ಹುಡುಗಿಯರ ಹೃದಯ ಕದಿಯೋ ನೀರಜ್ ಚೋಪ್ರಾ ಫಿಟ್ನೆಸ್ ಸೀಕ್ರೆಟ್ ಪಾನಿಪುರಿಯಂತೆ!

First Published | Aug 30, 2023, 4:31 PM IST

ಇತ್ತೀಚೆಗೆ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಮತ್ತೊಮ್ಮೆ ಹೆಮ್ಮೆ ತಂದಿದ್ದಾರೆ. ಇದರೊಂದಿಗೆ ಅವರು ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ತಮ್ಮ ಅದ್ಭುತ ಪ್ರದರ್ಶನದ ಜೊತೆಗೆ, ನೀರಜ್ ತಮ್ಮ ಫಿಟ್ನೆಸ್ಗಾಗಿಯೂ ಪ್ರಸಿದ್ಧರಾಗಿದ್ದಾರೆ. ಹಾಗಿದ್ರೆ ಅವರ ಫಿಟ್ನೆಸ್ನ ರಹಸ್ಯವೇನು ಎಂದು ತಿಳಿಯೋಣ-
 

ಭಾರತದ ಅಥ್ಲೀಟ್ (Indian Athlete) ನೀರಜ್ ಚೋಪ್ರಾ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ, ಅಥ್ಲೆಟಿಕ್ ತಾರೆ ನೀರಜ್ ಚೋಪ್ರಾ ಈಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕ್ರೀಡಾಪಟುವಾಗಿ ವಿಶ್ವ ಚಾಂಪಿಯನ್ ಆಗುವ ಪ್ರಯಾಣ ನೀರಜ್‌ಗೆ ಸುಲಭವಾಗಿರಲಿಲ್ಲ. ನೀರಜ್ ಫಿಟ್ನೆಸ್ (Fitness) ಕಾಯ್ದುಕೊಂಡಿದ್ದು ಹೇಗೇ? ನೋಡೋಣ. 
 

ಹರಿಯಾಣದ ಪಾಣಿಪತ್‌ನಲ್ಲಿ ವಾಸಿಸುವ ನೀರಜ್ (Neeraj Chopra) ಬಾಲ್ಯದಲ್ಲಿ ಸಾಕಷ್ಟು ತೂಕ ಹೊಂದಿದ್ರಂತೆ ಆದರೂ ಅವರು ಪ್ರಸ್ತುತ ವಿಶ್ವದ ಅತ್ಯಂತ ಫಿಟ್ ಕ್ರೀಡಾಪಟುಗಳಲ್ಲಿ ಒಬ್ಬರು. ಫಿಟ್ ಆಗಿರಲು ಅವರೇನು ಮಾಡಿದ್ರು ನೋಡೋಣ.
 

Tap to resize

ಸ್ಟೈಲಿಶ್ ಲುಕ್ ಮತ್ತು ಫಿಟ್ನೆಸ್ ಕಾರಣದಿಂದಾಗಿ, ನೀರಜ್ ಚೋಪ್ರಾ ಜನರಲ್ಲಿ, ವಿಶೇಷವಾಗಿ ಹುಡುಗಿಯರಲ್ಲಿ ಬಹಳ ಪ್ರಸಿದ್ಧರಾಗಿದ್ದಾರೆ. ನೀವು ಅವರ ಫಿಟ್ನೆಸ್ (fitness secret) ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಅವರ ಫಿಟ್ನೆಸ್ ರಹಸ್ಯ ಇಲ್ಲಿದೆ ನೋಡಿ.
 

ನೀರಜ್ ಸಾಮಾನ್ಯವಾಗಿ ಸಲಾಡ್ ಅಥವಾ ಹಣ್ಣುಗಳಂತಹ ವಸ್ತುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಇದೆಲ್ಲದರ ಹೊರತಾಗಿ, ಅವರು ಗ್ರಿಲ್ಡ್ ಚಿಕನ್ ಬ್ರೆಸ್ಟ್ ಮತ್ತು ಮೊಟ್ಟೆಗಳಂತಹ ಆಹಾರಗಳನ್ನು ಸಹ ತಿಂತಾರೆ. ಇದಲ್ಲದೆ, ನೀರಜ್ ಚೋಪ್ರಾ ಸಿಹಿ ತಿಂಡಿಗಳನ್ನು ಸಹ ಇಷ್ಟಪಡುತ್ತಾರೆ. 
 

ಸಂದರ್ಶನ ಒಂದರಲ್ಲಿ ಅವರು ತಮ್ಮ ಚೀಟ್ ಮೀಲ್ ನಲ್ಲಿ  ಸ್ವೀಟ್ ಹೆಚ್ಚಾಗಿ ತಿನ್ನಲು ಬಯಸುತ್ತಾರೆ ಎಂದು ಹೇಳಿದ್ದರು. ಇದ್ರಲ್ಲೆ ಗೊತ್ತಾಗುತ್ತೆ ಅವರಿಗೆ ಸ್ವೀಟ್ ಎಷ್ಟು ಇಷ್ಟ ಅನ್ನೋದು. ಅವರು ಸಾಮಾನ್ಯವಾಗಿ ಬಹಳ ಸೀಮಿತ ಪ್ರಮಾಣದ ಸಿಹಿತಿಂಡಿಗಳನ್ನು ತಿನ್ನುತ್ತಾರೆ. ನೀರಜ್ ಚೋಪ್ರಾ ತುಪ್ಪದಿಂದ ಮಾಡಿದ ಮನೆಯಲ್ಲಿ ತಯಾರಿಸಿದ ಚುರ್ಮಾವನ್ನು ತುಂಬಾ ಇಷ್ಟಪಡುತ್ತಾರೆ.

ನೀರಜ್ ಡಯಟ್
ಇದಲ್ಲದೆ, ಸಾಲ್ಮನ್ ಮೀನು (salmon fish) ಕೂಡ ನೀರಜ್ ಅವರ ಡಯಟ್ ಭಾಗ. ಅವರು ಮಾಂಸಾಹಾರಿ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ. ವಿಶೇಷವಾಗಿ ಕೆಲವು ಗ್ರಿಲ್ಡ್ ಸಾಲ್ಮನ್ ಮೀನುಗಳನ್ನು ಅವರು ತುಂಬಾ ಇಷ್ಟಪಡುತ್ತಾರೆ. 

ಅಲ್ಲದೆ, ಅವರು ರೀಫ್ರೆಶ್ ಆಗಲು ಸಾಕಷ್ಟು ಫ್ರೆಶ್ ಫ್ರುಟ್ ಜ್ಯೂಸ್ (Fresh fruit juice) ಕುಡಿಯುತ್ತಾರೆ. ಅವರು ಸಾಮಾನ್ಯವಾಗಿ ವ್ಯಾಯಾಮದ ನಂತರ ಎರಡು ಲೋಟ ತಾಜಾ ಜ್ಯೂಸ್ ಕುಡಿಯುತ್ತಾರೆ. ಅಷ್ಟೇ ಅಲ್ಲ ನೀರಜ್ ಚೋಪ್ರಾಗೆ ಸ್ಟ್ರೀಟ್ ಫುಡ್ ಗಳಲ್ಲಿ ಪಾನಿ ಪುರಿ ತಿನ್ನಲು ತುಂಬಾನೆ ಇಷ್ಟ. ಇದನ್ನು ತಿನ್ನುವುದರಿಂದ ಯಾವುದೇ ಹಾನಿಯಿಲ್ಲ ಎನ್ನುತ್ತಾರೆ ನೀರಜ್. 

Latest Videos

click me!