ಕ್ಯಾಲೋರಿ ಬರ್ನ್ ಮಾಡೋಕೆ ಜಿಮ್‌ಗೇ ಹೋಗ್ಬೇಕು ಅಂತೇನಿಲ್ಲ, ಮನೇಲಿ ಈ ಆಕ್ಟಿವಿಟೀಸ್ ಮಾಡ್ಬೋದು

First Published | Apr 19, 2024, 2:55 PM IST

ಫಿಟ್ ಆಂಡ್ ಫೈನ್ ಆಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇದಕ್ಕಾಗಿ ಜಿಮ್‌, ವರ್ಕೌಟ್‌, ಡಯೆಟ್ ಅಂತ ನಾನಾ ರೀತಿ ಕಸರತ್ತು ಮಾಡ್ತಾರೆ. ಹೇಗಾದ್ರೂ ಕ್ಯಾಲೋರಿ ಬರ್ನ್ ಮಾಡ್ಬೇಕು ಅಂತ ಶ್ರಮಿಸ್ತಾರೆ. ಆದ್ರೆ ಜಿಮ್‌ಗೆ ಹೋಗದೆಯೂ ನೀವು ಕ್ಯಾಲೋರಿ ಬರ್ನ್ ಮಾಡಬಹುದು ಅನ್ನೋದು ನಿಮ್ಗೊತ್ತಾ?

ಫಿಟ್ ಆಂಡ್ ಫೈನ್ ಆಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇದಕ್ಕಾಗಿ ಜಿಮ್‌, ವರ್ಕೌಟ್‌, ಡಯೆಟ್ ಅಂತ ನಾನಾ ರೀತಿ ಕಸರತ್ತು ಮಾಡ್ತಾರೆ. ಹೇಗಾದ್ರೂ ಕ್ಯಾಲೋರಿ ಬರ್ನ್ ಮಾಡ್ಬೇಕು ಅಂತ ಶ್ರಮಿಸ್ತಾರೆ. ಆದ್ರೆ ಜಿಮ್‌ಗೆ ಹೋಗದೆಯೂ ನೀವು ಕ್ಯಾಲೋರಿ ಬರ್ನ್ ಮಾಡಬಹುದು ಅನ್ನೋದು ನಿಮ್ಗೊತ್ತಾ?

ಜಿಮ್‌ಗೆ ಕಾಲಿಡದೆ ಕ್ಯಾಲೊರಿಗಳನ್ನು ಬರ್ನ್ ಮಾಡಲು ದಿನಚರಿಯಲ್ಲಿ ಹಲವಾರು ಇತರ ಚಟುವಟಿಕೆಗಳನ್ನು ಸೇರಿಸಿಕೊಳ್ಳಬಹುದು. ಹೆಚ್ಚುವರಿ ಪೌಂಡ್‌ಗಳನ್ನು ಕಡಿಮೆ ಮಾಡಲು ಮತ್ತು ಸ್ನಾಯುಗಳನ್ನು ನಿರ್ಮಿಸಲು ಈ ಚಟುವಟಿಕೆಗಳು ನೆರವಾಗುತ್ತದೆ. ಹಾಗಿದ್ರೆ ಕ್ಯಾಲೋರಿ ಬರ್ನ್ ಮಾಡುವ ಆ ಆಕ್ಟಿವಿಟೀಸ್ ಯಾವುದು ತಿಳಿಯೋಣ.

Latest Videos


ಗಾರ್ಡನಿಂಗ್‌
ಕ್ಯಾಲೋರಿ ಬರ್ನ್‌ ಮಾಡಲು ಗಾರ್ಡನಿಂಗ್ ಅತ್ಯುತ್ತಮ ಮಾರ್ಗವಾಗಿದೆ. ಸಲಕೆ, ಹಾರೆಗಳನ್ನು ಹಿಡಿದು ಗುಂಡಿ ಅಗೆಯುವುದು, ಮಣ್ಣು ಎತ್ತುವುದು ಮಾಡುವುದು ದೇಹಕ್ಕೆ ಹೆಚ್ಚಿನ ವ್ಯಾಯಾಮವನ್ನು ನೀಡುತ್ತದೆ. ಕೈ ಕಾಲುಗಳಿಗೆ ಹೆಚ್ಚಿನ ಶ್ರಮ ಬೀಳುವುದರಿಂದ ಇದು ಉತ್ತಮ ವರ್ಕೌಟ್ ಸಹ ಹೌದು.

ಡ್ಯಾನ್ಸ್ ಮಾಡಿ
ಪ್ರತಿದಿನ ಜಿಮ್‌ಗೆ ಹೋಗುವ ಬದಲು ನೃತ್ಯ ಮಾಡುವುದು ಅತ್ಯುತ್ತಮ ಪರ್ಯಾಯವಾಗಿದೆ ಎಂದು ತಜ್ಞರು ನಂಬುತ್ತಾರೆ. ಇದು ವಿನೋದ, ಆನಂದದಾಯಕ ಮತ್ತು ಅನುಕೂಲಕರ ಆಕ್ಟಿವಿಟಿಯಾಗಿದೆ. ಸುಮ್ನೆ ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡುತ್ತಾ ಸಮಯ ಕಳೆಯುವುದರಿಂದ  ಗಂಟೆಗೆ 300 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು.

ಮನೆ ಕೆಲಸ ನಿಭಾಯಿಸಿ
ಜಿಮ್‌ನಲ್ಲಿ ಕಾರ್ಡಿಯೋ ಸೆಷನ್‌ ಮಾಡುವ ಬದಲು ಮನೆಯಲ್ಲಿದ್ದುಕೊಂಡೇ ಕೆಲಸಗಳನ್ನು ನಿಭಾಯಿಸಿ. ಕ್ಯಾಲೊರಿಗಳನ್ನು ಸುಡಲು ಇದು ಜಿಮ್ ವರ್ಕೌಟ್‌ನಂತೆಯೇ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತವೆ. ನೆಲವನ್ನು ಒರೆಸುವುದು, ಗುಡಿಸುವುದು ಮೊದಲಾದ ಕೆಲಸಗಳಿಗೆ ಹೆಚ್ಚು ಪರಿಶ್ರಮದ ಅಗತ್ಯವಿದೆ. ಇದು ಸುಲಭವಾಗಿ ಕ್ಯಾಲೋರಿ ಬರ್ನ್ ಮಾಡುತ್ತದೆ.

ಒಳಾಂಗಣ ಸೈಕ್ಲಿಂಗ್
ಜಿಮ್‌ಗೆ ಹೋಗಲು ಅಥವಾ ವಾಕ್ ಮಾಡಲು ಇಂಟ್ರೆಸ್ಟ್ ಇಲ್ಲದವರು ಒಳಾಂಗಣ ಸೈಕ್ಲಿಂಗ್ ಮಾಡಬಹುದು. ಇದು ಹೆಚ್ಚು ಬೆವರುವಂತೆ ಮಾಡುತ್ತದೆ. ಜೊತೆಗೆ ಹೆಚ್ಚು ಕ್ಯಾಲೊರಿಗಳನ್ನು ಸುಡುವಂತೆ ಮಾಡುತ್ತದೆ. 30-ನಿಮಿಷದ ಸೆಷನ್, ತೀವ್ರತೆಯನ್ನು ಅವಲಂಬಿಸಿ, 300-400 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು.

ಬಟ್ಟೆ ಒಗೆಯುವುದು
ಮನುಷ್ಯ ಯಾವಾಗಲೂ ಎಲ್ಲಾ ಕೆಲಸಗಳನ್ನು ಸುಲಭವಾಗಿ ಮಾಡಲು ಯತ್ನಿಸುತ್ತಾನೆ. ಹಿಂದೆಲ್ಲಾ ಕೈಯಾರೆ ಬಟ್ಟೆ ಒಗೆಯುತ್ತಿದ್ದವರು ಈಗ ವಾಶಿಂಗ್ ಮೆಷಿನ್‌ಗೆ ಹಾಕಿ ಬಿಟ್ಟುಬಿಡುತ್ತಾರೆ. ಹಾಗೆ ಮಾಡುವ ಬದಲು ಕೈಯಲ್ಲೇ ಬಟ್ಟೆ ತೊಳೆಯುವ ಅಭ್ಯಾಸ ಕ್ಯಾಲೋರಿ ಬರ್ನ್ ಮಾಡಲು ಸಹಾಯಕವಾಗಿದೆ.

ಸಾಧ್ಯವಾದಷ್ಟೂ ನಡೆಯಿರಿ
ಮನೆಯಿಂದಲೇ ವೆಹಿಕಲ್ ಹತ್ತಿ, ಮನೆಯ ಸಮೀಪವೇ ವೆಹಿಕಲ್‌ನಿಂದ ಇಳಿಯೋ ಅಭ್ಯಾಸ ಬಿಟ್ಟುಬಿಡಿ. ಸಾಧ್ಯವಾದಷ್ಟೂ ನಡೆಯಿರಿ. ಸಮೀಪದ ಮಾರ್ಕೆಟ್‌, ಶಾಪ್‌, ಮೆಡಿಕಲ್‌ಗಳಿಗೆ ನಡೆದುಕೊಂಡೇ ಹೋಗಿ. ಇದು ದೇಹವನ್ನು ಚುರುಕಾಗಿಸುತ್ತದೆ. ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ.

click me!