ಚಹಾಕ್ಕೆ ಸಕ್ಕರೆ ಬದಲು ಬೆಲ್ಲ ಸೇರಿಸಿದ್ರೆ ಆರೋಗ್ಯಕ್ಕೆ ಒಳ್ಳೇದು!

First Published | Mar 2, 2024, 5:01 PM IST

ಬೆಲ್ಲವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ತಿನ್ನುವ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ನಿಮ್ಮ ಚಹಾದ ಸಿಹಿಯನ್ನು ಆರೋಗ್ಯಕರ ರೀತಿಯಲ್ಲಿ ಹೆಚ್ಚಿಸಲು ನೀವು ಸಕ್ಕರೆಯ ಬದಲಿಗೆ ಇದನ್ನು ಬಳಸಬಹುದು.  ಅದೇನು ಅನ್ನೋದನ್ನು ನೋಡೋಣ. 
 

jaggery-tea

ಹೆಚ್ಚಿನ ಜನರ ಫೇವರಿಟ್ ಡ್ರಿಂಕ್ ಅಂದ್ರೆ ಅದು ಚಹಾ (Tea). ಜನರು ತಮ್ಮ ಮುಂಜಾನೆಯನ್ನು ಆರಂಭಿಸೋದೇ ಚಹಾ ಕುಡಿಯುವ ಮೂಲಕ.  ಕೆಲವು ಜನ ದಿನಕ್ಕೆ 2-3 ಬಾರಿ ಚಹಾ ಕುಡಿಯುತ್ತಾರೆ. ಚಳಿಗಾಲ ಇರಲಿ, ಬೇಸಿಗೆ ಇರಲಿ, ಮಳೆಗಾಲ ಇರಲಿ ಯಾವುದೇ ಕಾಲದಲ್ಲೂ ಜನರು ಚಹಾ ಕುಡಿಯೋದಕ್ಕೆ ಇಷ್ಟಪಡ್ತಾರೆ. ಆದರೆ ಹೆಚ್ಚು ಚಹಾ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ಆದರೆ, ಚಹಾದಲ್ಲಿ ಸಕ್ಕರೆ ಸೇರಿಸೋದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ನೀವು ಚಹಾ ಪ್ರಿಯರಾಗಿದ್ದರೆ, ಸಕ್ಕರೆಯ ಬದಲು, ಚಹಾದಲ್ಲಿ ಬೆಲ್ಲವನ್ನು ಬಳಸಬಹುದು. ಆರೋಗ್ಯದ ದೃಷ್ಟಿಯಿಂದ ಬೆಲ್ಲದ ಚಹಾ (Jaggery tea) ತುಂಬಾ ಪ್ರಯೋಜನಕಾರಿ. ಬೆಲ್ಲದ ಚಹಾ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.

ಬೆಲ್ಲದ ಚಹಾ ಕುಡಿಯುವುದರಿಂದಾಗುವ ಪ್ರಯೋಜನಗಳು
ದೇಹಕ್ಕೆ ಉಷ್ಣತೆಯನ್ನು ಹೆಚ್ಚಿಸುತ್ತೆ

ಸೌಮ್ಯ ಶೀತ ವಾತಾವರಣದಲ್ಲಿ (cold weather) ಬೆಲ್ಲದ ಚಹಾವನ್ನು ಕುಡಿಯುವುದು ದೇಹದಲ್ಲಿ ಉಷ್ಣತೆಯನ್ನು ಕಾಪಾಡುತ್ತದೆ. ಬೆಲ್ಲದ ಪರಿಣಾಮವು ಬಿಸಿಯಾಗಿರುತ್ತದೆ. ಇದನ್ನು ಸೇವಿಸುವ ಮೂಲಕ, ದೇಹವು ಬೆಚ್ಚಗಿರುತ್ತದೆ ಮತ್ತು ಕಡಿಮೆ ಶೀತವನ್ನು ಅನುಭವಿಸುತ್ತದೆ.

Tap to resize

ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ
ಬೆಲ್ಲವು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ, ಇದರಲ್ಲಿ ವಿಟಮಿನ್ ಗಳು, ಕಬ್ಬಿಣ, ಸತು, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಇತ್ಯಾದಿಗಳಿವೆ, ಇದು ರೋಗನಿರೋಧಕ ಶಕ್ತಿಯನ್ನು (immunity power) ಬಲವಾಗಿರಿಸುತ್ತದೆ.

ರಕ್ತ ನಷ್ಟವನ್ನು ನಿವಾರಿಸುತ್ತದೆ
ಬೆಲ್ಲವನ್ನು ಕಬ್ಬಿಣದ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ.  ಇದನ್ನು ಸೇವಿಸೋದರಿಂದ ರಕ್ತಹೀನತೆ (animea) ಸಮಸ್ಯೆ ಅನುಭವಿಸುವ ಸಾಧ್ಯತೆ ಕಡಿಮೆ. ಇದು ರಕ್ತಪರಿಚಲನೆ ಹೆಚ್ಚಿಸುತ್ತೆ. 
 

ನಿರ್ವಿಷಗೊಳಿಸುತ್ತದೆ
ಆಂಟಿಆಕ್ಸಿಡೆಂಟ್ಸ್ (Antioxidant)ಬೆಲ್ಲದಲ್ಲಿ ಕಂಡುಬರುತ್ತವೆ, ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಯಕೃತ್ತಿನಿಂದ ವಿಷಕಾರಿ ವಸ್ತುಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಬೆಲ್ಲವು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವ ಆಹಾರ ಪದಾರ್ಥ, ಅಂದರೆ, ಅದರ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (blood sugar level) ತ್ವರಿತವಾಗಿ ಹೆಚ್ಚಿಸುವುದಿಲ್ಲ. ಇದರ ಸೇವನೆಯು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತೆ
ಬೆಲ್ಲದ ಪರಿಣಾಮವು ಬಿಸಿಯಾಗಿರುತ್ತದೆ, ಇದು ಉಸಿರಾಟದ ಸಮಸ್ಯೆಗಳನ್ನು ದೂರವಿರಿಸುತ್ತದೆ. ಬೆಲ್ಲವು ಶೀತ ಮತ್ತು ಕೆಮ್ಮಿನಂತಹ ಸೀಸನಲ್ ಕಾಯಿಲೆಗಳಿಂದ (seasonal health issues) ದೇಹವನ್ನು ರಕ್ಷಿಸುತ್ತದೆ.

ಶಕ್ತಿ (Energy)
ಬೆಲ್ಲವು ನೈಸರ್ಗಿಕ ಸಿಹಿಕಾರಕ. ಇದು ನಿಧಾನವಾಗಿ ದೇಹದಲ್ಲಿ ಸಕ್ಕರೆಯನ್ನು ಬಿಡುಗಡೆ ಮಾಡುತ್ತದೆ, ಇದು ದಿನವಿಡೀ ಶಕ್ತಿಯನ್ನು ಉಳಿಸಿಕೊಳ್ಳುತ್ತದೆ. ಇದರಿಂದ ನೀವು ದಿನವಿಡೀ ಎನರ್ಜಿಟಿಕ್ ಆಗಿರಲು ಸಹಾಯ ಮಾಡುತ್ತದೆ. 

Latest Videos

click me!