Best food combination: ಉದ್ದವಾದ, ದಟ್ಟವಾದ , ಯಾವುದೇ ಸಮಸ್ಯೆಗಳಿಲ್ಲದ ಕೂದಲು ನಿಮ್ಮದಾಗಬೇಕು ಅಂದ್ರೆ ನೀವು ಕೆಲವು ಆಹಾರಗಳನ್ನು ಜೊತೆಯಾಗಿ ಸೇವಿಸಬೇಕು. ಈ ಆಹಾರಗಳ ಕಾಂಬಿನೇಶನ್ ನಿಮ್ಮ ಆರೋಗ್ಯದ ಜೊತೆಗೆ ಸುಂದರ ಕೇಶವನ್ನು ಸಹ ನಿಮಗೆ ನೀಡುತ್ತೆ. ಟ್ರೈ ಮಾಡಿ ನೋಡಿ.
ಸರಿಯಾದ ಆಹಾರಗಳನ್ನು ಒಟ್ಟಿಗೆ ಸೇವಿಸಿದಾಗ, ರಕ್ತ ಪರಿಚಲನೆ, ಹಾರ್ಮೋನ್ ಸಮತೋಲನ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಇವೆಲ್ಲವೂ ಕೂದಲು ಉದುರುವುದು, ಕೂದಲು ಬಿಳಿಯಾಗುವುದು, ತಲೆಹೊಟ್ಟು ಮತ್ತು ಕೂದಲು ತೆಳುವಾಗುವುದರ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ.
29
ಕರಿಬೇವು + ಮಜ್ಜಿಗೆ
ಕಬ್ಬಿಣ + ಪ್ರೋಬಯಾಟಿಕ್‌ಗಳಿಂದ ಆಹಾರ ಇದಾಗಿದ್ದು. ಇದನ್ನು ಜೊತೆಯಾಗಿ ಕುಡಿದರೆ, ದೇಹವು ಉತ್ತಮ ರೀತಿಯಲ್ಲಿ ಪೋಷಕಾಂಶವನ್ನು ಹೀರಿಕೊಳ್ಳುತ್ತದೆ.
ಇದು ಮೆಲನಿನ್ ಉತ್ಪಾದನೆಯನ್ನು ಬೆಂಬಲಿಸುತ್ತದೆ, ಅಲ್ಲದೇ ಅಕಾಲಿಕ ಬಿಳಿ ಕೂದಲಿನ ಸಮಸ್ಯೆಯನ್ನೂ ವಿಳಂಬಗೊಳಿಸಲು ಸಹಾಯ ಮಾಡುತ್ತದೆ.
39
ಪಾಲಕ್ + ನಿಂಬೆ
ವಿಟಮಿನ್ ಸಿ ನಿಮ್ಮ ದೇಹವು ತರಕಾರಿಗಳಿಂದ ಕಬ್ಬಿಣ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಇದರಲ್ಲಿರುವ ಕಬ್ಬಿಣಾಂಶ, ಆಕ್ಸಿಜನ್ ಮತ್ತು ಫಾಲಿಸೆಲ್ಸ್ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.