ಧೀರೂಭಾಯಿ ಅಂಬಾನಿ ಶಾಲೆ (Dhirubhai Ambani International School) ಭಾರತದ ಅತ್ಯಂತ ದುಬಾರಿ ಮತ್ತು ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ. ದೇಶದ ಖ್ಯಾತ ಸೆಲೆಬ್ರಿಟಿಗಳ ಮಕ್ಕಳು ಇದೇ ಶಾಲೆಗೆ ಹೋಗೋದು. ಐಶ್ವರ್ಯಾ ರೈ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್,ಶಾರುಖ್ ಖಾನ್ ಮಗ ಅಬ್ರಾಮ್ ಖಾನ್, ಕರೀನಾ ಪುತ್ರ ತೈಮೂರ್ ಅಲಿ ಖಾನ್, ಶಾಹೀದ್ ಕಪೂರ್ ಸೇರಿದಂತೆ ಬಹುತೇಕ ಎಲ್ಲಾ ದೊಡ್ಡ ಬಾಲಿವುಡ್ ತಾರೆಯರ ಮಕ್ಕಳು ಇಲ್ಲಿ ಓದುತ್ತಾರೆ.