ಪದೆ ಪದೇ ಸೋಡಾ ಕುಡಿಯೋರಿಗೆ ಈ ರೋಗ ಕಾಡಬಹುದು. ಅದಕ್ಕೆ ಬೇಡ ಬಿಟ್ಬಿಡಿ

First Published | Oct 21, 2023, 12:18 PM IST

ಇತ್ತೀಚಿನ ದಿನಗಳಲ್ಲಿ ಜನರ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಜನರು ತಮ್ಮ ಆಹಾರದಲ್ಲಿ ಹಾನಿಕಾರಕವಾದ ಅನೇಕ ಆಹಾರ ಪದಾರ್ಥಗಳನ್ನು ಸೇರಿಸುತ್ತಾರೆ. ಅವುಗಳಲ್ಲಿ ಸೋಡ ಕೂಡ ಒಂದಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅದನ್ನು ಈ ಆರೋಗ್ಯಕರ ಪಾನೀಯಗಳೊಂದಿಗೆ ಬದಲಾಯಿಸಬಹುದು.
 

ಇತ್ತೀಚಿಗೆ, ಜನರ ಜೀವನಶೈಲಿ (lifestyle) ಬದಲಾಗುತ್ತಿದೆ. ಜನರು ತಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವಂತಹ ಅನೇಕ ಆಹಾರ ಪದಾರ್ಥಗಳನ್ನು ತಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳುತ್ತಿದ್ದಾರೆ. ಸೋಡಾ ಈ ಆಹಾರಗಳಲ್ಲಿ ಒಂದಾಗಿದೆ, ಇದು ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯ ಒಂದು ಭಾಗವಾಗಿದೆ. ಆದರೆ, ಅತಿಯಾದ ಸೋಡಾ ಕುಡಿಯುವುದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ.

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (CDC) ಪ್ರಕಾರ, ವ್ಯಕ್ತಿಯ ಆರೋಗ್ಯಕ್ಕೆ ಸೋಡಾ ಒಳ್ಳೆಯದಲ್ಲ, ಏಕೆಂದರೆ ಇದರಲ್ಲಿ ಹೆಚ್ಚಿನ ಸಕ್ಕರೆ ಇರುತ್ತದೆ. ಇದರ ಸಕ್ಕರೆ ಅಂಶ ವ್ಯಕ್ತಿಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೆಚ್ಚು ಸೋಡಾ ಕುಡಿಯುವುದರಿಂದ ತೂಕ ಹೆಚ್ಚಳ, ಮಧುಮೇಹ (Diabetic) ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ (heart related problems) ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಸೋಡಾವನ್ನು ಈ ಆರೋಗ್ಯಕರ ಪಾನೀಯಗಳೊಂದಿಗೆ ಬದಲಾಯಿಸಬಹುದು.

Latest Videos


ಐಸ್ಡ್ ಟೀ (Iced Tea)
ನೀವು ಸೋಡಾದ ಬದಲಿಗೆ ಕೆಲವು ಆರೋಗ್ಯಕರ ಆಯ್ಕೆಗಳನ್ನು ಹುಡುಕುತ್ತಿದ್ದರೆ, ಐಸ್ಡ್ ಟೀ ಸೂಕ್ತವಾಗಿದೆ. ಈ ಪಾನೀಯವು ನಿಮ್ಮನ್ನು ಹೈಡ್ರೇಟ್ ಆಗಿರಿಸುತ್ತದೆ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮನ್ನು ತಾಜಾವಾಗಿರಿಸುತ್ತದೆ.

ಸ್ಪಾರ್ಕಲಿಂಗ್ ವಾಟರ್ (sperkling water)
ಸ್ಪಾರ್ಕಲಿಂಗ್ ವಾಟರ್ ಸೋಡಾಗೆ ಆರೋಗ್ಯಕರ ಪರ್ಯಾಯ. ಏಕೆಂದರೆ ಇದು ಸಂಪೂರ್ಣವಾಗಿ ಸಕ್ಕರೆ ರಹಿತವಾಗಿದ್ದು, ಕ್ಯಾಲರಿ ಸಹ ಇರೋದಿಲ್ಲ. ಇದು ಬಬಲ್ ಆಧಾರಿತ ಪಾನೀಯವಾಗಿದ್ದು, ಇದರಲ್ಲಿ ಯಾವುದೇ ಆಮ್ಲಗಳು ಅಥವಾ ರಾಸಾಯನಿಕಗಳು ಇರುವುದಿಲ್ಲ.

ಎಳನೀರು (tender coconut)
ಎಳನೀರು ತಾಜಾ, ಸುಲಭವಾಗಿ ಸಿಗುವ, ರುಚಿಕರ ಮತ್ತು ಆರೋಗ್ಯಕರ ಪಾನೀಯ. ಇದನ್ನು ನೀವು ಸೋಡಾ ಬದಲಿಗೆ ನಿಮ್ಮ ಆಹಾರದಲ್ಲಿ ಸೇರಿಸಬಹುದು. ಇದು ಪೊಟ್ಯಾಷಿಯಮ್, ಮೆಗ್ನೀಷಿಯಮ್ ಮತ್ತು ಸೋಡಿಯಂನಿಂದ ಸಮೃದ್ಧವಾಗಿರುವ ಹೈಡ್ರೇಟಿಂಗ್ ಮತ್ತು ಬಾಯಾರಿಕೆಯನ್ನು ನೀಗಿಸುವ ಪಾನೀಯ.

ಜ್ಯೂಸ್ (Juice)
ನಿಮ್ಮ ಆಹಾರದಿಂದ ಸೋಡಾವನ್ನು ಹೊರಗಿಡಲು ನೀವು ಬಯಸಿದರೆ, ನೀವು ನೈಸರ್ಗಿಕ ಪರಿಮಳಯುಕ್ತ ನೀರನ್ನು ಆರಿಸಿಕೊಳ್ಳಬಹುದು. ಅಂತಾದರೆ ನಿಮ್ಮ ನೆಚ್ಚಿನ ಹಣ್ಣುಗಳು, ತರಕಾರಿಗಳ ಜ್ಯೂಸ್ ಅಥವಾ ಅವುಗಳ ಮತ್ತು ಗಿಡಮೂಲಿಕೆಗಳ ತುಂಡುಗಳನ್ನು ನೀರಿನಲ್ಲಿ ಹಾಕುವ ಮೂಲಕ ತಯಾರಾದ ಫ್ಲೇವರ್ಡ್ ವಾಟರ್ ಸೇವಿಸಬಹುದು.

ಹಾಲು (Milk)
ಒಂದು ಲೋಟ ಹಾಲಿನಲ್ಲಿ ಕ್ಯಾಲ್ಸಿಯಂ, ರಂಜಕ, ಜೀವಸತ್ವಗಳು ಮತ್ತು ಪೊಟ್ಯಾಸಿಯಮ್ ನಂತಹ ಅಗತ್ಯ ಪೋಷಕಾಂಶಗಳಿವೆ. ಹಾಲಿನ ಮತ್ತೊಂದು ವಿಶೇಷತೆ ಏನೆಂದರೆ, ಇದಕ್ಕೆ ನೀವು ಯಾವುದೇ ಫ್ಲೇವರ್, ಅಥವಾ ಡ್ರೈ ಫ್ರುಟ್ಸ್, ಹಣ್ಣುಗಳನ್ನು ಮಿಕ್ಸ್ ಮಾಡಿ ಸಹ ಸೇವಿಸಬಹುದು. 

ನಿಂಬೆರಸ (lemon juice)
ನಿಂಬೆರಸದಲ್ಲಿ ಕ್ಯಾಲರಿ ತುಂಬಾನೆ ಕಡಿಮೆ ಮತ್ತು ಸೋಡಾಕ್ಕಿಂತ ಕಡಿಮೆ ಸಕ್ಕರೆಯನ್ನು ಹೊಂದಿರುತ್ತದೆ. ಇದು ನಿಮ್ಮ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ತೂಕ ಇಳಿಸುವ ಪ್ರಯತ್ನಗಳಿಗೆ ಸಹಾಯ ಮಾಡುತ್ತದೆ.

click me!