಿತಗಳಿಂದ ತುಂಬಿರುತ್ತವೆ. ಈ ಸಮಸ್ಯೆಗಳಲ್ಲಿ ಒಂದು ಹೊಟ್ಟೆ ತುರಿಕೆ. ಇದು ತುಂಬಾ ಸಾಮಾನ್ಯ ಆದರೆ ಕೆಲವು ಮಹಿಳೆಯರು ಹೆಚ್ಚು ಸಮಸ್ಯೆ ಹೊಂದಿರುತ್ತಾರೆ. 
 

Latest Videos


ಇದು ಏಕೆ ಸಂಭವಿಸುತ್ತದೆ?
ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ಹೊಟ್ಟೆ ತುರಿಕೆ ಚರ್ಮದ ಒತ್ತಡ (Skin Stress) ಮತ್ತು ಹಾರ್ಮೋನುಗಳ ಬದಲಾವಣೆಯಿಂದ (Hormonal Changes) ಉಂಟಾಗುತ್ತದೆ. ಇದು ಸಾಮಾನ್ಯ ಲಕ್ಷಣ. ಇದು ಬಹುಶಃ ಪ್ರತಿಯೊಬ್ಬ ಮಹಿಳೆಗೂ ಸಂಭವಿಸುತ್ತದೆ. ಇದು ಸ್ವಲ್ಪ ತೊಂದರೆ ನೀಡಬಹುದು. ಆದರೆ ಇದರ ಬಗ್ಗೆ ಹೆದರೋ ಅವಶ್ಯಕತೆ ಇಲ್ಲ.

ತುರಿಕೆಯಿಂದ ಪರಿಹಾರ ಪಡೆಯಲು ನೀವು ಮಾಯಿಶ್ಚರೈಸರ್ (moisturiser)  ಬಳಸಬಹುದು. ಸಡಿಲವಾಗಿ ಹೊಂದಿಕೊಳ್ಳುವ ಬಟ್ಟೆಗಳನ್ನು ಧರಿಸಬಹುದು. ಬಿಸಿ ನೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಿ ಮತ್ತು ತುರಿಕೆಗೆ ತಣ್ಣನೆಯ ಬ್ಯಾಂಡೇಜ್ ಬಳಸಿ. ತುರಿಕೆ ತೀವ್ರವಾಗಿದ್ದರೆ ಮತ್ತು ದದ್ದುಗಳು ಕಾಣಿಸಿಕೊಂಡರೆ ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. 

ದೇಹದಲ್ಲಿ ನೀರಿನ ಕೊರತೆಯಿಂದಾಗಿ, ಕೆಲವು ಮಹಿಳೆಯರು ತುರಿಕೆ ಸಮಸ್ಯೆ (itching problem) ಅನುಭವಿಸುತ್ತಾರೆ. ಶುಷ್ಕತೆ ಮತ್ತು ಡ್ರೈನೆಸ್ ತಪ್ಪಿಸಲು ಹೈಪೋಅಲರ್ಜೆನಿಕ್ ಮಾಯಿಶ್ಚರೈಸರ್ ಅನ್ನು ಹಚ್ಚಿ. ಸಡಿಲವಾಗಿ ಹೊಂದಿಕೊಳ್ಳುವ ಹತ್ತಿ ಬಟ್ಟೆಗಳನ್ನು ಒಟ್ಟಿಗೆ ಧರಿಸಿ. ಇದರಿಂದ ಗಾಳಿಯು ದೇಹವನ್ನು ತಲುಪಬಹುದು. 
 

ಬಿಸಿ ನೀರಿನಿಂದ ಸ್ನಾನ (hot water bathing)  ಮಾಡಬೇಡಿ. ಏಕೆಂದರೆ ಅದು ಚರ್ಮವನ್ನು ಮತ್ತಷ್ಟು ಒಣಗಿಸುತ್ತದೆ. ಅಲ್ಲದೆ, ಸುಗಂಧವಿಲ್ಲದ ಸಾಬೂನನ್ನು ಬಳಸಿ. ಸ್ನಾನದ ನಂತರ, ಹೊಟ್ಟೆಯ ಚರ್ಮದ ನೀರನ್ನು ಪೂರ್ತಿಯಾಗಿ ತೆಗೆಯಬೇಡಿ. ಇನ್ನು ಕಾರ್ಟಿಕೊಸ್ಟೆರಾಯ್ಡ್ ಕ್ರೀಮ್‌ಗಳು ತುರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆದರೆ ಗರ್ಭಾವಸ್ಥೆಯಲ್ಲಿ ಯಾವುದೇ ಔಷಧಿಗಳನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. 
 

ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ. ವಿಟಮಿನ್ಸ್ ಮತ್ತು ಪೋಷಕಾಂಶಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ ಏಕೆಂದರೆ ಇದನ್ನು ಮಾಡುವುದರಿಂದ ತುರಿಕೆಯನ್ನು ಕೊಂಚ ಮಟ್ಟಿಗೆ ನಿಯಂತ್ರಿಸಬಹುದು. ತುರಿಕೆ ತೀವ್ರವಾಗಿದ್ದರೆ, ಹೆಚ್ಚಾದರೆ ಅಥವಾ ದದ್ದುಗಳಂತಹ ಇತರೆ ರೋಗ ಲಕ್ಷಗಳು ಕಾಣಿಸಿಕೊಂಡರೆ, ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಇವು ಗರ್ಭಧಾರಣೆಯ ಕೊಲೆಸ್ಟಾಸಿಸ್ ನಂತಹ ಗಂಭೀರ ಸ್ಥಿತಿಯ ಚಿಹ್ನೆಗಳಾಗಿರಬಹುದು.
 

click me!