ದಿನಕ್ಕೆರಡು ಎಲೆ, ಮಾತ್ರೆಗಳಿಗೆ ಗುಡ್​ಬೈ: ಆರೋಗ್ಯದ ಕಣಜ ದೊಡ್ಡಪತ್ರೆಯ ಮಾಹಿತಿ ನೀಡಿದ ನಟಿ ಅದಿತಿ ಪ್ರಭುದೇವ

Published : Dec 21, 2025, 10:02 PM IST

ನಟಿ ಅದಿತಿ ಪ್ರಭುದೇವ ಅವರು ದೊಡ್ಡಪತ್ರೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಶೀತ, ಕೆಮ್ಮು, ಅಜೀರ್ಣದಂತಹ ಹಲವು ಸಮಸ್ಯೆಗಳಿಗೆ ಮನೆಯಲ್ಲೇ ಸಿಗುವ ಈ ಸಾಂಬ್ರಾಣಿ ಎಲೆಯು ರಾಮಬಾಣವಾಗಿದೆ. ಇದನ್ನು ದಿನನಿತ್ಯ ಸೇವಿಸುವುದರಿಂದ ಹಲವಾರು ಮಾತ್ರೆಗಳನ್ನು ದೂರವಿಡಬಹುದು ಎಂದು ಅವರು ವಿವರಿಸಿದ್ದಾರೆ.

PREV
16
ಹದಗೆಡುವ ಆರೋಗ್ಯ

ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಆರೋಗ್ಯ ಹದಗೆಡುವುದು ಮಾಮೂಲು. ಇಂದು ಕಾಲಕಾಲಕ್ಕೆ ಏನು ಬೇಕೋ ಅದು ಆಗುತ್ತಿಲ್ಲ. ಎಲ್ಲವೂ ವಿಪರೀತ ಎನ್ನಿಸುವಷ್ಟರ ಮಟ್ಟಿಗೆ ಹವಾಮಾನ ಹದಗೆಡುತ್ತಿದೆ. ಅದರ ಜೊತೆಗೆ ಮೈಗೆ ಅಂಟಿಕೊಳ್ಳುವ ರೋಗಗಳು. ಆ ರೋಗಗಳ ವಾಸಿಗೆ ಒಂದಿಷ್ಟು ಮಾತ್ರೆಗಳು. ಆ ಮಾತ್ರೆಗಳಿಂದ ಸೈಡ್​ ಎಫೆಕ್ಟ್ಸ್​.

26
ದೊಡ್ಡಪತ್ರೆ ಪ್ರಯೋಜನ

ಭಾರತ ಮೂಲದ ಆಯುರ್ವೇದದಲ್ಲಿಯೇ ಎಲ್ಲಾ ರೋಗಗಳಿಗೂ ಸೈಡ್​ ಎಫೆಕ್ಟ್​ ಇಲ್ಲದೇ ಪರಿಹಾರವೂ ಇರುವಾಗ, ಹೆಚ್ಚಿನ ಜನರಿಗೆ ಅದು ಬೇಡದ ವೈದ್ಯಕೀಯ ಪದ್ಧತಿಯಾಗಿದೆ. ಅದರಲ್ಲಿಯೂ ಅಡುಗೆ ಮನೆಯ ಪದಾರ್ಥ, ಹಿತ್ತಲಲ್ಲಿಯೇ ಇರುವ ಗಿಡಗಳಿಂದಲೂ ಸಾಕಷ್ಟು ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಬಹುದಾಗಿದೆ. ಅವುಗಳಲ್ಲಿ ಒಂದು ದೊಡ್ಡಪತ್ರೆ.

36
ನಟಿ ಅದಿತಿ ಪ್ರಭುದೇವ ಮಾತು

ದೊಡ್ಡಪತ್ರೆಯನ್ನು ಸಾಸಂಬರ್​ ಸೊಪ್ಪು, ಸಾವಿರಸಾಂಬಾರ್​ ಸೊಪ್ಪು, ಸಾಂಬಾರ್​ ಸೊಪ್ಪು, ಸಾಂಬ್ರಾಣಿ ಎಲೆ ಎಂದೆಲ್ಲಾ ಕರೆಯುವುದು ಉಂಟು. ಕುಂಡದಲ್ಲಿಯೂ ಆರಾಮವಾಗಿ ಬೆಳೆಯುವ ಈ ಸೊಪ್ಪಿನಿಂದ ಎಷ್ಟೊಂದು ಆರೋಗ್ಯಕಾರಿ ಪ್ರಯೋಜನಗಳು ಇವೆ. ದಿನಕ್ಕೆ ಎರಡೇ ಎರಡು ಸೊಪ್ಪನ್ನು ತಿನ್ನುತ್ತಾ ಬಂದರೆ ಹಲವಾರು ಮಾತ್ರೆಗಳನ್ನು ಮನೆಯಿಂದಲೇ ದೂರ ಇಡಬಹುದು ಎನ್ನುತ್ತಾರೆ ಸ್ಯಾಂಡಲ್​ವುಡ್​ ತಾರೆ ಅದಿತಿ ಪ್ರಭುದೇವ.

46
ಹಲವು ಸಮಸ್ಯೆಗಳಿಗೆ ರಾಮಬಾಣ

ತಮ್ಮ ತಾಯಿ ನೀಡಿರುವ ಟಿಪ್ಸ್​ ಅವರು ನಟಿ ಕೆಲ ಹಿಂದೆ ವಿಡಿಯೋ ಶೇರ್​ ಮಾಡಿದ್ದು, ಅದೀಗ ಮತ್ತೆ ವೈರಲ್​ ಆಗುತ್ತಿದೆ. ಈಗಂತೂ ಚಳಿ ಚಳಿ ಚಳಿ. ಇದರಿಂದ ಆಗುವ ಸಮಸ್ಯೆಗಳು ಹಲವಾರು. ಸೀನು, ಶೀತ, ನೆಗಡಿ ಎಲ್ಲವನ್ನೂ ದೂರ ಮಾಡುವ ಶಕ್ತಿ ಈ ದೊಡ್ಡ ಪತ್ರೆಗೆ ಇದೆ.

56
ಸೇವನೆ ಹೇಗೆ?

ಖಾಲಿ ಹೊಟ್ಟೆಯಲ್ಲಿ ಎರಡು ದೊಡ್ಡಪತ್ರೆ ಎಲೆಯನ್ನು ತಿಂದು ನಸುಬೆಚ್ಚಗಿನ ನೀರನ್ನು ಕುಡಿಯುತ್ತಾ ಬಂದರೆ, ತಮ್ಮ ಅಮ್ಮನಿಗೆ ಸೀನು ಸಂಪೂರ್ಣ ನಿಂತೇ ಹೋಯಿತು ಎಂದಿದ್ದಾರೆ ನಟಿ ಅದಿತಿ. ಇದನ್ನು ಹಿಂಡಿದಾಗ ರಸ ಬರುತ್ತದೆ. ಇಲ್ಲದೇ ಹೋದರೆ ಗ್ಯಾಸ್​ ಮೇಲೆ ಎಲೆಯನ್ನು ತುಸು ಬೆಚ್ಚಗೆ ಮಾಡಿ ಹಿಂಡಿದರೂ ರಸ ಬರುತ್ತದೆ. ಆ ರಸವನ್ನು ಕುಡಿಯುತ್ತಾ ಬಂದರೆ, ಕೆಮ್ಮು, ಶೀತ , ಸ್ಕಿನ್​ ಅಲರ್ಜಿ, ಕ್ರಿಮಿ ಕಡಿದಿದ್ದರೆ ಎಲ್ಲವೂ ಮಾಯವಾಗುತ್ತದೆ. ಬಾಣಲೆಯಲ್ಲಿ ಎಲೆಯನ್ನು ಬಿಸಿ ಮಾಡಿ ನೆತ್ತಿಗೆ ಹೆಚ್ಚುವುದರಿಂದಲೂ ನೆಗಡಿ, ಕೆಮ್ಮು ಕಡಿಮೆ ಆಗುತ್ತದೆ ಎಂದಿದ್ದಾರೆ. ಇದಕ್ಕೆ ದನಿಗೂಡಿಸಿದ ಅದಿತಿ ಅಮ್ಮ, ಒಂದು ಟೊಂಗೆ ಗಿಡವನ್ನು ಮನೆಯಲ್ಲಿ ನೆಟ್ಟರೆ 10 ಟೈಪ್​ ಮಾತ್ರೆಯನ್ನು (Medicines) ಹೊರಕ್ಕೆ ಹಾಕಬಹುದು ಎನ್ನುತ್ತಾರೆ ಅವರು.

66
ಪ್ರಯೋಜನ ಹಲವಾರು

ಇದರ ಪ್ರಯೋಜನಗಳು ಹಲವಾರು. ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರಿಗೂ ಇದು ಪ್ರಯೋಜನಕಾರಿ. ಅದರ ಬಗ್ಗೆಯೂ ನಟಿ ತಿಳಿಸಿಕೊಟ್ಟಿದ್ದಾರೆ.

  • ದೊಡ್ಡ ಪತ್ರೆ ಎಲೆಗಳನ್ನ ಉಸಿರಾಟದ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಇದರ ರಸವನ್ನ ಎದೆಯ ಮೇಲೆ ಹಚ್ಚುವುದರಿಂದ ಉಸಿರಾಟದ ಸಮಸ್ಯೆ ಸುಲಭವಾಗುತ್ತದೆ.
  • ಚಿಕ್ಕ ಮಕ್ಕಳಿಗೆ ಜ್ವರ ಬಂದಾಗ ಈ ಎಲೆಗಳನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ.
  • ಗಾಯ ಅಥವಾ ಚೇಳು ಕಡಿತವಾದಾಗ ಪ್ರಥಮ ಚಿಕಿತ್ಸೆಯಾಗಿ ಇದರ ಎಲೆಗಳನ್ನು ಜಜ್ಜಿ ರಸವನ್ನ ಬಳಸಲಾಗುತ್ತದೆ.
  • ಈ ಎಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಲೆಯನ್ನ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
  • ಅಜೀರ್ಣ, ಮಲಬದ್ಧತೆ ಮತ್ತು ಹೊಟ್ಟೆ ಉರಿಯುವಿಕೆಯಿಂದ ಬಳಲುತ್ತಿರುವವರಿಗೆ ಇದರ ಎಲೆಯ ಔಷಧ ರಾಮ ಬಾಣದಂತೆ ಕೆಲಸ ಮಾಡುತ್ತದೆ.
  • ಒಂದು ವಾರದ ವರೆಗೆ ಪ್ರತಿನಿತ್ಯ ತಪ್ಪದೆ ದೊಡ್ಡಪತ್ರೆ ಎಲೆಯ ರಸವನ್ನು ಸೇವನೆ ಮಾಡಿದಲ್ಲಿ ಕಾಮಾಲೆ ರೋಗ ನಿವಾರಣೆಯಾಗುತ್ತದೆ.
  • ತುರಿಕೆ, ಕಜ್ಜಿಗೆ ಇದರ ರಸವನ್ನ ಹಚ್ಚಿದರೆ ತುರಿಕೆ ಕಜ್ಜಿಯಂತಹ ರೋಗಗಳು ಕಡಿಮೆಯಾಗುತ್ತದೆ.
  • ದೊಡ್ಡ ಪತ್ರೆ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಬಹಳ ಸಹಕಾರಿಯಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories