ಬೇಸಿಗೆಯಲ್ಲಿ ತಾಳೆ ಹಣ್ಣು ತಿನ್ನಲೇಬೇಕು, ಯಾಕೆ ಗೊತ್ತಾ?

First Published | May 23, 2023, 4:38 PM IST

ಬೇಸಿಗೆಯಲ್ಲಿ ಹಣ್ಣುಗಳು ನಿಮಗೆ ತಾಜಾ ಅನುಭವವನ್ನು ನೀಡುವುದಲ್ಲದೆ, ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ.  ಅದರಲ್ಲೂ ನೀರಿನ ಅಂಶ ಹೆಚ್ಚಾಗಿರುವ ಹಣ್ಣುಗಳನ್ನು ಸೇವಿಸುವುದು ಡಿಹೈಡ್ರೇಶನ್ ಸಮಸ್ಯೆಯನ್ನು ನಿವಾರಿಸುತ್ತೆ. ಹಾಗಾಗಿ ನಿಮ್ಮ ಆಹಾರದಲ್ಲಿ ತಾಳೆ ಹಣ್ಣು ಸೇರಿಸಲು ಮರೆಯಬೇಡಿ.

ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ, ದೇಹವು ನಿರ್ಜಲೀಕರಣಗೊಳ್ಳುತ್ತೆ (dehydration) ಮತ್ತು ಶಕ್ತಿಯ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ, ಆದ್ದರಿಂದ, ಬೇಸಿಗೆಯಲ್ಲಿ ಸದೃಢವಾಗಿ ಮತ್ತು ಸಕ್ರಿಯವಾಗಿರಲು, ಕಲ್ಲಂಗಡಿ, ಮಾವು, ಲಿಚಿ, ಏಪ್ರಿಕಾಟ್, ನಿಂಬೆ ಮುಂತಾದ ಅನೇಕ ರೀತಿಯ ಸೀಸನಲ್ ಹಣ್ಣುಗಳನ್ನು ಆಹಾರದಲ್ಲಿ ಸೇರಿಸೋದು ಉತ್ತಮ. ಇಂದು ನಾವು ಒಂದು ಹಣ್ಣಿನ ಬಗ್ಗೆ  ಹೇಳುತ್ತಿದ್ದೇವೆ, ಇದನ್ನ ತಿನ್ನುವ ಮೂಲಕ ಬೇಸಿಗೆಯ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.

ಐಸ್ ಆಪಲ್ ಅಥವಾ ತಾಳೆ ಹಣ್ಣಿನ (ice apple) ಬಗ್ಗೆ ನೀವು ಈ ಹಿಂದೆ ಎಂದಾದರೂ ಕೇಳಿದ್ದೀರಾ? ಖಂಡಿತಾ ಕೇಳಿರುತ್ತೀರಿ. ಇದು ದಕ್ಷಿಣ ಭಾರತದಲ್ಲಿ ಕಂಡುಬರುವ ಹಣ್ಣು ಮತ್ತು ಜನರು ಅದನ್ನು ತುಂಬಾನೆ ಇಷ್ಟಪಟ್ಟು ತಿನ್ನುತ್ತಾರೆ. ಇದನ್ನು ಸಾಮಾನ್ಯವಾಗಿ ತಾಳೆ ಹಣ್ಣು, ಐಸ್ ಆಪಲ್, ಈರೋಳು, ನುಂಗು ಎಂದೆಲ್ಲಾ ಕರೆಯಲಾಗುತ್ತದೆ.  ತಾಳೆ ಹಣ್ಣು ದೇಹವನ್ನು ತಂಪಾಗಿಡುತ್ತದೆ.. ಇದನ್ನು ಬೇಸಿಗೆಗೆ ಪರಿಪೂರ್ಣ ಉಪಾಹಾರವೆಂದು ಪರಿಗಣಿಸಲಾಗುತ್ತದೆ. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ. 

Latest Videos


ತಾಳೆ ಹಣ್ಣಿನಲ್ಲಿರುವ ಪೋಷಕಾಂಶಗಳು
ತಾಳೆ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ಗಳು, ಫೈಟೊನ್ಯೂಟ್ರಿಯೆಂಟ್ಗಳು ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ, ಆದರೆ ಫೈಬರ್, ಪ್ರೋಟೀನ್ ಮತ್ತು ವಿಟಮಿನ್-ಸಿ, ಎ, ಇ ಮತ್ತು ಕೆ ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದಲ್ಲದೆ, ಇದು ಕಬ್ಬಿಣ, ಪೊಟ್ಯಾಸಿಯಮ್, ಸತು ಮತ್ತು ರಂಜಕದಂತಹ ಖನಿಜಗಳನ್ನು ಸಹ ಹೊಂದಿರುತ್ತದೆ.  

ತಾಳೆ ಹಣ್ಣನ್ನು ನೀವು ಈ ಎಲ್ಲಾ ಕಾರಣಗಳಿಂದಾಗಿ ತಿನ್ನಬಹುದು
ಬೆಳಿಗ್ಗೆ ಎದ್ದ ನಂತರ ಹೊಟ್ಟೆ ಉಬ್ಬರ ಸಮಸ್ಯೆ ಇದ್ದರೆ.
ಆಮ್ಲೀಯತೆಯಿಂದಾಗಿ ಆಗಾಗ್ಗೆ ತಲೆನೋವು ಉಂಟಾಗುತ್ತಿದ್ದರೆ
ಮಲಬದ್ಧತೆ (constipation) ಮತ್ತು ಭಾರದ ಸಮಸ್ಯೆ ಇದ್ದರೆ
ಟ್ಯಾನಿಂಗ್ ಕಾರಣದಿಂದಾಗಿ, ಚರ್ಮದ ಬಣ್ಣವು ಡಲ್ ಆಗಿದ್ರೆ
ಚರ್ಮದಲ್ಲಿ ತುರಿಕೆ ಮತ್ತು ದದ್ದುಗಳ ಸಮಸ್ಯೆ ಇದ್ರೆ ನೀವು ಇದನ್ನ ತಿನ್ನಬಹುದು.
 

ರೋಗ ನಿರೋಧಕ ಶಕ್ತಿ ವರ್ಧಕ (immunity power)
ತಾಳೆ ಹಣ್ಣಿನಲ್ಲಿ ವಿಟಮಿನ್-ಸಿ ಇದ್ದು, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಬೇಸಿಗೆಯಲ್ಲಿ ಇದನ್ನು ತಿನ್ನೋದ್ರಿಂದ ದೇಹವು ರೋಗಗಳು ಮತ್ತು ಸೋಂಕುಗಳ ವಿರುದ್ಧ ಸುಲಭವಾಗಿ ಹೋರಾಡಬಹುದು.

ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಚಿಕಿತ್ಸೆ (constipation and gastric)
ಬೇಸಿಗೆಯಲ್ಲಿ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚು ತೊಂದರೆ ನೀಡುತ್ತವೆ. ತಾಳೆ ಹಣ್ಣು ವಿಟಮಿನ್ ಬಿ -12 ಅನ್ನು ಹೊಂದಿರುತ್ತದೆ, ಇದನ್ನು ತಿನ್ನುವುದರಿಂದ ಹೊಟ್ಟೆಯ ಆಮ್ಲೀಯತೆಯನ್ನು ಗುಣಪಡಿಸುತ್ತದೆ. ಅಲ್ಲದೆ, ಇದು ದೇಹದಿಂದ ಎಲ್ಲಾ ಜೀವಾಣುಗಳನ್ನು ತೆಗೆದುಹಾಕುತ್ತದೆ. ಇದು ಫೈಬರ್ ಅನ್ನು ಸಹ ಹೊಂದಿರೋದ್ರಿಂದ ಮಲಬದ್ಧತೆಯ ಸಮಸ್ಯೆಯನ್ನು ಸಹ ನಿವಾರಿಸುತ್ತದೆ.

ಚರ್ಮದ ದದ್ದುಗಳನ್ನು ನಿವಾರಿಸುತ್ತೆ (skin infection)
ಬೇಸಿಗೆಯಲ್ಲಿ ಚರ್ಮದ ದದ್ದುಗಳ ಸಮಸ್ಯೆ ಸಾಮಾನ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ತಾಳೆ ಹಣ್ಣು ತಿನ್ನುವ ಮೂಲಕ ಪರಿಹಾರವನ್ನು ಪಡೆಯುವಿರಿ. ಇದು ಕಿರಿಕಿರಿ ಮತ್ತು ತುರಿಕೆಯನ್ನು ನಿವಾರಿಸುತ್ತೆ. ಇದಲ್ಲದೆ, ಇದನ್ನು ತಿನ್ನುವುದರಿಂದ ಬೇಸಿಗೆಯಲ್ಲಿ ಮುಖವು ಹೊಳೆಯುತ್ತೆ. ಇದು ಫ್ರೀ ರ್ಯಾಡಿಕಲ್ಗಳ ಪರಿಣಾಮಗಳಿಂದ ಚರ್ಮವನ್ನು ರಕ್ಷಿಸುತ್ತದೆ.  

ದೇಹವು ಹೈಡ್ರೇಟ್ ಆಗಿ ಉಳಿಯುತ್ತೆ (body hydrate)
ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆಯಿಂದಾಗಿ, ದೇಹದಲ್ಲಿ ನೀರಿನ ಕೊರತೆ ಉಂಟಾಗಿ ನಿರ್ಜಲೀಕರಣದ ಸಮಸ್ಯೆ ಉಂಟಾಗುತ್ತೆ, ಇದು ದೇಹದ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ತಾಳೆ ಹಣ್ಣಿನಲ್ಲಿ ನೀರಿನ ಪ್ರಮಾಣವು ಹೆಚ್ಚಾಗಿರುತ್ತದೆ, ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತೆ.

ಹೊಟ್ಟೆ ಉಬ್ಬರಕ್ಕೆ ಚಿಕಿತ್ಸೆ (bloating)
ನಿಯಮಿತ ವ್ಯಾಯಾಮ ಮತ್ತು ಆಹಾರದ ಬಗ್ಗೆ ಗಮನ ಹರಿಸಿದರೂ, ಬೇಸಿಗೆಯಲ್ಲಿ ಹೊಟ್ಟೆ ಉಬ್ಬರಿಸುವ ಸಮಸ್ಯೆ ಕಾಡುತ್ತಿದ್ದರೆ, ಈ ಸಮಯದಲ್ಲಿ ತಾಳೆ ಹಣ್ಣನ್ನು ಸೇವಿಸಿ. ಇದರಿಂದ ಆರೋಗ್ಯದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತೆ. 

ತಲೆನೋವನ್ನು ನಿವಾರಿಸುತ್ತದೆ (headache)
ತಲೆನೋವು ಬೇಸಿಗೆಯಲ್ಲಿ ಹೆಚ್ಚಿನ ಜನರು ತೊಂದರೆಗೊಳಗಾಗುವ ಸಮಸ್ಯೆಯಾಗಿದೆ. ಮಲಬದ್ಧತೆಯಿಂದಲೂ ಈ ಸಮಸ್ಯೆ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತಾಳೆ ಹಣ್ಣು ಸಹಾಯಕವಾಗಬಹುದು. ಇದು ತಂಪಾಗಿಸುವ ಗುಣಗಳನ್ನು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದರಿಂದ ತಲೆ ನೋವು ನಿವಾರಣೆಯಾಗುತ್ತೆ.

click me!