ಬ್ಲಾಕ್ ಆಗಿರುವ ಸಿಂಕ್ ಸರಿಪಡಿಸಲು ಇಲ್ಲಿದೆ ಸೂಪರ್ ಟ್ರಿಕ್ಸ್

First Published Mar 29, 2021, 4:45 PM IST

ಅಡುಗೆ ಮನೆ ಮತ್ತು ಸ್ನಾನದ ಕೋಣೆಗಳಲ್ಲಿನ ಸಿಂಕ್ ಗಳು ಸಾಮಾನ್ಯವಾಗಿ ನಾವು ಅಜಾಗರೂಕತೆಯಿಂದ ಬಿಸಾಡುವ ವೇಸ್ಟ್ ಗಳಿಂದಾಗಿ ಬ್ಲಾಕ್ ಆಗುತ್ತವೆ. ಆದಾಗ್ಯೂ, ಸಿಂಕ್ ಬ್ಲಾಕ್ ಅದಾಗೆಲ್ಲಾ ಪ್ಲಂಬರ್ ಗೆ ಕರೆ ಮಾಡುವ ಅಥವಾ ಅಪಾಯಕಾರಿ ರಾಸಾಯನಿಕದ ಬಾಟಲಿಯನ್ನು ಸುರಿಯಬೇಕಾಗಿಲ್ಲ. ಮನೆಯಲ್ಲಿ ಬಳಸುವ ಕ್ಲೀನಿಂಗ್ ಉತ್ಪನ್ನಗಳು ಕೂಡ ವಿಷಪೂರಿತವಾಗಿರಬಹುದು. ಆದ್ದರಿಂದ ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಅಡ್ಡ ಪರಿಣಾಮಗಳನ್ನು ಬೀಟ್ ಮಾಡಲು, ಈ ಅಡುಗೆ ಮನೆಯ ಸಾಮಾಗ್ರಿಗಳನ್ನು ಬಳಸಿ  ಸಿಂಕ್ ಅನ್ನು ನೈಸರ್ಗಿಕವಾಗಿ ಹೊರಹಾಕಲು ಪ್ರಯತ್ನಿಸಬಹುದು.

ಕುದಿಯುವ ನೀರು ಬಹುಶಃ ಒಂದು ಸಿಂಕ್ ಅನ್ನು ತೆರವುಗೊಳಿಸಲು ಅತ್ಯುತ್ತಮ ನೈಸರ್ಗಿಕ ವಿಧಾನವಾಗಿದೆ. ಒಂದು ವೇಳೆ ಬ್ಲಾಕ್ ಗಣನೀಯ ಪ್ರಮಾಣದಲ್ಲಿಲ್ಲದಿದ್ದರೆ ಆ ಪ್ರದೇಶವನ್ನು ತೆರವುಮಾಡಿದರೆ ಸಾಕು.
undefined
ಒಂದು ಕೆಟಲ್ ನಲ್ಲಿ ಸ್ವಲ್ಪ ನೀರನ್ನು ಕುದಿಸಿ, ಬೇಸಿನ್ ಗೆ ಸುರಿಯಿರಿ. ಸಿಂಕ್ ಸಂಪೂರ್ಣವಾಗಿ ಖಾಲಿಯಾಗದಿದ್ದರೆ, ಇನ್ನೊಮ್ಮೆ ಕುದಿಯುವ ನೀರನ್ನು ಸುರಿಯಿರಿ.
undefined
ಅಡುಗೆ ಸೋಡಾ:ಬೇಸಿನ್ ನಲ್ಲಿ ಸ್ವಲ್ಪ ಬೇಕಿಂಗ್ ಸೋಡಾವನ್ನು ಹಾಕಬಹುದು. ಅರ್ಧ ಗಂಟೆ ಬಿಟ್ಟು ಮೂರು ಕಪ್ ಕುದಿಯುವ ನೀರನ್ನು ಸುರಿಯಿರಿ. ಅಡುಗೆ ಸೋಡಾ ಮತ್ತು ನೀರು ತ್ಯಾಜ್ಯವನ್ನು ಕರಗಿಸುವ ಕ್ರಿಯೆಯನ್ನು ಮಾಡುತ್ತದೆ ಮತ್ತು ಚರಂಡಿ ಯ ಪೈಪ್ ನ ಮೇಲೆ ಕ್ಲಾಗ್ ಚಲಿಸಲು ಸಹಾಯ ಮಾಡುತ್ತದೆ.
undefined
ಉಪ್ಪು:ಅಡುಗೆ ಸೋಡಾ ಮತ್ತು ಬಿಸಿ ನೀರಿಗೆ ಉಪ್ಪನ್ನು ಸೇರಿಸಿ ಆ ಪ್ರದೇಶವನ್ನು ಸ್ವಚ್ಛಗೊಳಿಸಬಹುದು. ಮೊದಲು ಸಿಂಕ್ ಅನ್ನು ಒಂದು ಬಟ್ಟೆಯಿಂದ ಒಣಗಿಸಿ. ಅರ್ಧ ಕಪ್ ಉಪ್ಪು ಹಾಕಿ, ನಂತರ ಅರ್ಧ ಕಪ್ ಬೇಕಿಂಗ್ ಸೋಡಾ ಹಾಕಿ. ಅರ್ಧ ಗಂಟೆ ಬಿಟ್ಟು ಒಂದು ಕಪ್ ಬಿಸಿ ನೀರನ್ನು ಸುರಿಯಿರಿ. ಇದು ನಿಧಾನವಾಗಿ ಕರಗುತ್ತದೆ. ರಾತ್ರಿ ಉಪ್ಪು ಮತ್ತು ಅಡುಗೆ ಸೋಡಾವನ್ನು ಸುರಿದರೆ, ಬೆಳಿಗ್ಗೆ ಬಯಸಿದ ಫಲಿತಾಂಶಗಳನ್ನು ಕಾಣುತ್ತೀರಿ.
undefined
ವಿನೆಗರ್:ಗ್ರೀಸ್ ನಿಂದಾಗಿ ಸಿಂಕ್ ಬ್ಲಾಕ್ ಆಗಿದೆ ಎಂದು ಭಾವಿಸಿದರೆ, ಅಡುಗೆ ಸೋಡಾದೊಂದಿಗೆ ವಿನೆಗರ್ ಅನ್ನು ಸೇರಿಸಿ ಪ್ರಯತ್ನಿಸಿ. ಮೊದಲು ಅರ್ಧ ಕಪ್ ಅಡುಗೆ ಸೋಡಾವನ್ನು ಸಿಂಕ್ ನಲ್ಲಿ ಹಾಕಿ, ನಂತರ ತಕ್ಷಣ ಅರ್ಧ ಕಪ್ ವಿನೆಗರ್ ಸುರಿಯಿರಿ.
undefined
ಸಾದಾ ಬಿಳಿ ವಿನೆಗರ್ ಅಥವಾ ಆಪಲ್ ಸೈಡರ್ ವಿನೆಗರ್ ಬಳಸಬಹುದು. ರಾಸಾಯನಿಕಗಳು ಒಟ್ಟಿಗೆ ಪ್ರತಿಕ್ರಿಯಿಸಲು ಒಂದು ಗಂಟೆ ಕಾಲ ಸಿಂಕ್ ಅನ್ನು ಮುಚ್ಚಿ. ನಂತರ, ತ್ಯಾಜ್ಯ ವಸ್ತುಗಳನ್ನು ಫ್ಲಶ್ ಮಾಡಲು ಕುದಿಯುವ ನೀರನ್ನು ಸುರಿಯಿರಿ.
undefined
ನಿಂಬೆ ರಸ:ಅಡುಗೆ ಮನೆಯ ಸಿಂಕ್ ಗಳನ್ನು ತೆರವುಗೊಳಿಸಲು ನಿಂಬೆ ಉತ್ತಮ ಆಯ್ಕೆಯಾಗಿದೆ. ಇದು ಪ್ರಕೃತಿಯಲ್ಲಿ ಆಮ್ಲೀಯವಾಗಿರುವುದರಿಂದ ತ್ಯಾಜ್ಯವನ್ನು ಕರಗಿಸಲು ನೆರವಾಗುತ್ತದೆ. 1 ಕಪ್ ಅಡುಗೆ ಸೋಡಾವನ್ನು ಒಂದು ಕಪ್ ನಿಂಬೆ ರಸದೊಂದಿಗೆ ಬೆರೆಸಿ ಸಿಂಕ್ ಗೆ ಹಾಕಬಹುದು. ನಂತರ ಒಂದು ಕಪ್ ಕುದಿಯುವ ನೀರನ್ನು ಹಾಕಿ, ಡ್ರೈನೇಜ್ ಪೈಪ್ ಮೂಲಕ ಸುಲಭವಾಗಿ ಹರಿದು ಹೋಗಲು ಬಿಡಬೇಕು.
undefined
ಇತರ ಟಿಪ್ಸ್ :ಸಿಂಕ್ ನ ಕೆಳಗೆ ಆಹಾರ ತ್ಯಾಜ್ಯಗಳು, ಘನಪದಾರ್ಥಗಳು ಮತ್ತು ಅಡುಗೆ ಮನೆಯ ಎಣ್ಣೆಗಳನ್ನು ಎಸೆಯುವುದನ್ನು ತಪ್ಪಿಸಿ.
undefined
ಸಿಂಕ್ ಬ್ಲಾಕ್ ಆಗದಿದ್ದರೂ ಸಹ ಅಡುಗೆ ಸೋಡಾ ಮತ್ತು ವಿನೆಗರ್ ಅನ್ನು ನಿಯಮಿತ ಕ್ಲೀನಿಂಗ್ ವಿಧಾನವಾಗಿ ಬಳಸಬಹುದು.
undefined
ಸಿಂಕ್ ನ ಕೆಳಗೆ ಲೋಹದ ತಂತಿಯನ್ನು ಕೂಡ ಹಾಕಬಹುದು ಮತ್ತು ಮುಚ್ಚಿರುವ ವಸ್ತುಗಳನ್ನು ಹೊರತೆಗೆಯಲು ಅಥವಾ ತಳ್ಳಲು ಪ್ರಯತ್ನಿಸಬಹುದು.
undefined
ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಿದ್ದರೆ, ಕಣ್ಣಿನ ಕನ್ನಡಕಗಳನ್ನು ಧರಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ ದ್ರವವು ಮುಖಕ್ಕೆ ಮತ್ತೆ ಚಿಮ್ಮಬಹುದು.
undefined
click me!