ಖರ್ಜೂರದಲ್ಲಿ (Dates) ಫೈಬರ್ (Fiber), ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣ (Iron), ಪ್ರೋಟೀನ್ (Protein) ಇತ್ಯಾದಿ ಖನಿಜಗಳು ಸಮೃದ್ಧವಾಗಿವೆ. ಇದರ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗುತ್ತೆ. ಇದನ್ನು ಪ್ರತಿದಿನ ಸೇವಿಸೋದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಖರ್ಜೂರ ಸೇವಿಸೋದರಿಂದ ಮಾತ್ರವಲ್ಲ ಅದರ ನೀರನ್ನು ಕುಡಿಯೋದರಿಂದ ಏನೆಲ್ಲ ಪ್ರಯೋಜನಗಳಿವೆ ನೋಡೋಣ.
ಚರ್ಮಕ್ಕೆ ಪ್ರಯೋಜನಕಾರಿ
ಖರ್ಜೂರದ ನೀರು ದೇಹದಲ್ಲಿ ಸಂಗ್ರಹವಾದ ಕೊಳೆಯನ್ನು ತೆಗೆದು ಹಾಕುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ (blood purifier). ಇದು ಮೊಡವೆ (Pimple) ಮತ್ತು ಗುಳ್ಳೆಗಳಂತಹ ಚರ್ಮದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ಬಾಡಿ ಡಿಟಾಕ್ಸ್ (Body Detoxification)
ಖರ್ಜೂರದ ನೀರು ದೇಹದಲ್ಲಿ ಸಂಗ್ರಹವಾಗಿರುವ ಜೀವಾಣುಗಳು, ಕೊಳೆ ಮತ್ತು ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡಲು ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ಇದರ ಸೇವನೆಯು ದೇಹವನ್ನು ನಿರ್ವಿಷಗೊಳಿಸುತ್ತದೆ (body detox).
ಉತ್ತಮ ಜೀರ್ಣಕ್ರಿಯೆ
ಖರ್ಜೂರದ ನೀರನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ಗ್ಯಾಸ್, ಆಮ್ಲೀಯತೆ ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು (digestion problem) ನಿವಾರಿಸುತ್ತದೆ.
ಶಕ್ತಿ ಹೆಚ್ಚಿಸುತ್ತೆ
ಖರ್ಜೂರದ ನೀರು ನೈಸರ್ಗಿಕ ಶಕ್ತಿ (natural power) ಪಾನೀಯವಾಗಿ ಕಾರ್ಯನಿರ್ವಹಿಸುತ್ತದೆ. ಇದರ ಬಳಕೆಯು ಆಯಾಸ ಮತ್ತು ಆಲಸ್ಯವನ್ನು ದೂರವಿರಿಸುತ್ತದೆ. ಹಾಗಾಗಿ ಇದನ್ನು ಪ್ರತಿದಿನ ಸೇವನೆ ಮಾಡೋದು ಉತ್ತಮ.
ಹೃದಯದ ಆರೋಗ್ಯಕ್ಕೆ ಉತ್ತಮ
ಇದರಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳಿವೆ, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಮೂಳೆಗಳನ್ನು ಬಲಪಡಿಸುತ್ತೆ
ಖರ್ಜೂರದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳು ಸಮೃದ್ಧವಾಗಿವೆ. ಹಾಗಾಗಿ ಖರ್ಜೂರ ನೀರನ್ನು ಕುಡಿಯುವುದರಿಂದ ಮೂಳೆಗಳು ಸ್ಟ್ರಾಂಗ್ ಆಗುತ್ತವೆ.
ಮೆದುಳಿನ ಆರೋಗ್ಯ ಉತ್ತಮವಾಗಿರುತ್ತದೆ
ಖರ್ಜೂರದಲ್ಲಿ ವಿಟಮಿನ್ ಬಿ 6 (Vitamin B6) ಮತ್ತು ಮೆಗ್ನೀಸಿಯಮ್ ನಂತಹ ಪೋಷಕಾಂಶಗಳಿವೆ. ಇದರ ನೀರನ್ನು ಕುಡಿಯುವುದರಿಂದ ಬುದ್ಧಿ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಈ ನೀರನ್ನು ಮಕ್ಕಳಿಗೆ ಕೊಡೋದು ಉತ್ತಮ.