ಪ್ರತಿದಿನ ತಿನ್ನೋ ಆಹಾರಗಳೂ ಕ್ಯಾನ್ಸರ್ ಅಪಾಯ ತರಬಹುದು!

First Published | Jul 27, 2023, 3:02 PM IST

ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರುವ ಕ್ಯಾನ್ಸರ್ ಕಾರಕಗಳನ್ನು ಹೊಂದಿರುವ ಕೆಲವು ಆಹಾರಗಳನ್ನು ನಾವು ಪ್ರತಿದಿನ ಸೇವಿಸುತ್ತಿದ್ದೇವೆ. ಆಲ್ಕೋಹಾಲ್, ತಂಬಾಕು ಮತ್ತು ಸಿಗರೇಟು ಅಲ್ಲದೇ, ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಹಲವಾರು ಆಹಾರಗಳಿವೆ. ಈ ಆಹಾರಗಳು ತೂಕ ಹೆಚ್ಚಿಸುವುದಲ್ಲದೆ ಜೀರ್ಣಾಂಗ ವ್ಯವಸ್ಥೆಯನ್ನು ಹಾಳುಮಾಡುತ್ತವೆ. ಈ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ ...

ಸಂಸ್ಕರಿಸಿದ ಆಹಾರ ಅಥವಾ ರೆಡಿ ಮೆಡ್ ಆಹಾರವನ್ನು(Readymade food) ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವೆಂದು ಪರಿಗಣಿಸಲಾಗುತ್ತೆ, ಅವು ತೂಕ ಹೆಚ್ಚಿಸುವುದಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ಹಾಳುಮಾಡುತ್ತವೆ. ತೂಕ ಹೆಚ್ಚಳದಿಂದಾಗಿ, ಅನೇಕ ರೋಗಗಳು ಜನರನ್ನು ಸುತ್ತುವರೆದಿವೆ. ಈಗಿನ ಆಹಾರಗಳಲ್ಲಿ ಹೆಚ್ಚಿನವು ಕೃತಕ ಬಣ್ಣ, ಪ್ರಿಸರ್ವೇಟಿವ್ ಮತ್ತು ಸೋಡಿಯಂ ಹೊಂದಿರುತ್ತವೆ, ಇದು ಹೃದ್ರೋಗ ಮತ್ತು ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು

ಆಲ್ಕೋಹಾಲ್, ತಂಬಾಕು ಮತ್ತು ಸಿಗರೇಟುಗಳು ಮಾತ್ರ ಕ್ಯಾನ್ಸರ್ ಗೆ(Cancer) ಕಾರಣವಾಗುತ್ತವೆ ಎಂದು ಜನರು ಭಾವಿಸುತ್ತಾರೆ, ಆದರೆ ಕ್ಯಾನ್ಸರ್ ಕಾರಕಗಳನ್ನು ಒಳಗೊಂಡಿರುವ ಕೆಲವು ವಸ್ತುಗಳನ್ನು ಪ್ರತಿದಿನ ಸೇವಿಸುತ್ತಿದ್ದೇವೆ, ಅವು ಹಾನಿಕಾರಕ ವಸ್ತುಗಳು, ಅವು ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.

Tap to resize

ಕೃತಕ ಬಣ್ಣ
ಪೇಸ್ಟ್ರಿ(Pastry), ಕೇಕ್, ಚೀಸ್, ಚಿಪ್ಸ್, ಕುಕೀಸ್ ಮತ್ತು ಹಳದಿ ಪಾನೀಯಗಳಲ್ಲಿ ಕೃತಕ ಬಣ್ಣಗಳನ್ನು ಬಳಸಲಾಗುತ್ತೆ. ಇದು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತೆ. ಕ್ಯಾನ್ಸರ್ ಮೇಲಿನ ಸಂಶೋಧನೆಯು ಇದರ ಬಳಕೆಯು ಮೂತ್ರಪಿಂಡ ಮತ್ತು ಕರುಳಿನಲ್ಲಿ ಗೆಡ್ಡೆಗಳ ಅಪಾಯವನ್ನು ಹೆಚ್ಚಿಸುತ್ತೆ ಎಂದು ಬಹಿರಂಗಪಡಿಸಿದೆ.

ವೆಜಿಟಬಲ್ ಆಯಿಲ್ (Vegetable oil)
ಕನೋಲಾ, ಸೂರ್ಯಕಾಂತಿ, ಜೋಳ, ಕಡಲೆಕಾಯಿ, ಬೈನೋಲಾ, ತಾಳೆ ಬೀಜ, ಸೋಯಾಬೀನ್ ಮುಂತಾದ ವೆಜಿಟಬಲ್ ಆಯಿಲ್ ಹೆಚ್ಚಿನ ಆಹಾರ ಪದಾರ್ಥಗಳಲ್ಲಿ ಕಂಡುಬರುತ್ತವೆ. ಅವು ದೇಹಕ್ಕೆ ಹಾನಿಕಾರಕ. ಒಮೆಗಾ -6 ಇವುಗಳಲ್ಲಿ ಹೇರಳವಾಗಿ ಕಂಡುಬರುತ್ತೆ , ಇದು ಕ್ಯಾನ್ಸರ್ ಕೋಶಗಳು, ರಕ್ತ ಹೆಪ್ಪುಗಟ್ಟುವಿಕೆ ಮತ್ತು ದೇಹದಲ್ಲಿ ಉರಿಯೂತವನ್ನು ಉತ್ತೇಜಿಸುತ್ತೆ .
 

ಸಂಸ್ಕರಿಸಿದ ಮಾಂಸ
ಸಂಸ್ಕರಿಸಿದ ಮಾಂಸಗಳನ್ನು ರಕ್ಷಿಸಲು ಬಳಸುವ ರಾಸಾಯನಿಕಗಳಲ್ಲಿ ಸೋಡಿಯಂ(Sodium) ಬಳಸಲಾಗುತ್ತೆ. ಸೋಡಿಯಂಯಿಂದ ಸೋಡಿಯಂ ನೈಟ್ರೇಟ್ ಅನ್ನು ತಯಾರಿಸಲಾಗುತ್ತೆ, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತೆ.
 

ಆರ್ಟಿಫಿಷಿಯಲ್ ಶುಗರ್ (Artificial Sugar)
ಸಕ್ಕರೆಯನ್ನು ನಿಯಂತ್ರಿಸಲು ಅನೇಕ ಜನರು ಆರ್ಟಿಫಿಷಿಯಲ್ ಶುಗರ್ ಬಳಸುತ್ತಾರೆ, ಆದರೆ ಕೃತಕ ಸಕ್ಕರೆ ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತೆ. ಸೋಡಾ, ಸ್ವೀಟ್ನರ್, ಎನರ್ಜಿ ಡ್ರಿಂಕ್ಸ್ ಗಳಲ್ಲಿ ಸುಕ್ರೋಲೋಸ್ ಕಂಡುಬರುತ್ತೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತೆ.
 

ಥಾಲೇಟ್ 
ಫಾಸ್ಟ್ ಫುಡ್ ಅಥವಾ ಪಿಜ್ಜಾ(Pizza), ಬರ್ಗರ್, ಪಾಸ್ತಾ ಮುಂತಾದ ಜಂಕ್ ಫುಡ್ ಗಳಲ್ಲಿ ಥಾಲೇಟ್ ಕಂಡುಬರುತ್ತವೆ, ಇದು ಪ್ಲಾಸ್ಟಿಕ್ ವಸ್ತುಗಳನ್ನು ಹೊಂದಿಕೊಳ್ಳುವಂತೆ ಮಾಡುತ್ತೆ . ಇದರ ಸೇವನೆಯು ಕ್ಯಾನ್ಸರ್, ಬಂಜೆತನ, ಯಕೃತ್ತಿನ ಹಾನಿಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತೆ.
 

Latest Videos

click me!