ಅವಲಕ್ಕಿ ತಿನ್ನೋದರಿಂದ ಆಗೋ ಪ್ರಯೋಜನ ಒಂದೆರಡಲ್ಲ!

First Published | Jun 19, 2023, 4:20 PM IST

ಅವಲಕ್ಕಿ ರುಚಿಯಲ್ಲಿ ಅದ್ಭುತ ಮಾತ್ರವಲ್ಲ, ಇದರಿಂದ ನಾವು ಬಗೆ ಬಗೆಯ ತಿನಿಸುಗಳನ್ನು ಮಾಡಿ ಸೇವಿಸುತ್ತೇವೆ ಅಲ್ವಾ? ಆದರೆ ಅದರ ಸೇವನೆಯು ದೇಹಕ್ಕೆ ಶಕ್ತಿಯನ್ನು ನೀಡುತ್ತೆ ಅನ್ನೋದು ಗೊತ್ತಾ? ಹೌದು ಅವಲಕ್ಕಿ ಸೇವಿಸೋದ್ರಿಂದ ಸಾಕಷ್ಟು ಪ್ರಯೋಜನಗಳಿವೆ. ಅವುಗಳ ಬಗ್ಗೆ ತಿಳಿಯೋಣ. 

ಅವಲಕ್ಕಿ(Poha) ಭಾರತದಾದ್ಯಂತ ಪ್ರಸಿದ್ಧ. ಬೇರೆ ಬೇರೆ ರೀತಿಯ ಅವಲಕ್ಕಿಗಳು ಸಹ ದೊರೆಯುತ್ತೆ. ಇದನ್ನ ಹೆಚ್ಚಾಗಿ ಜನರು ಪೋಹಾ ಎಂದು ಕರೆಯುತ್ತಾರೆ. ಹೆಚ್ಚಿನ ಜನರು ಉಪಾಹಾರಕ್ಕಾಗಿ ಅವಲಕ್ಕಿ ತಿನ್ನಲು ಇಷ್ಟಪಡುತ್ತಾರೆ. ಯಾಕಂದ್ರೆ ಅವಲಕ್ಕಿಯಿಂದ ತಿಂಡಿ ತಯಾರಿಸೋದು ತುಂಬಾ ಸುಲಭ. ಅವಲಕ್ಕಿ ರುಚಿಕರ ಮಾತ್ರವಲ್ಲ, ದೇಹಕ್ಕೂ ಪ್ರಯೋಜನಕಾರಿ. ಅವಲಕ್ಕಿ ತಿನ್ನುವ ಮೂಲಕ ದೇಹಕ್ಕೆ ಆಗುವ ಪ್ರಯೋಜನಗಳ ಬಗ್ಗೆ  ತಿಳಿದುಕೊಳ್ಳೋಣ. 

ಕರುಳಿನ ಆರೋಗ್ಯಕ್ಕೆ ಅವಲಕ್ಕಿ 
ಅವಲಕ್ಕಿಯನ್ನು ತಯಾರಿಸುವ ವಿಧಾನದಿಂದಾಗಿ ಅದರಲ್ಲಿನ ಕಾರ್ಬೋಹೈಡ್ರೇಟ್ (Carbohydrate) ಡೈಜೆಸ್ಟ್ ಆಗುತ್ತೆ, ಇದು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಕರುಳಿನ ಆರೋಗ್ಯವು ಕೆಟ್ಟಾಗ ಹೊಟ್ಟೆಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಆಗ ಅಜೀರ್ಣ, ಅಸಿಡಿಟಿಯಂತಹ ಸಮಸ್ಯೆಗಳನ್ನು ಹೊಂದಲು ಪ್ರಾರಂಭಿಸುತ್ತೆ. ಅದಕ್ಕಾಗಿಯೇ ಅವಲಕ್ಕಿಯನ್ನು ತಿನ್ನಬೇಕು. 

Latest Videos


ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತೆ
ಕಳಪೆ ಆಹಾರ ಮತ್ತು ಜೀವನಶೈಲಿಯಿಂದಾಗಿ ಮಧುಮೇಹವು (Diabetes) ಸಾಮಾನ್ಯ ಸಮಸ್ಯೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಜನರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವಲಕ್ಕಿ ತಿನ್ನುವುದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತೆ, ಏಕೆಂದರೆ ಅವಲಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದೆ, ಇದು ರಕ್ತದಲ್ಲಿ ಸಕ್ಕರೆಯ ಹರಿವನ್ನು ನಿಧಾನಗೊಳಿಸುತ್ತೆ.

ರಕ್ತ ನಷ್ಟವನ್ನು ತಡೆಗಟ್ಟುತ್ತೆ 
ದೇಹದಲ್ಲಿ ರಕ್ತದ ಕೊರತೆಯಿಂದಾಗಿ, ಅನೇಕ ರೀತಿಯ ಸಮಸ್ಯೆಗಳು ಸಂಭವಿಸಲು ಪ್ರಾರಂಭಿಸುತ್ತವೆ. ಆದ್ದರಿಂದ, ಆಹಾರದಲ್ಲಿ(Food) ಕಬ್ಬಿಣಾಂಶ ಭರಿತ ಆಹಾರ ಸೇರಿಸಬೇಕು. ಅವಲಕ್ಕಿಯಲ್ಲಿ ಕಬ್ಬಿಣಾಂಶ ಕಂಡುಬರುತ್ತೆ ಎಂದು ನಿಮಗೆ ತಿಳಿದಿದ್ಯಾ? 

ರಕ್ತಹೀನತೆಯು ರಕ್ತದ ಕೊರತೆಯಿಂದ ಉಂಟಾಗುತ್ತೆ. ನೀವು ಗರ್ಭಿಣಿ ಮಹಿಳೆಯಾಗಿದ್ದರೆ, ಅವಲಕ್ಕಿಯನ್ನು ಸೇವಿಸಬೇಕು. ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಹಿಮೋಗ್ಲೋಬಿನ್ (Haemoglobin) ಕಡಿಮೆ ಆಗುತ್ತೆ, ಹಾಗಾಗಿ ಅವಲಕ್ಕಿ  ಪ್ರಯೋಜನಕಾರಿ. ಇದಲ್ಲದೆ, ಋತುಚಕ್ರದ ಸಮಯದಲ್ಲಿ ಅವಲಕ್ಕಿ ತಿನ್ನುವುದು ಸಹ ತುಂಬಾ ಒಳ್ಳೇದು. 

ತೂಕ ಕಡಿಮೆಯಾಗುತ್ತೆ(Weightloss) 
ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳವು ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ. ಸ್ಥೂಲಕಾಯತೆಯಿಂದಾಗಿ, ದೇಹವು ವಿವಿಧ ಕಾಯಿಲೆಗಳಿಗೆ ಒಳಗಾಗುತ್ತಿದೆ. ಆದ್ದರಿಂದ, ತೂಕವನ್ನು ನಿಯಂತ್ರಿಸಬೇಕು ಎಂದು ಹೇಳಲಾಗುತ್ತೆ. ತೂಕ ಕಡಿಮೆ ಮಾಡಲು ಸಹ ಅವಲಕ್ಕಿ ಸಹಕಾರಿ.

ವಯಸ್ಸಿಗೆ ಅನುಗುಣವಾಗಿ ತೂಕ ಇರಬೇಕು. ಒಂದು ವೇಳೆ ನಿಮ್ಮ ತೂಕ ಹೆಚ್ಚಾಗಿದ್ದು, ತೂಕ ಇಳಿಸಿಕೊಳ್ಳಲು ನೀವು ವಿವಿಧ ಪರಿಹಾರಗಳನ್ನು ಪ್ರಯತ್ನಿಸುತ್ತಿದ್ದರೆ, ಈ ಬಾರಿ ಅವಲಕ್ಕಿಯನ್ನು ನಿಮ್ಮ ಆಹಾರದ ಒಂದು ಭಾಗವನ್ನಾಗಿ ಮಾಡಿ. ಅವಲಕ್ಕಿಯಲ್ಲಿ ಕಡಿಮೆ ಕ್ಯಾಲೊರಿಗಳಿವೆ, ಇದು ದೇಹದಲ್ಲಿ ಕೊಬ್ಬನ್ನು(Fat) ಉಂಟುಮಾಡೋದಿಲ್ಲ. 

ಅವಲಕ್ಕಿಯಲ್ಲಿ ಫೈಬರ್(Fibre) ಕಂಡುಬರುತ್ತೆ, ಇದು ದೀರ್ಘಕಾಲದವರೆಗೆ ಹಸಿವನ್ನುಂಟು ಮಾಡೋದಿಲ್ಲ. ಆದ್ದರಿಂದ, ನೀವು ಹೆಚ್ಚು ಆಹಾರವನ್ನು ಸೇವಿಸದಿದ್ದಾಗ, ತೂಕವು ಹೆಚ್ಚಾಗೋದಿಲ್ಲ. ತೂಕ ಇಳಿಸಿಕೊಳ್ಳಲು, ನೀವು ಕಾಲು ಪ್ಲೇಟ್ ಅವಲಕ್ಕಿಯನ್ನು ಮಾತ್ರ ಸೇವಿಸಬೇಕು. ಬೆಳಗಿನ ಉಪಾಹಾರಕ್ಕೆ ಮಾತ್ರ ಅವಲಕ್ಕಿ ತಿನ್ನಬೇಕು ಅಂತೇನಿಲ್ಲ, ಸಂಜೆ ಲಘು ಆಹಾರವಾಗಿ ಸಹ ಇದನ್ನ ತಿನ್ನಬಹುದು

click me!