ಕಿವಿ ಚುಚ್ಚುವ ಸಂಪ್ರದಾಯದ ಹಿಂದಿದೆ ವೈಜ್ಞಾನಿಕ ಕಾರಣ

First Published | Mar 30, 2021, 1:47 PM IST

ಚಿಕ್ಕ ವಯಸ್ಸಿನಲ್ಲಿ ಮಗುವಿನ ಕಿವಿಯನ್ನು ಚುಚ್ಚಿಸಿಕೊಳ್ಳುವ ಪದ್ಧತಿ ಭಾರತದಲ್ಲಿ ಸಾಮಾನ್ಯವಾಗಿದೆ. ವೈದಿಕ ಪದ್ಧತಿ ಪ್ರಕಾರ, ಪೋಷಕರು ಸಾಮಾನ್ಯವಾಗಿ ತಮ್ಮ ಮಗು ಹುಟ್ಟಿ ಕೇವಲ ಕೆಲವು ದಿನಗಳ ನಂತರ ಕಿವಿಗಳನ್ನು ಚುಚ್ಚುವ ಸಂಪ್ರದಾಯವಿದೆ ಮತ್ತು ಇದು ಒಂದು ನೋವಿನ ಪ್ರಕ್ರಿಯೆ ಮತ್ತು ಮಗುವಿಗೆ ಮಾಡಲು ತುಂಬಾ ಭಯಾನಕವಾದ ಕೆಲಸವೆಂದು ತೋರುತ್ತದೆ.ಆದರೆ ಪುಟ್ಟ ಮಗುವಿಗೆ ಕಿವಿ ಚುಚ್ಚುವ ಈ ಸಂಪ್ರದಾಯವು ಕೆಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಕಿವಿ ಚುಚ್ಚುವಿಕೆಯ ಬಗ್ಗೆ  ತಿಳಿಯಬೇಕಾದ 5 ಸಂಗತಿಗಳು ಇಲ್ಲಿವೆ.

ಕಿವಿಗೆ ಓಲೆ ಧರಿಸುವದರಿಂದ ಸಂತಾನೋತ್ಪತ್ತಿ ಅಂಗಗಳನ್ನು ನಿರ್ವಹಿಸುತ್ತದೆ ಮತ್ತು ಆರೋಗ್ಯಕರ ಋತುಚಕ್ರಕ್ಕೆ ಸಹಾಯ ಮಾಡುತ್ತದೆ:ಕಿವಿಯ ಲೋಬ್‌ನ ಮಧ್ಯ ಭಾಗದಲ್ಲಿ ಒಂದು ಬಿಂದುವಿದೆ. ಆಯುರ್ವೇದದಲ್ಲಿ ಈ ಅಂಶವನ್ನು ವ್ಯಕ್ತಿಯ ಸಂತಾನೋತ್ಪತ್ತಿ ಅಂಗಗಳ ಆರೋಗ್ಯಕ್ಕೆ ಅತ್ಯಂತ ಪ್ರಮುಖವಾದ ಕ್ಷೇತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಗಂಡು ಮಕ್ಕಳಲ್ಲಿ ಈ ಅಂಗಗಳನ್ನು ಸದೃಢವಾಗಿಡಲು ಕಿವಿ ಚುಚ್ಚುತ್ತಾರೆ. ಹೆಣ್ಣು ಮಗುವಿನಲ್ಲಿ ಮಹಿಳೆಯ ಋತುಚಕ್ರವನ್ನು ನಿಯಂತ್ರಿಸಲು ನೆರವಾಗುತ್ತದೆ.
ಶುಶ್ರುತ ಸಂಹಿತೆಯ ಪ್ರಕಾರ, ಈ ಬಿಂದುವನ್ನು ಚುಚ್ಚುವ ಮೂಲಕ ಹಲವಾರು ರೀತಿಯ ಸೋಂಕುಗಳು ಮತ್ತು ಹೈಡ್ರೋಸೆಲ್ (ವೃಷಣಗಳಲ್ಲಿ ದ್ರವವನ್ನು ತುಂಬುವುದು) ಮತ್ತು ಬಾಲಕರಲ್ಲಿ ಹರ್ನಿಯಾವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
Tap to resize

ಕಣ್ಣಿನ ದೃಷ್ಟಿಯನ್ನು ಹರಿತಮಾಡುತ್ತದೆ:ಅಕ್ಯುಪಂಕ್ಚರ್ ಪ್ರಕಾರ, ಕಿವಿಯ ಲೋಬ್‌ನ ಕೇಂದ್ರ ಬಿಂದುವು ದೃಷ್ಟಿಯ ಕೇಂದ್ರವಾಗಿದೆ. ಆದ್ದರಿಂದ ಈ ಬಿಂದುವಿಗೆ ಒತ್ತಡ ಹಾಕುವುದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ.
ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ:ಸುಶ್ರುತ ಎಂಬ ಋಷಿಗಳ ಪ್ರಕಾರ ಕಿವಿಯ ಲೋಬ್‌‌ಗಳು ಮಾನವನ ಮೆದುಳಿನ ಎಡ ಮತ್ತು ಬಲ ಗೋಳಾರ್ಧಕ್ಕೆ ಸಂಪರ್ಕ ಕಲ್ಪಿಸುವ ಮೆರಿಡಿಯನ್ ಬಿಂದುಗಳನ್ನು ಒಳಗೊಂಡಿರುತ್ತವೆ. ಈ ಬಿಂದುವನ್ನು ಚುಚ್ಚಿದಾಗ ಅದು ಮೆದುಳಿನ ಈ ಭಾಗಗಳನ್ನು ಸಕ್ರಿಯಗೊಳಿಸುತ್ತದ.ೆ ಈ ಸಿದ್ಧಾಂತವು ಮತ್ತು ಆಕ್ಯುಪ್ರೆಶರ್ ಥೆರಪಿಯ ತತ್ವಗಳಲ್ಲಿಯೂ ಕಂಡುಬರುತ್ತವೆ.
ಈ ಮೆರಿಡಿಯನ್ ಅಂಶಗಳು ಪ್ರಚೋದನೆಗೊಂಡಾಗ, ಮೆದುಳಿನ ತ್ವರಿತ ಮತ್ತು ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದಲೇ ಮಗುವಿನ ಕಿವಿಗಳು ಬಾಲ್ಯದಲ್ಲಿಯೇ ಚುಚ್ಚಿದರೆ, ಅದರಲ್ಲೂ ವಿಶೇಷವಾಗಿ ಮೆದುಳಿನ ಅಭಿವೃದ್ಧಿಗೆ ನೆರವಾಗುತ್ತದೆ.
ಹುಟ್ಟಿದ ಮೊದಲ ಎಂಟು ತಿಂಗಳಲ್ಲಿ ಮಗು ತನ್ನ ಮೆದುಳು ಬೆಳವಣಿಗೆ ಹೊಂದುತ್ತಿರುವಾಗ ಕಿವಿ ಚುಚ್ಚಿಕೊಳ್ಳಬೇಕು ಎಂಬ ನಂಬಿಕೆಯೂ ಇದೆ. ಇದರಿಂದ ಮಗುವಿನ ಮಾನಸಿಕ ಬೆಳವಣಿಗೆ ಮೇಲೆಯೂ ಹೆಚ್ಚಿನ ಪರಿಣಾಮ ಬೀರುತ್ತದೆ..
ಕಿವಿಗಳನ್ನು ಆರೋಗ್ಯವಾಗಿಡುತ್ತದೆ:ಮಗುವಿನ ಕಿವಿಯನ್ನು ಚುಚ್ಚಿದ ಬಿಂದುವು ಎರಡು ಅತ್ಯಂತ ಅವಶ್ಯಕವಾದ ಆಕ್ಯುಪ್ರೆಶರ್ ಪಾಯಿಂಟ್‌ಗಳು ಮಾಸ್ಟರ್ ಸೆನ್ಸರಿಯಲ್ ಮತ್ತು ಮಾಸ್ಟರ್ ಸೆರೆಬ್ರಲ್ ಪಾಯಿಂಟ್‌ಗಳಾಗಿವೆ. ಈ ಅಂಶಗಳು ಮಗುವಿನ ಶ್ರವಣ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖವಾದವುಗಳಾಗಿವೆ. ಆಕ್ಯುಪ್ರೆಶರ್ ತಜ್ಞರ ಪ್ರಕಾರ ಟಿನಿಟಸ್‌ನ ಲಕ್ಷಣಗಳನ್ನು ನಿವಾರಿಸಲು ಇದು ಉತ್ತಮ ಸ್ಥಳ.

Latest Videos

click me!