Health Tips: ಮಲವಿಸರ್ಜನೆ ಮಾಡೋವಾಗ ರಕ್ತ ಬರುತ್ತಿದ್ಯಾ? ಇದಕ್ಕೇನು ಕಾರಣ ತಿಳಿಯಿರಿ…

First Published | Dec 27, 2023, 7:00 AM IST

ಮಲವಿಸರ್ಜನೆ ಮಾಡೋವಾಗ ರಕ್ತ ಬರೋದಕ್ಕೆ ಅನೇಕ ಕಾರಣಗಳಿರಬಹುದು, ಇದು ಆರೋಗ್ಯ ಸಮಸ್ಯೆಯ ಸಂಕೇತವೂ ಆಗಿರಬಹುದು. ಮಲದೊಂದಿಗೆ ರಕ್ತ ಬರಲು ಕಾರಣಗಳನ್ನು ತಜ್ಞರಿಂದ ತಿಳಿದುಕೊಳ್ಳಿ ಮತ್ತು ಈ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು  ಅನ್ನೋದನ್ನು ತಿಳಿಯಿರಿ. 
 

ಟಾಯ್ಲೆಟ್ ಮಾಡೋವಾಗ ರಕ್ತ (blood stool) ಬಂದರೆ, ಪ್ರತಿಯೊಬ್ಬರಿಗೂ ಭಯ ಆಗೋದು ಗ್ಯಾರಂಟಿ ಅಲ್ವಾ? ಸ್ವಲ್ಪ ಯೋಚಿಸಿ, ಟಾಯ್ಲೆಟ್ ಮಾಡಿದ ನಂತರ ಅಲ್ಲೆಲ್ಲಾ ರಕ್ತದ ಕಲೆಗಳು ಕಂಡರೆ ಹೇಗಾಗಬೇಡ. ಇದು ವ್ಯಕ್ತಿಯ ಸರಳ ಜೀವನ ಶೈಲಿಯ ಮೇಲೆ ಸಂಪೂರ್ಣವಾಗಿ ಪರಿಣಾಮ ಬೀರುತ್ತದೆ. ಆದರೂ , ಮಲವಿಸರ್ಜನೆಯೊಂದಿಗೆ ಬರುವ ರಕ್ತಕ್ಕೆ ಅನೇಕ ಕಾರಣಗಳಿರಬಹುದು, ಇದು ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು. ಮಲದೊಂದಿಗೆ ರಕ್ತ ಬರಲು ಕಾರಣಗಳು ಮತ್ತು ಪರಿಹಾರದ ಬಗ್ಗೆ ತಿಳಿಯೋಣ. 

ಮಲದಲ್ಲಿ ರಕ್ತಕ್ಕೆ ಕಾರಣವೇನು?  
ಮಲವಿಸರ್ಜನೆಯ ಸಮಯದಲ್ಲಿ ರಕ್ತಸ್ರಾವದ ಸಮಸ್ಯೆ ವಿವಿಧ ಕಾರಣಗಳಿಂದ ಪ್ರಾರಂಭವಾಗುತ್ತದೆ. ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. 

ಪೈಲ್ಸ್ (Plies)
ಮೂಲವ್ಯಾಧಿಯು ಗುದದ್ವಾರದಲ್ಲಿನ ರಕ್ತನಾಳಗಳು ಊದಿಕೊಂಡಾಗ ಮತ್ತು ಟಾಯ್ಲೆಟ್ ಮಾಡುವಾಗ ರಕ್ತಸ್ರಾವವಾಗಲು (bleeding) ಪ್ರಾರಂಭಿಸಿದಾಗ ಉಂಟಾಗುವ ಸ್ಥಿತಿ. ಇದು ಸಾಮಾನ್ಯವಾಗಿ ಗುದದ್ವಾರ ಮತ್ತು ಗುದದ್ವಾರದ ಹೊರಭಾಗದ ಮೇಲೆ ಅಂದರೆ ಗುದದ್ವಾರದ ಮೇಲೆ ಪರಿಣಾಮ ಬೀರುತ್ತದೆ.  ಈ ಸ್ಥಿತಿಯಲ್ಲಿ ತುರಿಕೆ ಮತ್ತು ನೋವು ಉಂಟಾಗುವ ಸಾಧ್ಯತೆಯಿದೆ.
 

Tap to resize

ಗುದದ್ವಾರದಲ್ಲಿ ಬಿರುಕುಗಳು
ಮಲಬದ್ಧತೆಯಿಂದಾಗಿ ಒಬ್ಬ ವ್ಯಕ್ತಿಯು ಟಾಯ್ಲೆಟ್ ಮಾಡಲು ಪ್ರಯತ್ನಿಸಿದಾಗ, ಮಲದ ಜೊತೆಗೆ ರಕ್ತವೂ ಬರಲು ಪ್ರಾರಂಭಿಸುತ್ತದೆ. ಅತಿಸಾರ,  ಗಟ್ಟಿಯಾದ ಮಲ, ಗುದದ್ವಾರ ಸಂಭೋಗ (anal sex)ಮತ್ತು ಹೆರಿಗೆಯ ಸಮಯದಲ್ಲಿ ಈ ಸಮಸ್ಯೆಗಳು ಸಂಭವಿಸಬಹುದು. ಈ ಸಂದರ್ಭದಲ್ಲಿ ಮಲವಿಸರ್ಜನೆ ಮಾಡುವಾಗ ತೀವ್ರ ನೋವು ಉಂಟಾಗುತ್ತದೆ ಮತ್ತು ಸೆಳೆತ ಉಂಟಾಗಲು ಪ್ರಾರಂಭಿಸುತ್ತದೆ.

ಕೊಲೊನಿಕ್ ಕ್ಯಾನ್ಸರ್ (colon cancer)
ಅಂತಹ ಪರಿಸ್ಥಿತಿಯಲ್ಲಿ, ಟಾಯ್ಲೆಟ್ ಮಾಡುವಾಗ ಗಾಢ ಕೆಂಪು ರಕ್ತ ಕಂಡುಬರುತ್ತದೆ, ಇದು ಗುದನಾಳ ಮತ್ತು ಕರುಳಿನಲ್ಲಿ ರಕ್ತಸ್ರಾವವನ್ನು ಸೂಚಿಸುತ್ತದೆ. ಇದರಿಂದ ಪ್ರತಿಯೊಬ್ಬರ ಭಯವೂ ಹೆಚ್ಚುತ್ತದೆ. ಕೂಡಲೇ ಚಿಕಿತ್ಸೆ ಆರಂಭಿಸೋದು ಉತ್ತಮ. ಇದಲ್ಲದೇ ಕರುಳಿನ ಉರಿಯೂತ, ಕ್ರೋನ್ಸ್ ಕಾಯಿಲೆ, ಅಲ್ಸರೇಟಿವ್ ಕೊಲೈಟಿಸ್ ಮತ್ತು ಕರುಳಿನಲ್ಲಿ ಕ್ಷಯದಂತಹ ಸೋಂಕುಗಳು ಮಲ ವಿಸರ್ಜನೆಯ ಸಮಯದಲ್ಲಿ ರಕ್ತಸ್ರಾವಕ್ಕೆ ಕಾರಣವಾಗುತ್ತವೆ.

ಈ ಸಮಸ್ಯೆಗೆ ಚಿಕಿತ್ಸೆ ಏನು ಅನ್ನೋದನ್ನು ತಿಳಿಯಿರಿ 
ತಜ್ಞರ ಪ್ರಕಾರ, ಮನೆಮದ್ದುಗಳ ಬದಲು, ಅಂತಹ ಸಮಸ್ಯೆಯನ್ನು ಎದುರಿಸಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ ಮತ್ತು ಆ ಚಿಕಿತ್ಸೆಯನ್ನು ಅನುಸರಿಸಿ. ಇಲ್ಲದಿದ್ದರೆ, ಸಮಸ್ಯೆ ಗಂಭೀರ ಸ್ವರೂಪವನ್ನು ತೆಗೆದುಕೊಳ್ಳಬಹುದು. ಆರೋಗ್ಯ ತಜ್ಞರ ಪ್ರಕಾರ, ಪ್ರೊಕ್ಟೋಸ್ಕೋಪ್ ಸಹಾಯದಿಂದ, ಸಮಸ್ಯೆಯನ್ನು ಪರಿಶೀಲಿಸಬಹುದು. ಕರುಳನ್ನು ಪರೀಕ್ಷಿಸಲು ಅವರು ಕೊಲೊನೊಸ್ಕೋಪಿಯನ್ನು ಸಹ ಶಿಫಾರಸು ಮಾಡಬಹುದು.  
 

ಮಲದಲ್ಲಿ ರಕ್ತವನ್ನು ತಪ್ಪಿಸಲು ಸಲಹೆಗಳು
ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ

ಮಲದಲ್ಲಿ ರಕ್ತವನ್ನು ತಡೆಯಲು ಆರೋಗ್ಯಕರ ಜೀವನಶೈಲಿಯನ್ನು (healthy lifestyle) ಅನುಸರಿಸುವುದು ಮುಖ್ಯ. ಇದಕ್ಕಾಗಿ, ದಿನಚರಿಯಲ್ಲಿ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ, ವ್ಯಾಯಾಮ ಮಾಡಿ ಮತ್ತು ಸಮಯಕ್ಕೆ ಸರಿಯಾಗಿ ಮಲಗಿ. ಇದು ಜೀವನಶೈಲಿಯಲ್ಲಿ ಸಮತೋಲನವನ್ನು ಹೆಚ್ಚಿಸುತ್ತದೆ, ಇದು ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಮಲಬದ್ಧತೆಯನ್ನು ತಪ್ಪಿಸಿ
ರಕ್ತಸಿಕ್ತ ಮಲವನ್ನು ತಡೆಗಟ್ಟಲು ಮಲಬದ್ಧತೆ (constipation) ಸಮಸ್ಯೆಯನ್ನು ತಪ್ಪಿಸಿ. ಇದಕ್ಕಾಗಿ, ದೇಹವನ್ನು ಹೈಡ್ರೇಟ್ ಮಾಡುತ್ತಿರಿ ಮತ್ತು ನೀರಿನ ಸೇವನೆಯನ್ನು ಹೆಚ್ಚಿಸಿ. ಇದಲ್ಲದೆ, ಫೈಬರ್ ಭರಿತ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ.

ಮಲವಿಸರ್ಜನೆಯ ಸಮಯದಲ್ಲಿ ಒತ್ತಡವನ್ನು ತಪ್ಪಿಸಿ
ಮಲವಿಸರ್ಜನೆ ಮಾಡುವಾಗ ದೇಹದ ಮೇಲೆ ಯಾವುದೇ ಒತ್ತಡವನ್ನು ಹಾಕಬೇಡಿ. ಇದು ರಕ್ತಸ್ರಾವದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಟಾಯ್ಲೆಟ್ ಸೀಟಿನ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದನ್ನು ತಪ್ಪಿಸಿ. ಇದು ಇತರ ಅನೇಕ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇನ್ನು ಹೆಚ್ಚಿನ ಸಮಸ್ಯೆಗಳನ್ನು ತಪ್ಪಿಸಲು ವೈದ್ಯರನ್ನು ಸಂಪರ್ಕಿಸಿ. ಇದು ಗಂಭೀರ ಸಮಸ್ಯೆಗಳು ಬೆಳೆಯದಂತೆ ತಡೆಯಬಹುದು.  

Latest Videos

click me!