ಇಲ್ ಕೇಳಿ ಟೈಟಾಗಿ ಬೆಲ್ಟ್ ಕಟ್ಟೋದು ಸಂತಾನೋತ್ಪತ್ತಿಗೆ ತರಬಹುದು ಕುತ್ತು!

First Published Apr 23, 2024, 6:25 PM IST

ಬಟ್ಟೆಗಳನ್ನು ಸರಿಯಾಗಿ ಸೆಟ್ ಮಾಡಲು, ಅಥವಾ ಡೆನಿಮ್, ಜೀನ್ಸ್ ಪ್ಯಾಂಟ್ ಸರಿಯಾಗಿ ಸೊಂಟದಲ್ಲಿ ಉಳಿಯಲು ಟೈಟ್ ಆಗಿ ಬೆಲ್ಟ್ ಕಟ್ಟುತ್ತೀರಾ? ಹಾಗಿದ್ರೆ ಅದರಿಂದಾಗುವ ಅಪಾಯದ ಬಗ್ಗೆಯೂ ಹುಷಾರಾಗಿರಿ. 
 

ಇತ್ತೀಚಿನ ದಿನಗಳಲ್ಲಿ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಜೀನ್ಸ್ ಪ್ಯಾಂಟ್ (jeans pant) ಧರಿಸುತ್ತಾರೆ. ಕೆಲವರು ಬೆಲ್ಟ್ ಇಲ್ಲದೆ ಜೀನ್ಸ್ ಧರಿಸಿದರೆ, ಕೆಲವರು ಪ್ಯಾಂಟ್ ಫಿಟ್ಟಿಂಗ್ ಕಾಪಾಡಿಕೊಳ್ಳಲು ಬೆಲ್ಟ್ ಟೈ ಮಾಡುತ್ತಾರೆ. ಇನ್ನೂ ಕೆಲವು ಜನರು ಬೆಲ್ಟ್ ಗಳನ್ನು ಬಿಗಿಯಾಗಿ ಕಟ್ಟುವ ಅಭ್ಯಾಸ ಹೊಂದಿದ್ದಾರೆ. ನೀವು ಸಹ ಇದನ್ನು ಮಾಡಿದರೆ, ಇಂದಿನಿಂದ ಈ ಅಭ್ಯಾಸವನ್ನು ಬದಲಾಯಿಸಿ ಏಕೆಂದರೆ ಈ ಕಾರಣದಿಂದಾಗಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ. ಬೆಲ್ಟ್ ಮಾತ್ರವಲ್ಲ, ಬಿಗಿಯಾಗಿ ಪ್ಯಾಂಟ್ ನಾಡೆಗಳನ್ನು ಕಟ್ಟೋದರಿಂದಾಲೂ ಉಂಟಾಗುತ್ತದೆ. 

ಏನೆಲ್ಲಾ ಸಮಸ್ಯೆ ಕಾಡುತ್ತೆ? 
ಬಿಗಿಯಾದ ಬೆಲ್ಟ್ ಧರಿಸುವುದರಿಂದ ನರಗಳ ಸಮಸ್ಯೆ ಹೆಚ್ಚಾಗುತ್ತದೆ. ಇದು ಸೊಂಟ ಅಥವ ಹೊಟ್ಟೆ ಭಾಗ ಮರಗಟ್ಟಬಹುದು.ಬಿಗಿಯಾದ ಬೆಲ್ಟ್ ಧರಿಸುವುದರಿಂದ ರಕ್ತನಾಳಗಳಲ್ಲಿ ರಕ್ತ ಪೂರೈಕೆಗೆ (blood supply)ಅವಕಾಶ ನೀಡುವುದಿಲ್ಲ.ಇದು ಕಿಬ್ಬೊಟ್ಟೆಯ ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸಲು ಕಾರಣವಾಗುತ್ತದೆ.

ಟೈಟ್ ಬೆಲ್ಟ್ ಧರಿಸೋದರಿಂದ ಹೆಚ್ಚು ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್‌ಗೆ (Acid Reflex) ಕಾರಣವಾಗುತ್ತದೆ, ವಾಸ್ತವವಾಗಿ, ಬಿಗಿಯಾದ ಬೆಲ್ಟ್ ನಿಮ್ಮ ಹೊಟ್ಟೆ ಮೇಲೆ ಒತ್ತಡವನ್ನುಂಟು ಮಾಡುತ್ತದೆ, ಇದರಿಂದಾಗಿ ಹೊಟ್ಟೆಯಲ್ಲಿರುವ ಆಮ್ಲವು ಗಂಟಲನ್ನು ತಲುಪುತ್ತದೆ. ಇದು ಆಸಿಡಿಟಿ (acidity) ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಬಿಗಿಯಾದ ಬೆಲ್ಟ್ ಧರಿಸುವುದರಿಂದ ಪೆಲ್ವಿಕ್ ಪ್ರದೇಶದ ಮೇಲೆ ಒತ್ತಡ ಉಂಟಾಗುತ್ತದೆ, ಇದು ಸಂತಾನೋತ್ಪತ್ತಿ ಅಂಗಗಳ (Fertility Organs) ಮೇಲೆ ಪರಿಣಾಮ ಬೀರುತ್ತದೆ ಮತ್ತು ಫಲವತ್ತತೆ (fertility) ಮೇಲೆ ಪರಿಣಾಮ ಬೀರುತ್ತದೆ. ಅಂದರೆ ಗರ್ಭಿಣಿಯಾಗೋ ಚಾನ್ಸಸ್ ಕಡಿಮೆ ಮಾಡುತ್ತೆ. 
 

ಬಿಗಿಯಾದ ಬೆಲ್ಟ್ ಗಳನ್ನು ಧರಿಸೋದರಿಂದ ಇದು ಬೆನ್ನಿನ ಮೂಳೆಗಳ ಮೇಲೆಯೂ ಪರಿಣಾಮ ಬೀರುತ್ತದೆ, ಇದರಿಂದಾಗಿ ನಿಮಗೆ ಬೆನ್ನು ನೋವಿನ ಸಮಸ್ಯೆ (back pain) ಕಾಡಬಹುದು. 

ಅಷ್ಟೇ ಅಲ್ಲ, ಸಿಸ್ಟಿಕ್ ನರ ಮತ್ತು ಇತರ ಅನೇಕ ನರಗಳು ನಿಮ್ಮ ಸೊಂಟದ ಸುತ್ತಲೂ ಹಾದುಹೋಗುತ್ತವೆ, ಇದು ಒತ್ತಡದಿಂದಾಗಿ ನಿಮ್ಮ ದೇಹಕ್ಕೆ ಹಾನಿಯನ್ನುಂಟು ಮಾಡುತ್ತದೆ. ಇದು ನಿಮ್ಮ ಪಾದಗಳು ಊದಿಕೊಳ್ಳಲು ಕಾರಣವಾಗಬಹುದು.
 

knee pain

ಬಿಗಿಯಾದ ಬೆಲ್ಟ್ ಗಳನ್ನು ಕಟ್ಟುವುದರಿಂದ ಬೆನ್ನುಮೂಳೆಯ ಬಿಗಿತಕ್ಕೆ ಕಾರಣವಾಗಬಹುದು. ಇದು ಗುರುತ್ವಾಕರ್ಷಣೆಯ ಕೇಂದ್ರವನ್ನು ಸಹ ಬದಲಾಯಿಸುತ್ತದೆ, ಇದರಿಂದಾಗಿ ಮೊಣಕಾಲು ಕೀಲುಗಳ ಮೇಲೆ ಒತ್ತಡ (knee pain) ಉಂಟಾಗಿ ನೋವು ಕಾಣಿಸಿಕೊಳ್ಳುತ್ತದೆ.

click me!