ಜನರ ಸೇರೋ ಜಾಗಕ್ಕೆ ಹೋಗಿ, ನಿಮ್ಮ ಖುಷಿ ಇಮ್ಮಡಿಗೊಳ್ಳುತ್ತೆ! ಖಿನ್ನತೆ ದೂರವಾಗುತ್ತೆ!

First Published | Dec 27, 2023, 4:12 PM IST

ನಾವು ಜೀವನದ ಪ್ರತಿ ಕ್ಷಣವನ್ನು ಸೆಲೆಬ್ರೇಟ್ ಮಾಡಬೇಕು. ಯಾಕೆ ಗೊತ್ತಾ? ಇದರಿಂದ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ನಿಮ್ಮ ಮನಸ್ಸು ಸಂತೋಷದಿಂದ ಅರಳಲಿದೆ. ಜೀವನದಲ್ಲಿ ನೆಮ್ಮದಿ ನೀಡಲಿದೆ. ಇದರಿಂದ ಇನ್ನು ಏನೇನು ಸಾಧ್ಯ ನೋಡೋಣ. 
 

ಪ್ರಮೋಶನ್, ಬರ್ತ್ ಡೇ, ಮ್ಯಾರೇಜ್, ಅದೇನೇ ಇರಲಿ, ಸೆಲೆಬ್ರೇಟ್ (celebration) ಮಾಡುವ ಒಂದು ಉದ್ದೇಶ ಅಂದ್ರೆ ನಾವು ಖುಷಿಯಾಗಿರಬೇಕು ಅಷ್ಟೆ. ಸೆಲೆಬ್ರೇಶನ್ ಜೀವನದಲ್ಲಿ ಖುಷಿ ಮತ್ತು ಉಲ್ಲಾಸವನ್ನು ತರುತ್ತದೆ. ಇದರಿಂದ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅದು ಹೇಗೆ ಅಂತ ಯೋಚನೆ ಮಾಡ್ತಿದ್ದೀರ? ಇಲ್ಲಿದೆ ನೋಡಿ ಅದೆಲ್ಲದಕ್ಕೂ ಉತ್ತರ. 
 

ರಿಲೇಶನ್‌ಶಿಪ್ ಇಂಪ್ರೂವ್ ಮಾಡುತ್ತೆ
ಹಲವು ಜನರು ತಮ್ಮ ಮನೆ, ಕುಟುಂಬದಿಂದ ದೂರ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಹಬ್ಬ, ಮದುವೆ ಸಮಯದಲ್ಲಿ ಮನೆಗೆ ಹೋಗಿ ಎಲ್ಲರ ಜೊತೆ ಸೆಲೆಬ್ರೇಟ್ ಮಾಡೋದು, ಮನೆಯವರ ಜೊತೆ ಹೆಚ್ಚು ಸಮಯ ಕಳೆಯೋದರಿಂದ ಸಂಬಂಧ (relationship) ಇಂಪ್ರೂವ್ ಆಗುತ್ತೆ. 

Latest Videos


ಸೆಲೆಬ್ರೇಶನ್ ಮಾಡೋದರಿಂದ ಜನರ ನಡುವಿನ ದೂರ ಕಡಿಮೆಯಾಗುತ್ತದೆ. ಜೊತೆಗೆ ಎಲ್ಲರ ನಡುವೆ ಅಂಡರ್ ಸ್ಟಾಂಡಿಂಗ್ ಹೆಚ್ಚಾಗುತ್ತದೆ. ಇದರಿಂದಾಗಿ ನಮ್ಮ ಜೀವನದಲ್ಲಿ ಇನ್ನೊಬ್ಬ ವ್ಯಕ್ತಿಯ ಪ್ರಾಮುಖ್ಯತೆ ಎಷ್ಟು ಅನ್ನೋದು ಸಹ ತಿಳಿಯುತ್ತೆ. 
 

ಆತಂಕ ಕಡಿಮೆ ಮಾಡುತ್ತೆ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಒಂಟಿತನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಜನರಲ್ಲಿ ಖಿನ್ನತೆ (depression) ಮತ್ತು ಆಂಕ್ಸೈಟಿ ಸಮಸ್ಯೆ ಸಹ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಫೆಸ್ಟೀವ್ ಸೀಸನ್ (Festive Season) ಮತ್ತು ಸೆಲೆಬ್ರೇಶನ್ (celebration) ಜನರ ಮನಸ್ಸಿಗೆ ಖುಷಿ ನೀಡುತ್ತದೆ. 

ಸೆಲೆಬ್ರೇಶನ್ ನಿಂದಾಗಿ ವ್ಯಕ್ತಿಯ ಖಿನ್ನತೆ (Depression), ಒತ್ತಡ (Stress) ಎಲ್ಲವೂ ಕಡಿಮೆಯಾಗುತ್ತದೆ. ಮನಸ್ಸು ಶಾಂತವಾಗುತ್ತದೆ. ಸೆಲೆಬ್ರೇಶನ್ ಮಾಡೋದರಿಂದ ವ್ಯಕ್ತಿಯ ಮನಸ್ಸು ನಕಾರಾತ್ಮಕತೆಯಿಂದ ಹೊರ ಬಂದು ಮನಸ್ಸು ಶಾಂತವಾಗಿರೋದಕ್ಕೆ ಸಹಾಯ ಮಾಡುತ್ತದೆ.
 

ನಿದ್ರೆಯ ಕ್ವಾಲಿಟಿ ಚೆನ್ನಾಗಿರುತ್ತೆ
ಫೆಸ್ಟಿವ್ ಸೀಸನ್ ಅಥವಾ ಸೆಲೆಬ್ರೇಶನ್ ಸಮಯದಲ್ಲಿ ಜನರ ಮೂಡ್ ತುಂಬಾನೆ ಚೆನ್ನಾಗಿರುತ್ತೆ. ಇದರಿಂದ ಆಯಾಸ, ಒತ್ತಡ ಕೂಡ ಇರೋದಿಲ್ಲ. ಇದರಿಂದಾಗಿ ಬ್ರೈನ್ ಕೂಡ ಚೆನ್ನಾಗಿ ಕೆಲಸ ಮಾಡಲು ಆರಂಭಿಸುತ್ತೆ. ಇದರಿಂದ ಮೆಲಾಟೊನಿನ್ ನ ಉತ್ಪಾದನೆ ಹೆಚ್ಚುತ್ತೆ. ಇದರಿಂದ ರಾತ್ರಿ ಚೆನ್ನಾಗಿ ನಿದ್ರೆ (quality sleep) ಮಾಡಲು ಸಹಾಯವಾಗುತ್ತೆ. 
 

ಪ್ರೇರಣೆ ನೀಡುತ್ತೆ
ಸೆಲೆಬ್ರೇಶನ್ ನಿಂದಾಗಿ ದೇಹದಲ್ಲಿ ಎಂಡೋರ್ಫಿನ್, ಡೊಪಾಮೈನ್ ಮತ್ತು ಸೆರೋಟೊನಿನ್ ಬಿಡುಗಡೆಯಾಗುತ್ತದೆ. ಈ ಎಲ್ಲಾ ಕೆಮಿಕಲ್ಸ್ ದೇಹದಲ್ಲಿ ಉಲ್ಲಾಸದ ಭಾವನೆ ಉಂಟು ಮಾಡುತ್ತೆ. ಡೊಪಮೈನ್  (Dopamine) ನಿಮ್ಮೊಳಗಿನ ಮೋಟಿವೇಶನ್ ಮಷಿನ್. ಇದು ನಿಮಗೆ ಸಂತೋಷದಿಂದ ಇರಲು ಪ್ರೇರಣೆ ನೀಡುತ್ತೆ. 

ಹೆಚ್ಚು ನೆನಪುಗಳನ್ನು ನೀಡುತ್ತೆ
ಸೆಲೆಬ್ರೇಶನ್ ಪರ್ಸನಲ್ ಆಗಿರಲಿ ಅಥವಾ ಪ್ರೊಫೆಶನಲ್ (Professional) ಆಗಿರಲಿ ಒಟ್ಟಲ್ಲಿ ಇದು ಮೆಮೊರಿ ಬಿಲ್ಡ್ ಅಪ್ (buildup memory) ಮಾಡಲು ಸಹಾಯ ಮಾಡುತ್ತೆ. ಇದು ನಿಮಗೆ ಬೆಸ್ಟ್ ನೆನಪುಗಳನ್ನು ಕೊಡುತ್ತದೆ. ಬೇಜಾರಾದಾಗ ಈ ನೆನಪುಗಳೇ ನಿಮ್ಮ ಮುಖದಲ್ಲಿ ಸಂತಸವನ್ನು ನೀಡುತ್ತೆ. ಅಲ್ಲದೇ ಈ ನೆನಪುಗಳೇ ಎಲ್ಲಾ ಸಮಯ ಕೆಟ್ಟದಾಗಿರೋದಿಲ್ಲ ಅನ್ನೋದನ್ನು ತಿಳಿಸುತ್ತದೆ. 

click me!