Sarvangasana Benefits : ಬೆನ್ನು ನೋವಿನ ಸಮಸ್ಯೆಗೆ ಸರ್ವಾಂಗಾಸನ ಬೆಸ್ಟ್

Suvarna News   | Asianet News
Published : Jan 08, 2022, 10:12 AM ISTUpdated : Jan 08, 2022, 11:05 AM IST

ಯೋಗದಿಂದ ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಸರ್ವಾಂಗಾಸನ ಯೋಗದಲ್ಲಿ ಬಹಳ ಪ್ರಯೋಜನಕಾರಿಯಾದ ಯೋಗಾಸನವಾಗಿದೆ. ಇದು ದೇಹದ ಎಲ್ಲ ಭಾಗಗಳಿಗೆ ಪ್ರಯೋಜನಕಾರಿಯಾಗಿದೆ. ಈ ಯೋಗಾಸನ ಮಾಡುವುದರಿಂದ ಪುರುಷರು ಮತ್ತು ಮಹಿಳೆಯರು ಇಬ್ಬರೂ ಪ್ರಯೋಜನ ಪಡೆಯಬಹುದು. ಸರ್ವಾಂಗಾಸನವನ್ನು ಮಾಡುವ ವಿಧಾನ ಯಾವುದು, ಪ್ರಯೋಜನಗಳು ಯಾವುವು ತಿಳಿಯಿರಿ.

PREV
18
Sarvangasana Benefits : ಬೆನ್ನು ನೋವಿನ ಸಮಸ್ಯೆಗೆ ಸರ್ವಾಂಗಾಸನ ಬೆಸ್ಟ್

ಸರ್ವಾಂಗಾಸನವು ಸಂಸ್ಕೃತ ಪದವಾಗಿದ್ದು, 'ಸರ್ವ್' ಎಂದರೆ ಎಲ್ಲ ಎಂದೂ, 'ಅಂಗ' ಎಂದರೆ ನಿಮ್ಮ ದೇಹದ ಎಲ್ಲ ಭಾಗಗಳು ಎಂದೂ, 'ಆಸನ' ಎಂದರೆ ಭಂಗಿಯೆಂದೂ ಆಗಿದೆ. ಈ ಅಸನ ಇಡೀ ದೇಹವನ್ನು ಒಳಗೂಳ್ಳುತ್ತದೆ. ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳಿವೆ. ಅವುಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. 

28

ಸರ್ವಾಂಗಾಸನ ಮಾಡುವುದು ಹೇಗೆ?
ಸರ್ವಾಂಗಾಸನ ಯೋಗವನ್ನು ಇಂಗ್ಲಿಷ್ ನಲ್ಲಿ ಶೋಲ್ಡರ್ ಸ್ಟ್ಯಾಂಡ್ (shoulder stand)ಎಂದೂ ಕರೆಯಲಾಗುತ್ತದೆ. 
ಮೊದಲು ಯೋಗ ಚಾಪೆಯ ಮೇಲೆ ಬೆನ್ನ ಮೇಲೆ ಮಲಗಿ ಎರಡೂ ಕೈಗಳನ್ನು ದೇಹದ ಎರಡೂ ಬದಿಗಳಲ್ಲಿ ನೆಲದ ಮೇಲೆ ಇರಿಸಿ.
ಈಗ ಎರಡೂ ಕಾಲುಗಳನ್ನು ಗಾಳಿಯಲ್ಲಿ ಮೇಲಕ್ಕೆ ಎತ್ತಿ.
ಪಾದಗಳಿಂದ ಸೊಂಟದವರೆಗೆ ನೆಲದಿಂದ ನಿಧಾನವಾಗಿ ಮೇಲೆತ್ತಲು ಪ್ರಯತ್ನಿಸಿ.

38

ಈಗ ಕಾಲಿನ ಉಗುರುಗಳನ್ನು ಆಕಾಶದತ್ತ ಮುಖ ಮಾಡಿ. ಎರಡೂ ಅಂಗೈಗಳಿಂದ ಸೊಂಟವನ್ನು ಬೆಂಬಲಿಸಿ.
ಈ ರೀತಿಯಾಗಿ ನಿಮ್ಮ ಇಡೀ ದೇಹವು ಆಕಾಶದ ಕಡೆಗೆ ಏರಬೇಕು ಮತ್ತು ಸಂಪೂರ್ಣ ದೈಹಿಕ ತೂಕವು (body weight)ಭುಜಗಳ ಮೇಲೆ ಬರಬೇಕು.
ಈ ಸ್ಥಿತಿಯಲ್ಲಿ ಕೆಲವು ನಿಮಿಷಗಳ ಕಾಲ ಹಾಗೆ ಇರಿ. ಇದನ್ನು ಮತ್ತೆ ಮತ್ತೆ ಮುಂದುವರೆಸಿ. 

48

ಸರ್ವಾಂಗಾಸನ ಪ್ರಯೋಜನಗಳು
ಸರ್ವಾಂಗಾಸನ ಮಾಡಿದರೆ ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು. ಆದರೆ, ಯಾರಿಗಾದರೂ ಹೃದ್ರೋಗ (heart problem), ಸ್ಲಿಪ್ ಡಿಸ್ಕ್, ಕುತ್ತಿಗೆ ನೋವು, ಥೈರಾಯ್ಡ್ ಸಮಸ್ಯೆ, ಅಧಿಕ ರಕ್ತದೊತ್ತಡ, ಗರ್ಭಧಾರಣೆ ಅಥವಾ ಋತುಚಕ್ರವಿದ್ದರೆ, ಈ ಯೋಗಾಸನ ಮಾಡುವ ಮೊದಲು ತಜ್ಞರನ್ನು ವಿಚಾರಿಸಿ.

58

ಥೈರಾಯ್ಡ್ ಗ್ರಂಥಿಗಳನ್ನು (thyroid gland) ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ ಮತ್ತು ಅವುಗಳ ಕಾರ್ಯವನ್ನು ಸಾಮಾನ್ಯಗೊಳಿಸುತ್ತದೆ.
ಸರ್ವಾಂಗಾಸನ (sarvangasana) ಮಾಡುವುದರಿಂದ ಕೈಗಳು ಮತ್ತು ಭುಜಗಳು ಬಲಗೊಳ್ಳುತ್ತವೆ ಮತ್ತು ಬೆನ್ನು ಮೂಳೆಯು ಹೊಂದಿಕೊಳ್ಳುವಂತೆ ಮಾಡುತ್ತದೆ.

68

ಮೆದುಳಿನಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಸರ್ವಾಂಗಾಸನವು ಇಡೀ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಲು ಉತ್ತಮವಾಗಿದೆ. ಏಕೆಂದರೆ ಇದು ಮೆದುಳಿಗೆ ಹೆಚ್ಚಿನ ರಕ್ತದಿಂದ ಪೋಷಣೆ ಯನ್ನು ಮಾಡುತ್ತದೆ. ಹೃದಯದ ಸ್ನಾಯುಗಳನ್ನು ಹಿಗ್ಗಿಸುವ ಮೂಲಕ ರಕ್ತದ ಹರಿವನ್ನು ಸುಧಾರಿಸುತ್ತದೆ. 

78

ಸರ್ವಾಂಗಸನ ದೇಹದ ಎಲ್ಲಾ ಅಂಗಗಳನ್ನು ಒಳಗೊಳ್ಳುತ್ತದೆ. ಮಲಬದ್ಧತೆ (constipation), ಅಜೀರ್ಣ ಮತ್ತು ವೆರಿಕೋಸ್ ರಕ್ತನಾಳಗಳ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದನ್ನು ನಿಯಮಿತವಾಗಿ ಮಾಡುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ. 

88

ಬೆನ್ನು ನೋವಿನಿಂದ (back pain)ಬಳಲುತ್ತಿರುವ ಜನರು ಈ ಆಸನದಿಂದ ಪ್ರಯೋಜನ ಪಡೆಯಬಹುದು ಏಕೆಂದರೆ ಇದು ಒಬ್ಬರ ಬೆನ್ನುಮೂಳೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನೀವು ಸರಿಯಾದ ತಂತ್ರದಿಂದ ನಿಯಮಿತವಾಗಿ ಮಾಡಿದರೆ ಇದು ಬೆನ್ನು ನೋವನ್ನು ಸಹ ಗುಣಪಡಿಸುತ್ತದೆ.ಇದು ಬೆನ್ನು ನೋವಿಗೆ ಉತ್ತಮ ಪರಿಹಾರ ನೀಡುತ್ತದೆ. 

Read more Photos on
click me!

Recommended Stories