ಧೂಮಪಾನಕ್ಕಿಂತಲೂ ಇದರಿಂದ ಸಾಯೋರು ಅಧಿಕ, ಜೋಪಾನ!

Published : Feb 19, 2026, 06:47 PM IST

ಮಹಾ ನಗರಗಳಲ್ಲಿ ಒತ್ತಡದಿಂದ ನಾವು ಯಂತ್ರಗಳಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ. ವಾಯು ಮಾಲಿನ್ಯವೂ ಹೆಚ್ಚುತ್ತಿದೆ. ಹಳ್ಳಿಗಳಿಗೆ ಓಡಿ ಹೋಗುವ ಕಾಲ ಬರುತ್ತದೆ ಎಂದು ಇತ್ತೀಚೆಗೆ ಬೆಂಗಳೂರು ಗ್ರಾಮೀಣ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಎಚ್ಚರಿಸಿದ್ದರು.

PREV
16
ವಾಯು ಮಾಲಿನ್ಯದ ಗಂಭೀರತೆ ವಿವರಿಸಿದ ಡಾ.ಮಂಜುನಾಥ್

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಂತೂ ಚಳಿಗಾಲದಲ್ಲಿ ಉಸಿರಾಡಲು ಆಗದಂಥ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಹಸಿರಿನಿಂದ ಕಂಗೊಳಿಸುವ ಉದ್ಯಾನ ನಗರಿ ಎಂದೇ ಪ್ರಸಿದ್ಧವಾದ ಬೆಂಗಳೂರು ಇದೀಗ ದಿಲ್ಲಿಯಂತೆ ಮಾಲಿನ್ಯದಿಂದ ಜನರು ತತ್ತರಿಸುವಂತೆ ಆಗುತ್ತಿದೆ. ಇದರಿಂದ ಜನರು ಹೇಗೆ ಅನುಭವಿಸುತ್ತಾರೆಂದು ಡಾ.ಮಂಜುನಾಥ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ದೊಡ್ಡ ಸುದ್ದಿಯಾಗಿತ್ತು.

26
ವಾಯು ಮಾಲಿನ್ಯದ ಎಫೆಕ್ಟ್

ದೊಡ್ಡ ನಗರಗಳಲ್ಲಿ ‘ಅಂತರ್ಜಲ’ದ ಮಟ್ಟ ಕುಸಿಯುತ್ತಿದ್ದು ‘ಅಂತರ್ಜಾಲ’ ಹೆಚ್ಚಾಗುತ್ತಿದೆ. ವಾಯುಮಾಲಿನ್ಯದಿಂದ ಉಸಿರಾಟದ ಸಮಸ್ಯೆ, ಅಸ್ತಮಾ, ಕೆಮ್ಮು ಹೆಚ್ಚುತ್ತಿದೆ. ಆದರೆ ಈ ವಾಯು ಮಾಲಿನ್ಯ (Air Pollution) ಕೃತಕ ಧೂಮಪಾನವಾಗಿದ್ದು ಹೃದಯಾಘಾತವೂ ಆಗಬಹುದು. ಗರ್ಭಪಾತ, ಜನಿಸುವ ಮಗುವಿನ ತೂಕ ಕಡಿಮೆ ಇರುವುದು ಮತ್ತಿತರ ಸಮಸ್ಯೆಗಳನ್ನೂ ಸೃಷ್ಟಿಸುತ್ತದೆ. ಅದಕ್ಕೆ ಎಚ್ಚರ ಅಗತ್ಯವೆಂದು ಹೇಳಿದರು.

36
ಧೂಮಪಾನಕ್ಕಿಂತ ಅಧಿಕ ಸಾವು:

ವರದಿಯೊಂದರ ಪ್ರಕಾರ ಕಳೆದ ವರ್ಷ ದೇಶದಲ್ಲಿ ವಾಯ ಮಾಲಿನ್ಯದಿಂದ ಸರಿ ಸುಮಾರು 22 ಲಕ್ಷ ಜನರು ಅಸುನೀಗಿದ್ದಾರೆ. ಧೂಮಪಾನದಿಂದಾಗಿ 14 ಲಕ್ಷ ಮಾತ್ರ ಕೊನೆಯುಸಿರೆಳೆದಿದ್ದಾರೆ. ವಾಹನಗಳ ದಟ್ಟಣೆ, ಕಟ್ಟಡಗಳ ಧೂಳು, ಬೆಂಕಿ ಹಚ್ಚುವುದು, ಕೈಗಾರಿಕೆಗಳಿಂದ ಹೊರಸೂಸುವ ಅನಿಲಗಳಿಂದಲೇ ವಾಯು ಮಾಲಿನ್ಯ ಹೆಚ್ಚುತ್ತಿದೆ. ದೆಹಲಿಯಲ್ಲಂತೂ ಅದೆಷ್ಟು ಮಾಲಿನ್ಯವೆಂದರೆ ಎದುರುಗಡೆ ಇರುವ ಮನುಷ್ಯರೂ ಕಾಣಿಸುವುದಿಲ್ಲ, ಎಂದಿದ್ದರು.

46
ಶುದ್ಧ ಗಾಳಿಯ ಅನಿವಾರ್ಯತೆ

ಬೆಂಗಳೂರಿಗೆ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ ರೀತಿ ಇನ್ನೂ ಹತ್ತ ಹಲವು ಗಾರ್ಡನ್ಸ್ ಬೇಕು. ಮರಗಳಿಂದ ಇಲ್ಲಿ ಕಲಾಕೃತಿ ರಚಿಸಿರುವ ಕಲಾವಿದರೇ ನಿಜವಾದ ಪರಿಸರದ ಹಿರೋಗಳಾಗಿದ್ದಾರೆ. ನಮ್ಮ ಬದುಕಿಗೆ ನಿಜವಾದ ಫೇಸ್‌ ಮೇಕರ್‌ ಪರಿಸರವಾಗಿದ್ದು,ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದಿದ್ದರು.

56
ಹೃದಯ ಸಂಬಂಧಿ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ

ಈಗ ದಿನಬೆಳಗಾದರೆ ಯಾರೋ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಕಾಮನ್ ಆಗುತ್ತಿದೆ. ಅದರಲ್ಲೂ ಹದಿಹರೆಯದವರೇ ಹಾರ್ಟ್​ ಅಟ್ಯಾಕ್​ಗೆ ಬಲಿಯಾಗುತ್ತಿದ್ದಾರೆ. ಯಾವುದೇ ಸೂಚನೆ ನೀಡದೆಯೇ ಈ ಮಹಾಮಾರಿ ಹೃದಯವನ್ನು ಆವರಿಸಿಕೊಳ್ಳುತ್ತಿದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಮುಂಚೆಯೇ ಎಷ್ಟೋ ಬಾರಿ ಬೇರೆ ಬೇರೆ ರೀತಿಯಲ್ಲಿ ಹೃದಯ ತನ್ನನ್ನು ಜೋಪಾನ ಮಾಡಲು ಸೂಚನೆ ನೀಡುತ್ತದೆ. ಧಾವಂತದ ಬದುಕು ಅದನ್ನು ಕಡೆಗಣಿಸುವಂತೆ ಮಾಡುತ್ತದೆ. ಸ್ವಲ್ಪ ಸಮಸ್ಯೆ ಆದ್ರೂ ಡಾಕ್ಟರ್​ ಬಳಿ ನಾಳೆ ಹೋಗೋಣ ಬಿಡು ಎನ್ನುತ್ತಾರೆ. ಆದರೆ, ಆ ನಾಳೆ ಬರುವುದೇ ಇಲ್ಲ. ನಾಳೆ ನಾಳೆ ಎನ್ನುತ್ತಲೇ ಇಹಲೋಕ ತ್ಯಜಿಸಿ ಹೋಗುತ್ತಿದ್ದಾರೆ. ಇನ್ನು ಹೃದಯದಲ್ಲಿ ಸಮಸ್ಯೆ ಕಾಣಿಸಿದಾಗ ಆ್ಯಸಿಡಿಟಿ ಇದ್ದಿರಬಹುದು, ನಿನ್ನೆ ಅದನ್ನು ತಿಂದೆ, ಹಸಿವೆಯಿಂದ ಇದ್ದೆ... ಹೀಗೆ ಏನೇನೋ ನಮಗೆ ನಾವೇ ನೆಪ ಹೇಳ್ಕೊಂಡು, ಸಾವನ್ನು ಬರಮಾಡಿಕೊಳ್ಳುತ್ತಿದ್ದೇವೆ, ಎನ್ನುತ್ತಾರೆ ವೈದ್ಯರು.

66
ಕಾಲು ಪದೆ ಪದೇ ಜೋಮು ಗಟ್ಟುತ್ತಾ?

ಕಾಲು ಪದೆ ಪದೇ ಜೋಮುಗಟ್ಟಿದ್ದರೂ ಇಗ್ನೋರ್ ಮಾಡಬಾರದೆಂದು ತಜ್ಞರು ಹೇಳುತ್ತಾರೆ. ಇದು ನಮ್ಮ ಹೃದಯ ಆರೋಗ್ಯದ ಬಗ್ಗೆ ಸಿಗ್ನಲ್ ಕೊಡುತ್ತಿದ್ದು, ಅಲರ್ಟ್ ಆದರೆ ಬೆಸ್ಟ್. ಡೈ ಹೈಡ್ರೇಷನ್ ಹಾಗೂ ತಲೆ ಸುತ್ತುವಿಕೆ ಎಲ್ಲವೂ ಹಾರ್ಟ್ ಹೇಗೆ ವರ್ಕ್ ಮಾಡುತ್ತಿದೆ ಎಂಬ ಸೂಚನೆ ಕೊಡಲಿದ್ದು, ಅದನ್ನು ಯಾವತ್ತೂ ಇಗ್ನೋರ್ ಮಾಡಬಾರದು.

ಯೋಗ, ಧ್ಯಾನ ಹಾಗೂ ಒಳ್ಳೇಯ ಆಹಾರ ಪದ್ಧತಿಯನ್ನು ಅನುಸರಿಸಿ, ಮನಸ್ಸು ಸದಾ ಉಲ್ಲಾಸದಿಂದ ಇರುವಂತೆ ನೋಡಿಕೊಂಡರೆ ಸಾಕು. ನಮ್ಮ ಹೃದಯ ಹೆಚ್ಚು ಆರೋಗ್ಯವಾಗಿ ಇರುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ ತಜ್ಞರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories