ಎಚ್ಚರ..! ಹಾವು ಕಚ್ಚಿದ ತಕ್ಷಣ ಮಾಡೋ ಈ ತಪ್ಪೇ ಸಾವಿಗೆ ಕಾರಣ? ಈ ಸಂಗತಿ ಗೊತ್ತಿದ್ರೆ ಬಚಾವ್ ಆಗ್ತೀರಿ!

Published : May 03, 2026, 08:36 PM IST

ಸಿನಿಮಾಗಳಲ್ಲಿ ಹೀರೋ ಅಥವಾ ಹೀರೋಯಿನ್‌ಗೆ ಹಾವು ಕಚ್ಚಿದಾಗ ಮತ್ತೊಬ್ಬರು ಬಾಯಿಂದ ವಿಷವನ್ನು ಹೀರಿ ಉಗುಳುವ ಸೀನ್ ನೋಡಿ ನೀವೂ ಸ್ಫೂರ್ತಿ ಪಡೆಯಬೇಡಿ! ಇದು ಕೇವಲ ರೀಲ್ ಲೈಫ್‌ಗೆ ಮಾತ್ರ ಸೀಮಿತ. ನಿಜ ಜೀವನದಲ್ಲಿ ಬಾಯಿಂದ ವಿಷ ಹೀರಲು ಹೋದರೆ ಇಬ್ಬರೂ ಸಾವನ್ನಪ್ಪುವ ಅಪಾಯವಿರುತ್ತದೆ.

PREV
16

ಸಿನಿಮಾಗಳಲ್ಲಿ ತೋರಿಸೋದು ಬೇರೆ, ಅಸಲಿಯತ್ತೇ ಬೇರೆ! ಹಾವು ಕಚ್ಚಿದಾಗ ನೀವು ಮಾಡೋ ಒಂದು ಸಣ್ಣ ತಪ್ಪು ಪ್ರಾಣಕ್ಕೆ ಕುತ್ತು ತರಬಹುದು ಎಚ್ಚರ!

ಬೇಸಿಗೆಯ ಧಗಧಗಿಸುವ ಬಿಸಿಲಿಗೆ ನಾವೇ ಫ್ಯಾನ್, ಎಸಿ ಅಂತ ಹುಡುಕಿಕೊಂಡು ಹೋದರೆ, ಪಾಪ ಹಾವುಗಳು ಎಲ್ಲಿಗೆ ಹೋಗಬೇಕು? ಅದಕ್ಕಾಗಿಯೇ ಈಗ ಅರಣ್ಯ ಪ್ರದೇಶಗಳನ್ನು ಬಿಟ್ಟು ಈ ವಿಷಜಂತುಗಳು ತಂಪು ಅರಸುತ್ತಾ ನಮ್ಮ ಮನೆಯಂಗಳಕ್ಕೆ ಲಗ್ಗೆ ಇಡುತ್ತಿವೆ. ತೋಟ, ಹಿತ್ತಲು ಅಥವಾ ಹಳೆಯ ಗೋದಾಮುಗಳಲ್ಲಿ ಈ 'ನಾಗಪ್ಪ'ನ ದರ್ಶನವಾಗುವುದು ಈಗ ಸಾಮಾನ್ಯವಾಗಿದೆ. ಆದರೆ ನೆನಪಿಡಿ, ಹಾವಿನ ವಿಷಕ್ಕಿಂತ ಹೆಚ್ಚಾಗಿ ನಾವು ಮಾಡುವ ತಪ್ಪುಗಳು ಮತ್ತು ನಮ್ಮ ಮನಸ್ಸಿನ ಭಯವೇ ನಮ್ಮನ್ನು ಸಾವಿನ ಹತ್ತಿರ ಕೊಂಡೊಯ್ಯುತ್ತವೆ!

26

ಕಂಡ ಹಾವೆಲ್ಲಾ ಕಾಲಯಮನಲ್ಲ!

ಹಾವನ್ನು ಕಂಡ ಕೂಡಲೇ ಎದೆಬಡಿತ ಜೋರಾಗೋದು ಸಹಜ. ಆದರೆ ಉರಗ ತಜ್ಞರು ಹೇಳುವ ಪ್ರಕಾರ, ಹಾವು ಕಚ್ಚಿದಾಗ ಹರಡುವ ವಿಷಕ್ಕಿಂತ 'ಅತಿಯಾದ ಗಾಬರಿ'ಯಿಂದಲೇ ಸಾವುಗಳು ಹೆಚ್ಚಾಗುತ್ತವೆಯಂತೆ. ನಮಗೆ ಕಾಣಸಿಗುವ ಎಲ್ಲಾ ಹಾವುಗಳು ವಿಷಕಾರಿಯಲ್ಲ ಎಂಬ ಸತ್ಯ ನಮಗೆ ತಿಳಿದಿಲ್ಲ. ಉದಾಹರಣೆಗೆ, ನೋಡಲು ಭಯಾನಕವಾಗಿ ಕಾಣುವ ಹೆಬ್ಬಾವುಗಳು ಮತ್ತು ಹಸಿರು ಹಾವುಗಳು (ಹಸಿರು ಬಳ್ಳಿ ಹಾವು) ವಿಷಕಾರಿಯಲ್ಲದ ವರ್ಗಕ್ಕೆ ಸೇರುತ್ತವೆ. ಹಾವನ್ನು ಕಂಡ ತಕ್ಷಣ ಗಾಬರಿಯಾಗಿ ರಕ್ತದೊತ್ತಡ ಹೆಚ್ಚಿಸಿಕೊಂಡರೆ, ದೇಹದಲ್ಲಿ ರಕ್ತ ಸಂಚಾರ ವೇಗವಾಗಿ ವಿಷ ಬೇಗನೆ ಮೆದುಳು ಮತ್ತು ಹೃದಯ ತಲುಪುತ್ತದೆ. ಹಾಗಾಗಿ ಸಂಯಮ ಬಹಳ ಮುಖ್ಯ.

36

ಸಿನಿಮಾ ಸ್ಟೈಲ್ ಬೇಡವೇ ಬೇಡ!

ಸಿನಿಮಾಗಳಲ್ಲಿ ಹೀರೋ ಅಥವಾ ಹೀರೋಯಿನ್‌ಗೆ ಹಾವು ಕಚ್ಚಿದಾಗ ಮತ್ತೊಬ್ಬರು ಬಾಯಿಂದ ವಿಷವನ್ನು ಹೀರಿ ಉಗುಳುವ ಸೀನ್ ನೋಡಿ ನೀವೂ ಸ್ಫೂರ್ತಿ ಪಡೆಯಬೇಡಿ! ಇದು ಕೇವಲ ರೀಲ್ ಲೈಫ್‌ಗೆ ಮಾತ್ರ ಸೀಮಿತ. ನಿಜ ಜೀವನದಲ್ಲಿ ಬಾಯಿಂದ ವಿಷ ಹೀರಲು ಹೋದರೆ, ಹೀರುವ ವ್ಯಕ್ತಿಯ ಬಾಯಲ್ಲಿ ಸಣ್ಣ ಗಾಯವಿದ್ದರೂ ವಿಷ ಅವರ ರಕ್ತ ಸೇರಿ ಇಬ್ಬರೂ ಸಾವನ್ನಪ್ಪುವ ಅಪಾಯವಿರುತ್ತದೆ. ಅಷ್ಟೇ ಅಲ್ಲ, ಮಂತ್ರ-ತಾಯತ ಅಥವಾ ನಾಟಿ ವೈದ್ಯರ ಬಳಿ ಹೋಗಿ ‘ಗೋಲ್ಡನ್ ಅವರ್’ (ಚಿಕಿತ್ಸೆ ಸಿಗಬೇಕಾದ ಅಮೂಲ್ಯ ಸಮಯ) ವ್ಯರ್ಥ ಮಾಡುವುದು ಎಂದರೆ ನೇರವಾಗಿ ಯಮನಿಗೆ ಆಮಂತ್ರಣ ನೀಡಿದಂತೆ.

46

ಹಾವಿನ ಜೊತೆ ಸೆಲ್ಫಿ ಅಥವಾ ಸಾಹಸ ಬೇಡ!

ಹಲವರು ಕಚ್ಚಿದ ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಹೋಗುತ್ತಾರೆ. ಇದು ಮತ್ತೊಂದು ಕಡಿತಕ್ಕೆ ದಾರಿ ಮಾಡಿಕೊಡಬಹುದು. ಹಾವನ್ನು ಹಿಡಿಯುವ ಸಾಹಸಕ್ಕೆ ಕೈ ಹಾಕುವ ಬದಲು, ಸಾಧ್ಯವಾದರೆ ದೂರದಿಂದಲೇ ಅದರ ಒಂದು ಫೋಟೋ ಅಥವಾ ವಿಡಿಯೋ ಮಾಡಿ. ಇದರಿಂದ ವೈದ್ಯರಿಗೆ ಅದು ಯಾವ ಜಾತಿಯ ಹಾವು ಎಂದು ಪತ್ತೆ ಹಚ್ಚಿ, ಸರಿಯಾದ ‘ಆಂಟಿ-ವೆನಮ್’ (ವಿಷನಿರೋಧಕ) ಚಿಕಿತ್ಸೆ ನೀಡಲು ಸುಲಭವಾಗುತ್ತದೆ.

56

ಮನೆಗೆ ಹಾವು ಬರದಂತೆ ತಡೆಯುವುದು ಹೇಗೆ?

ಮನೆಯ ಸುತ್ತಮುತ್ತ ಕಸದ ರಾಶಿ, ಒಣ ಎಲೆಗಳು ಅಥವಾ ಉರುವಲುಗಳನ್ನು ಸಂಗ್ರಹಿಸಿಡಬೇಡಿ. ಇವು ಹಾವುಗಳಿಗೆ ‘ಫೈವ್ ಸ್ಟಾರ್ ಹೋಟೆಲ್’ ಇದ್ದಂತೆ!

ಕಿಟಕಿ ಮತ್ತು ಬಾಗಿಲುಗಳ ಕೆಳಗಿರುವ ಸಣ್ಣ ಅಂತರಗಳನ್ನು ಮುಚ್ಚಿ.

66

ಮುಖ್ಯವಾಗಿ ಮನೆಯಲ್ಲಿ ಇಲಿಗಳ ಕಾಟವಿದ್ದರೆ ಮೊದಲು ಅದನ್ನು ನಿಯಂತ್ರಿಸಿ. ಇಲಿಗಳನ್ನು ಹುಡುಕುತ್ತಲೇ ಹಾವುಗಳು ನಿಮ್ಮ ಮನೆಗೆ ಎಂಟ್ರಿ ಕೊಡುತ್ತವೆ.

ನೆನಪಿಡಿ, ಹಾವು ಕಂಡಾಗ ಭಯ ಬೇಡ, ಜಾಗೃತಿ ಇರಲಿ. ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದೇ ಜಾಣತನ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories