Health Tips: ಗೋಡಂಬಿ ಹಾಲು ಕುಡಿಯುವುದರಿಂದ ಸಿಗುತ್ತೆ ಈ ಅದ್ಭುತ ಪ್ರಯೋಜನಗಳು

Published : Oct 22, 2023, 07:00 AM IST

ನೀವೆಲ್ಲರೂ ಗೋಡಂಬಿ ಶೇಕ್ ಕುಡಿದಿದ್ದೀರಾ? ಕುಡಿದಿರಬಹುದು ಅಲ್ವಾ? ಆದರೆ ನೀವು ಎಂದಾದರೂ ಗೋಡಂಬಿ ಹಾಲು ಕುಡಿದಿದ್ದೀರಾ? ಪೋಷಕಾಂಶ ಭರಿತ ಗೋಡಂಬಿ ಹಾಲು ಆರೋಗ್ಯಕ್ಕೆ ಅನೇಕ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.   

PREV
18
Health Tips: ಗೋಡಂಬಿ ಹಾಲು ಕುಡಿಯುವುದರಿಂದ ಸಿಗುತ್ತೆ ಈ ಅದ್ಭುತ ಪ್ರಯೋಜನಗಳು

ಗೋಡಂಬಿ ನೆಚ್ಚಿನ ಒಣ ಹಣ್ಣುಗಳಲ್ಲಿ (dry fruits) ಒಂದಾಗಿದೆ. ಇದು ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡುತ್ತದೆ. ಇದರ ಪೋಷಕಾಂಶಗಳ ಬಗ್ಗೆ ಮಾತನಾಡುವುದಾದರೆ, ಫೈಬರ್, ಮೆಗ್ನೀಸಿಯಮ್, ಪ್ರೋಟೀನ್, ಸತು, ರಂಜಕದಂತಹ ಪೋಷಕಾಂಶಗಳು ಇದರಲ್ಲಿ ಕಂಡು ಬರುತ್ತವೆ. 
 

28

ಈವಾಗ ಯಾಕೆ ಗೋಡಂಬಿ ಬಗ್ಗೆ ಮಾತನಾಡುತ್ತಿದ್ದೇವೆ ಅಂದ್ರೆ, ನಾವೆಲ್ಲರೂ ಇದನ್ನು ನೇರವಾಗಿ ಸೇವಿಸುವುದರಿಂದ ಪ್ರಯೋಜನ ಪಡೆಯುತ್ತೇವೆ, ಆದರೆ ನೀವು ಗೋಡಂಬಿ ಹಾಲನ್ನು (Cashew milk) ಕುಡಿದಿದ್ದೀರಾ? ಇದು ಆರೋಗ್ಯಕ್ಕೆ ಯಾವ ಪ್ರಯೋಜನಗಳನ್ನು ನೀಡುತ್ತದೆ ಎಂದು ತಿಳಿಯೋಣ.
 

38

ಗೋಡಂಬಿ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳು

ಹೃದಯಕ್ಕೆ ಪ್ರಯೋಜನಕಾರಿ
ಗೋಡಂಬಿ ಹಾಲು ಹೃದಯದ ಆರೋಗ್ಯಕ್ಕೆ (heart health) ತುಂಬಾ ಪ್ರಯೋಜನಕಾರಿ. ಇದು ಮೊನೊಸ್ಯಾಚುರೇಟೆಡ್ ಮತ್ತು ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇವೆರಡೂ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ (Cholesterol) ಅನ್ನು ಕಡಿಮೆ ಮಾಡಲು ಮತ್ತು ಹೃದಯವನ್ನು ಆರೋಗ್ಯಕರವಾಗಿಡಲು (Heart Health) ಸಹಾಯ ಮಾಡುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

48

ಮೂಳೆಗಳನ್ನು ಬಲಪಡಿಸುತ್ತೆ (Strong bones)
ಮೂಳೆಗಳನ್ನು ಬಲಪಡಿಸುವಲ್ಲಿ ಗೋಡಂಬಿ ಹಾಲು ತುಂಬಾ ಪರಿಣಾಮಕಾರಿ. ಇದರಲ್ಲಿ ಉತ್ತಮ ಪ್ರಮಾಣದ ಮೆಗ್ನೀಸಿಯಮ್ (Magnesium), ಪೊಟ್ಯಾಸಿಯಮ್ (Potasium), ಕ್ಯಾಲ್ಸಿಯಂ (Calcium) ಇದ್ದು, ಇದು ಮೂಳೆಯ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮೂಳೆ ಸಾಂದ್ರತೆ ಸುಧಾರಿಸುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ನಂತಹ ಕಾಯಿಲೆಗಳಿಂದ ರಕ್ಷಿಸುತ್ತದೆ.

58

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ (immunity power)
ಗೋಡಂಬಿ ಹಾಲು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ. ಗೋಡಂಬಿ ಹಾಲು ಕುಡಿಯುವುದರಿಂದ ಉರಿಯೂತ ಸಹ ನಿವಾರಣೆಯಾಗಬಹುದು.

68

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತೆ (control blood sugar level)
ಗೋಡಂಬಿ ಹಾಲು ಕುಡಿಯುವುದರಿಂದ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ. ಇದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ವಾಸ್ತವವಾಗಿ, ಅನಾಕಾರ್ಡಿಕ್ ಆಮ್ಲ ಎಂಬ ಸಂಯುಕ್ತವು ಇದರಲ್ಲಿ ಕಂಡುಬರುತ್ತದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ.

78

ಕಬ್ಬಿಣದ ಕೊರತೆಯನ್ನು ನಿವಾರಿಸುತ್ತೆ
ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಗೋಡಂಬಿ ಹಾಲು ಅತ್ಯುತ್ತಮ ಪಾನೀಯ ಅಂದ್ರೆ ತಪ್ಪಲ ಬಿಡಿ. ಗೋಡಂಬಿ ಕಬ್ಬಿಣ ಅಂಶದಿಂದ ಸಮೃದ್ಧವಾಗಿದೆ, ಹಾಗಾಗಿ ನೀವು ಇದನ್ನು ಕುಡಿದ್ರೆ ಅದು ಕಬ್ಬಿಣದ ಕೊರತೆಯನ್ನು ನಿವಾರಿಸುತ್ತೆ..

88

ಗೋಡಂಬಿ ಹಾಲು ತಯಾರಿಸುವುದು ಹೇಗೆ?
ಒಂದು ಕಪ್ ಗೋಡಂಬಿಯನ್ನು ರಾತ್ರಿಯಿಡೀ ನೆನೆಸಿಡಿ.
ಬೆಳಗ್ಗೆ ಅದನ್ನು ಚೆನ್ನಾಗಿ ತೊಳೆದು ಜರಡಿಯಲ್ಲಿ ಫಿಲ್ಟರ್ ಮಾಡಿ
ಈಗ ಗೋಡಂಬಿಯನ್ನು 3 ರಿಂದ 4 ಕಪ್ ನೀರಿನೊಂದಿಗೆ ಬ್ಲೆಂಡರ್ ನಲ್ಲಿ ರುಬ್ಬಿಕೊಳ್ಳಿ.
ಬಯಸಿದರೆ, ಅದಕ್ಕೆ ಸಕ್ಕರೆ ಸೇರಿಸಿ ತಣ್ಣಗಾಗಲು ಬಿಡಿ.
ನೀವು ಸಕ್ಕರೆ ರೋಗಿಯಾಗಿದ್ದರೆ, ಸಕ್ಕರೆಯನ್ನು ಬಳಕೆ ಮಾಡದೇ ಇರೋದು ಉತ್ತಮ..

Read more Photos on
click me!

Recommended Stories