ಅಪಶಕುನದಿಂದಲ್ಲ, ಈ ಕಾರಣದಿಂದ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗುತ್ತೆ!

ಹೆಚ್ಚು ಜನರು ಕಪ್ಪು ನಾಲಿಗೆ ಇರೋದು ಒಳ್ಳೇದು, ಕೆಟ್ತದು ಎಂದು ಹೇಳ್ತಾರೆ. ಆದ್ರೆ ಕಪ್ಪು ನಾಲಿಗೆಯನ್ನು ಹೊಂದಲು ಅನೇಕ ಕಾರಣಗಳಿವೆ, ಉದಾಹರಣೆಗೆ ಕೆಲವು ಔಷಧಿಗಳ ಬಳಕೆ ಅಥವಾ ಬಾಯಿಯಲ್ಲಿ ಕಡಿಮೆ ಲಾಲಾರಸ ಇರೋದರಿಂದ ಇದು ಉಂಟಾಗುತ್ತೆ. ಇದು ರೋಗವಲ್ಲ. ಅದರ ಕಾರಣಗಳು ಮತ್ತು ಚಿಕಿತ್ಸೆಯ ಬಗ್ಗೆ ಇಲ್ಲಿ ತಿಳಿಯಿರಿ.

ನಾಲಿಗೆ ದೇಹದ ಅತ್ಯಗತ್ಯ ಭಾಗವಾಗಿದೆ. ನಾಲಿಗೆಯು ನಮಗೆ ಆಹಾರದ ಸವಿಯನ್ನು ಅನುಭವಿಸಲು ಸಹಾಯ ಮಾಡುತ್ತೆ. ಇದರ ಬಣ್ಣವು ಕೆಲವೊಮ್ಮೆ ಕೆಂಪು, ಕೆಲವೊಮ್ಮೆ ಹಳದಿ, ನೀಲಿ ಮತ್ತು ಕೆಲವೊಮ್ಮೆ ಬಿಳಿ ಬಣ್ಣಕ್ಕೆ ತಿರುಗುತ್ತದೆ. ನಾಲಿಗೆಯ ಬದಲಾಗುತ್ತಿರುವ ಬಣ್ಣವು (tongue color) ಕೆಲವು ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ. ಯಾವುದೇ ಸಮಸ್ಯೆಯಿಂದ ವೈದ್ಯರ ಬಳಿ ಹೋಗಾಗ ಅವರು ಮೊದಲು ನಿಮ್ಮ ನಾಲಿಗೆಯನ್ನು ಪರೀಕ್ಷಿಸುತ್ತಾರೆ ಎಂದು ನೀವು ಗಮನಿಸಿರಬಹುದು. ಯಾಕಂದ್ರೆ ನಾಲಗೆ ಮೂಲಕ ರೋಗದ ಪತ್ತೆ ಮಾಡಲಾಗುತ್ತೆ.

ಕಪ್ಪು ನಾಲಿಗೆಯನ್ನು (black tongue) ಹೊಂದಿರುವುದು ಅಶುಭ ಎಂದು ಪರಿಗಣಿಸಲಾಗುತ್ತೆ. ಆದರೆ ಇದೆಲ್ಲಾ ಸುಳ್ಳು. ನಾಲಿಗೆ ಕಪ್ಪಾಗುವುದು ಒಂದು ರೋಗವಲ್ಲ, ಆದರೆ ಇದು ಕೆಲವು ರೀತಿಯ ಔಷಧಿಗಳು ಅಥವಾ ಪಾನೀಯಗಳಿಂದ ಉಂಟಾಗಬಹುದು. ಸತ್ತ ಚರ್ಮದ ಜೀವಕೋಶಗಳು ನಾಲಿಗೆಯ ಮೇಲೆ ಸಂಗ್ರಹವಾದಾಗಲೂ ಅನೇಕ ಬಾರಿ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗಬಹುದು. ಆದ್ದರಿಂದ ಇದು ಏಕೆ ಸಂಭವಿಸುತ್ತದೆ ಮತ್ತು ಅದನ್ನು ಹೇಗೆ ಚಿಕಿತ್ಸೆ ಮಾಡುವುದು, ಅನ್ನೋದರ ಬಗ್ಗೆ ತಿಳಿಯೋಣ.


ಕಪ್ಪು ನಾಲಿಗೆಯ ಲಕ್ಷಣಗಳು ಯಾವುವು?: ನಿಮ್ಮ ನಾಲಿಗೆಯು ಪಾಪಿಲ್ಲಾಗಳು ಎಂದು ಕರೆಯಲ್ಪಡುವ ಹಲವಾರು ಸಣ್ಣ ಉಬ್ಬುಗಳಿಂದ ಆವೃತವಾಗಿದೆ. ನಾವು ಸಾಮಾನ್ಯವಾಗಿ ಅದನ್ನು ಹೆಚ್ಚು ಗಮನಿಸುವುದಿಲ್ಲ. ಆದರೆ ಚರ್ಮದ ಸತ್ತ ಜೀವಕೋಶಗಳು ಅವುಗಳ ಮೇಲೆ ಸಂಗ್ರಹವಾಗಲು ಪ್ರಾರಂಭಿಸಿದಾಗ, ಈ ಪ್ಯಾಪಿಲ್ ಗಳ ಗಾತ್ರವು ಹೆಚ್ಚಾಗುತ್ತದೆ.

ಈ ಸತ್ತ ಚರ್ಮಗಳೇ (dead skin) ನಿಮ್ಮ ನಾಲಿಗೆಯನ್ನು ಗಾಢ ಮತ್ತು ಕಪ್ಪು ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ. ನಿಮಗೆ ಕಪ್ಪು ನಾಲಗೆ ಸಮಸ್ಯೆ ಇದ್ರೆ, ನೀವು ನಾಲಿಗೆಯಲ್ಲಿ ಕಿರಿಕಿರಿ ಮತ್ತು ಜುಮುಗುಡುವಿಕೆಯನ್ನು ಮೊದಲಾದ ಸಮಸ್ಯೆ ಹೊಂದಲು ಪ್ರಾರಂಭಿಸುತ್ತೀರಿ. ಇದಲ್ಲದೆ, ಕೆಲವೊಮ್ಮೆ ದುರ್ವಾಸನೆ ಮತ್ತು ಬಾಯಿಯಲ್ಲಿ ವಿಚಿತ್ರ ರುಚಿಯನ್ನು ಸಹ ಅನುಭವಿಸಬಹುದು.

ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗಲು ಕಾರಣವೇನು?

ತಂಬಾಕು ಅಥವಾ ಸಿಗರೇಟು ಸೇವನೆ
ನೀವು ಧೂಮಪಾನ (smoking) ಮಾಡುತ್ತಿರಲಿ ಅಥವಾ ತಂಬಾಕು ಜಗಿಯುತ್ತಿರಲಿ, ಇದು ಕಪ್ಪು ನಾಲಿಗೆ ಸಮಸ್ಯೆಗೆ ಕಾರಣವಾಗುತ್ತೆ. ಇದಲ್ಲದೆ ನಾಲಿಗೆಯ ಮೇಲೆ ವಿಸ್ತರಿಸಿದ ಪಾಪಿಲ್ಲೆಯನ್ನು ಸುಲಭವಾಗಿ ಉತ್ತೇಜಿಸುತ್ತದೆ. ಇದರಿಂದ ನಾಲಿಗೆ ಕಪ್ಪಾಗುತ್ತೆ.

ಔಷಧದ ಅಡ್ಡಪರಿಣಾಮಗಳು
ಕೆಲವು ಔಷಧಿಗಳ (medicine) ಅಡ್ಡಪರಿಣಾಮಗಳಿಂದಾಗಿ, ಬಾಯಿಯಲ್ಲಿ ಶುಷ್ಕತೆ ಉಂಟಾಗುತ್ತೆ, ಇದರಿಂದಾಗಿ ಸತ್ತ ಜೀವಕೋಶಗಳು ಪ್ಯಾಪಿಲ್ಲೆಯ ಮೇಲೆ ಸುಲಭವಾಗಿ ಸಂಗ್ರಹವಾಗುತ್ತವೆ ಮತ್ತು ನಾಲಿಗೆಯ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.

ದ್ರವ ಆಹಾರವನ್ನು ಸೇವಿಸುವುದು
ಹೆಚ್ಚಾಗಿ ನಾವು ಘನ ಆಹಾರ ಸೇವಿಸೋದ್ರಿಂದ ನಾಲಿಗೆ ಮೇಲೆ ಸತ್ತ ಚರ್ಮ ಕೋಶ ಬೆಳೆಯುವುದಿಲ್ಲ. ಆದರೆ ನೀವು ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ದ್ರವ ಆಹಾರ ಸೇವಿಸಿದ್ರೆ ಇದರಿಂದ ನಾಲಿಗೆ ಮೇಲೆ ಸತ್ತ ಚರ್ಮ ಸಂಗ್ರಹವಾಗಿ ನಾಲಿಗೆ ಕಪ್ಪಾಗುತ್ತೆ. 

ಬಾಯಿ ಸ್ವಚ್ಚ ಮಾಡದೇ ಇರೋದು
ನಿಮ್ಮ ಹಲ್ಲು ಮತ್ತು ನಾಲಿಗೆಯನ್ನು ನಿಯಮಿತವಾಗಿ ಉಜ್ಜದಿದ್ದರೆ, ನಾಲಿಗೆಯ ಮೇಲೆ ಚರ್ಮದ ಸತ್ತ ಜೀವಕೋಶಗಳು ಸಂಗ್ರಹವಾಗುವುದರಿಂದ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗಬಹುದು.

ಅತಿಯಾಗಿ ಚಹಾ ಮತ್ತು ಕಾಫಿ ಕುಡಿಯುವುದು
ಕಾಫಿ ಮತ್ತು ಚಹಾ ಸೇವಿಸೋದರಿಂದ ಬಾಯಿಯಲ್ಲಿ ಪ್ಯಾಪಿಲ್ಲೆ ಹೆಚ್ಚುವಂತೆ ಮಾಡುತ್ತೆ, ವಿಶೇಷವಾಗಿ ನೀವು ಈ ಎರಡರಲ್ಲಿ ಒಂದನ್ನು ಅತಿಯಾಗಿ ಸೇವಿಸಿದರೂ ಇದು ಸಂಭವಿಸುತ್ತೆ..

ಬಾಯಿಯಲ್ಲಿ ಕಡಿಮೆ ಲಾಲಾರಸ ರಚನೆ
ಚರ್ಮದ ಸತ್ತ ಜೀವಕೋಶಗಳನ್ನು ನುಂಗಲು ಲಾಲಾರಸವು ನಿಮಗೆ ಸಹಾಯ ಮಾಡುತ್ತದೆ. ಆದರೆ ಬಾಯಿ ಸಾಕಷ್ಟು ಲಾಲಾರಸವನ್ನು ಉತ್ಪಾದಿಸದಿದ್ದಾಗ, ಸತ್ತ ಜೀವಕೋಶಗಳು ನಿಮ್ಮ ನಾಲಿಗೆಯ ಮೇಲೆ ಉಳಿಯುತ್ತೆ..

ಕಪ್ಪು ನಾಲಿಗೆ ಸಮಸ್ಯೆ
ಕಪ್ಪು ನಾಲಿಗೆಯ ರೋಗಲಕ್ಷಣಗಳನ್ನು ಮನೆಮದ್ದುಗಳಿಂದ ಗುಣಪಡಿಸಬಹುದು. ಆದರೆ ಈ ಸಮಸ್ಯೆ ಮುಂದುವರಿದರೆ, ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ನಾಲಿಗೆಯ ಬಣ್ಣ ಮಸುಕಾಗಿದೆಯೇ ಎಂದು ನೋಡಲು ವೈದ್ಯರು ನಿಮ್ಮ ನಾಲಿಗೆಯನ್ನು ಸ್ಕ್ರ್ಯಾಪ್ (scrap) ಮಾಡಬಹುದು.

ನಾಲಿಗೆ ಕಪ್ಪಾಗಿದ್ರೆ ಈ ಮನೆ ಔಷಧಿ ಬಳಸಿ
ಹಲ್ಲುಗಳನ್ನು ಉಜ್ಜಿ 

ಮೃದುವಾದ ಟೂತ್ ಬ್ರಷ್ ಬಳಸಿ ದಿನಕ್ಕೆ ಎರಡು ಬಾರಿ ನಾಲಿಗೆಯನ್ನು ಸ್ವಚ್ಛಗೊಳಿಸಿ. ಇದು ಸತ್ತ ಚರ್ಮದ ಕೋಶಗಳು ಮತ್ತು ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಟಂಗ್ ಸ್ಕ್ರ್ಯಾಪರ್ ಬಳಸಿ (use tongue scrap)
ಬ್ರಷ್ ಮಾಡುವಾಗ ಟಂಗ್ ಸ್ಕ್ರಾಪರ್ ಅನ್ನು ಬಳಸಬೇಕು. ಇದು ಪಾಪಿಲ್ಲಾದ ಮೇಲೆ ಚರ್ಮದ ಕೋಶಗಳು ಸಂಗ್ರಹವಾಗುವುದನ್ನು ತಡೆಯುತ್ತದೆ.
 

ಊಟ ಮಾಡಿದ ನಂತರ ಹಲ್ಲುಜ್ಜಿರಿ.
ಊಟ ಮಾಡಿದ ನಂತರ ಹಲ್ಲುಜ್ಜಲು ಮತ್ತು ನಾಲಿಗೆಯನ್ನು ಉಜ್ಜಲು ಮರೆಯಬೇಡಿ. ಇದು ಆಹಾರ ಮತ್ತು ಬ್ಯಾಕ್ಟೀರಿಯಾಗಳು ಪ್ಯಾಪಿಲ್ಲೆಯಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಕಾಫಿ ಕುಡಿದ ನಂತರ ಹಲ್ಲುಜ್ಜಿರಿ.
ಕಾಫಿ, ಚಹಾ ಮತ್ತು ಆಲ್ಕೋಹಾಲ್ ಕುಡಿದ ತಕ್ಷಣ ಬ್ರಷ್ ಮಾಡುವುದರಿಂದ ಕಪ್ಪು ನಾಲಿಗೆಗೆ ಚಿಕಿತ್ಸೆ ನೀಡಬಹುದು.
 

ನಿಮ್ಮ ದಂತವೈದ್ಯರ ಬಳಿಗೆ ಹೋಗಿ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಉತ್ತಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಕಪ್ಪು ನಾಲಿಗೆಯನ್ನು ಹೊಂದುವುದರಲ್ಲಿ ಯಾವುದೇ ಹಾನಿಯಿಲ್ಲ, ಅದು ತಾತ್ಕಾಲಿಕ ಸಮಸ್ಯೆಯಾಗಿದೆ. ಒಂದರಿಂದ ಎರಡು ವಾರಗಳವರೆಗೆ ನಾಲಿಗೆಯ ಬಣ್ಣವು ಕಪ್ಪು ಬಣ್ಣದಿಂದ ಮಸುಕಾಗದಿದ್ದರೆ, ಸಮಯ ವ್ಯರ್ಥ ಮಾಡದೆ ವೈದ್ಯರನ್ನು ಸಂಪರ್ಕಿಸಿ.

Latest Videos

click me!