ಸೈಕಾಟಿಕ್ ಬ್ರೇಕ್ ಡೌನ್… ಸೆಲೆಬ್ರಿಟಿಗಳನ್ನು ಬಿಡದೇ ಕಾಡಿದ ಈ ಮಾನಸಿಕ ಸಮಸ್ಯೆ ಬಗ್ಗೆ ತಿಳಿಯಲೇಬೇಕು….

First Published | Oct 31, 2023, 5:17 PM IST

ಮಾನಸಿಕ ಕುಸಿತ ಅಥವಾ ಸೈಕಾಟಿಕ್ ಬ್ರೇಕ್ ಡೌನ್ ಅನೇಕ ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಅಸ್ವಸ್ಥತೆಗೆ ಗುರಿಯಾಗುವವರಿಗೆ ಸಹ ಅವರು ಅಂತಹ ಸಂದರ್ಭಗಳನ್ನು ಎದುರಿಸುತ್ತಿದ್ದಾರೆಂದು ತಿಳಿದಿರೋದಿಲ್ಲ. ಹಲವು ಸೆಲಬ್ರಿಟಿಗಳು ಸಹ ಇಂತಹ ಸಮಸ್ಯೆ ಹೊಂದಿದ್ದಾರೆ. ಬನ್ನಿ ಆ ಬಗ್ಗೆ ತಿಳಿಯೋಣ. 
 

ಒಬ್ಬ ವ್ಯಕ್ತಿಯು ವಾಸ್ತವದೊಂದಿಗಿನ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಂಡ ಸ್ಥಿತಿಯನ್ನು ಮೆಂಟಲ್ ಬ್ರೇಕ್ ಡೌನ್ ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯ ನರಗಳ ಕುಸಿತವಾಗಿದೆ. ಇತ್ತೀಚೆಗೆ, ಅಮೇರಿಕನ್ ಗಾಯಕಿ ಲೇಡಿ ಗಾಗಾ (Lady Gaga) ತಮ್ಮ ಅನಾರೋಗ್ಯದ ಭಾಗವನ್ನು 'ದಿ ಮಿ ಯು ಕ್ಯಾಂಟ್ ಸೀ' ಸಾಕ್ಷ್ಯಚಿತ್ರದಲ್ಲಿ ಹಂಚಿಕೊಂಡಿದ್ದಾರೆ, ಅವರು 19 ವರ್ಷದವಳಿದ್ದಾಗ, ಸಂಗೀತ ನಿರ್ಮಾಪಕರೊಬ್ಬರು ಅವರ ಮೇಲೆ ಅತ್ಯಾಚಾರ ಎಸಗಿದರು ಮತ್ತು ಬಾಯಿ ತೆರೆದರೆ ಸಂಗೀತದಿಂದ ದೂರ ಸರಿಯುವುದಾಗಿ ಬೆದರಿಕೆ ಹಾಕಿದರು ಎಂದು ಹೇಳಿದರು. 
 

ಇದರ ನಂತರ, ಲೇಡಿ ಗಾಗಾಗೆ ಏನೂ ನೆನಪಿರಲಿಲ್ಲ.  ಏಕೆಂದರೆ ಅವರು ಸೈಕಾಟಿಕ್ ಬ್ರೇಕ್ ಡೌನ್ ಗೆ ಒಳಗಾಗಿದ್ದರು. ಇದು ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಕಾರಣ ಎಂದು ಲೇಡಿ ಗಾಗಾ ವಿವರಿಸುತ್ತಾರೆ. ಈ ಸಮಸ್ಯೆಯಿಂದ ಅವರು ಬಹಳ ಸಮಯದವರೆಗೆ ಕಷ್ಟಪಡುತ್ತಿದ್ದರು.  PTSD ಎಂದರೇನು, ಅದರ ರೋಗಲಕ್ಷಣಗಳು ಮತ್ತು ತಪ್ಪಿಸುವ ಮಾರ್ಗಗಳನ್ನು ತಿಳಿದುಕೊಳ್ಳೋಣ

Tap to resize

ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ ನ ಲಕ್ಷಣಗಳು (Post Troumatic stress disorder)
ರೋಗಲಕ್ಷಣಗಳನ್ನು ತೋರಿಸದ ಕೆಲವು ರೋಗಗಳಿವೆ. ದೊಡ್ಡ ಸಮಸ್ಯೆಯೆಂದರೆ, ಸಂತ್ರಸ್ತರಿಗೆ ತಾನು ರೋಗಿ ಎಂದು ಸಹ ತಿಳಿದಿರೋದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಚಿಕಿತ್ಸೆ ತುಂಬಾ ಕಷ್ಟ. ಇದು ಮಾನಸಿಕ ಸ್ಥಿತಿಯಲ್ಲಿ ಮಾತ್ರ ಸಂಭವಿಸುತ್ತದೆ. ಪಿಟಿಎಸ್ಡಿ ಅಂತಹ ಒಂದು ಅಸ್ವಸ್ಥತೆ. ಅದನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ.

ಅಮೆರಿಕದ ಪಾಪ್ ತಾರೆ ಕೇಶಾ ಕೂಡ ಮೆಂಟಲ್ ಬ್ರೇಕ್ ಡೌನ್ ಗೆ (psychotic breakdown) ಒಳಗಾಗಿದ್ದಾರೆ. ಅವರು ತನಗೆ ಹುಚ್ಚು ಹಿಡಿದ ಅನುಭವ ಉಂಟಾಗಿತ್ತು ಅನ್ನೋದನ್ನು ಒಪ್ಪಿಕೊಂಡಿದ್ದರು. ಪ್ರತಿದಿನ ಅವರು ಎರಡು ಗಂಟೆಗಳ ಕಾಲ ಏಕಾಂಗಿಯಾಗಿ ಅಳುತ್ತಿದ್ದರಂತೆ. ನಂತರ ಸಮಸ್ಯೆ ನಿವಾರಣೆಯಾಗಿ ಸಾಮಾನ್ಯರಂತಾದರು ಎನ್ನಲಾಗಿದೆ. 

ಸೈಕಾಟಿಕ್ ಬ್ರೇಕ್ ಡೌನ್ ಆದಾಗ ಏನಾಗುತ್ತದೆ
ಈ ಸಮಸ್ಯೆ ಕಾಡಿದಾಗ ಅಗತ್ಯಕ್ಕಿಂತ ಹೆಚ್ಚು ಭಾವುಕರಾಗುತ್ತಾರೆ. ಪ್ರತಿಯೊಂದು ಸಣ್ಣ ವಿಷಯಕ್ಕೂ ಅಳು (crying) ಇತ್ತು ಮತ್ತು ಅಗತ್ಯಕ್ಕಿಂತ ಹೆಚ್ಚು ಆಯಾಸ ಎನಿಸುತ್ತದೆ. ಆಗ ಮನಸ್ಸು ಸಹ ಶೂನ್ಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಜಾಗರೂಕರಾಗಿರಬೇಕು. ಏಕೆಂದರೆ ಇದು ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. 

ಈ ರೋಗದಲ್ಲಿ, ಯಾವುದೇ ಕಾರಣವಿಲ್ಲದೆ ಆತಂಕ ಮತ್ತು ಒತ್ತಡ ಉಂಟಾಗುತ್ತದೆ. ಸೈಕಾಟಿಕ್ ಬ್ರೇಕ್ ಡೌನ್ ನಿಮ್ಮ ಸುತ್ತಲಿನ ವಿಷಯಗಳ ಬಗ್ಗೆ ಗಮನ ಹರಿಸಲು ನಿಮಗೆ ಅನುಮತಿಸುವುದಿಲ್ಲ ಮತ್ತು ಭಾವನೆಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಇದರಿಂದ ಹೊರಬರಲು, ಯಾವುದಾದರೂ ವಿಷಯಗಳಿಂದ ಬ್ರೇಕ್ ತೆಗೆದುಕೊಳ್ಳುವ ಅವಶ್ಯಕತೆ ಇರುತ್ತದೆ. ಇದನ್ನು ಮಾಡದಿದ್ದರೆ ಮಾನಸಿಕವಾಗಿ ಹಾನಿಕಾರಕವಾಗಬಹುದು. ಈ ಸ್ಥಿತಿಗೆ ಮಾನಸಿಕ ಚಿಕಿತ್ಸೆಯ (mental treatment) ಅಗತ್ಯವಿದೆ.

ಸೈಕಾಟಿಕ್ ಬ್ರೇಕ್ ಡೌನ್ ಗೆ ಕಾರಣಗಳು
ಈ ಸಮಸ್ಯೆಗೆ ಅನೇಕ ಕಾರಣಗಳಿರಬಹುದು. ಇವುಗಳಲ್ಲಿ ಆರೋಗ್ಯ, ಅನುವಂಶಿಕ, ದೈಹಿಕ ಅಸ್ವಸ್ಥತೆ, ನಿದ್ರೆಯ ಕೊರತೆ ಮತ್ತು ಆಲ್ಕೋಹಾಲ್-ಸಿಗರೇಟುಗಳು, ಮಾದಕವಸ್ತುಗಳು ಅಥವಾ ತಪ್ಪು ಔಷಧಿಗಳ ಸೇವನೆ, ಅಲ್ಝೈಮರ್ ಅಥವಾ ವೃದ್ಧಾಪ್ಯದಲ್ಲಿ ಮಾನಸಿಕ ಗೊಂದಲದಂತಹ ಪರಿಸ್ಥಿತಿಗಳು ಸೇರಿವೆ. 
 

ಸೈಕಾಟಿಕ್ ಬ್ರೇಕ್ ಡೌನ್ ತಡೆಗಟ್ಟೋದು ಹೇಗೆ?
ಇಂತಹ ಸಮಸ್ಯೆಗಳನ್ನು ತಪ್ಪಿಸಲು, ನಿಮ್ಮ ಬ್ಯುಸಿ ಲೈಫ್ ಸ್ಟೈಲ್ ನಿಂದ ಕೆಲವು ಕ್ಷಣಗಳನ್ನು ನಿಮಗಾಗಿ ತೆಗೆದುಕೊಳ್ಳಬೇಕು. ಇದನ್ನು ಮಾಡುವುದರಿಂದ, ದೇಹಕ್ಕೆ ವಿಶ್ರಾಂತಿ ಸಿಗುತ್ತದೆ ಮತ್ತು ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಗಮನ ಮತ್ತು ಏಕಾಗ್ರತೆಯನ್ನು ಕಳೆದುಕೊಂಡಾಗ ವಿರಾಮ ತೆಗೆದುಕೊಳ್ಳುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮವು ಒತ್ತಡವನ್ನು ಉಂಟುಮಾಡುತ್ತಿದೆ, ಇದರಿಂದಾಗಿ ಮಾನಸಿಕ ಆಯಾಸ ಮತ್ತು ಖಿನ್ನತೆ ಹೆಚ್ಚುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಕೆಲಸದಿಂದ, ಸೋಶಿಯಲ್ ಮೀಡಿಯಾದಿಂದ ಕೆಲವು ದಿನಗಳ ಬ್ರೇಕ್ ತೆಗೆದುಕೊಳ್ಳುವುದು ಅಗತ್ಯವಾಗುತ್ತದೆ. ಜೀವನಶೈಲಿಯನ್ನು ಸುಧಾರಿಸುವ ಮೂಲಕ ನೀವು ಈ ಸಮಸ್ಯೆಯನ್ನು ತಪ್ಪಿಸಬಹುದು.
 

Latest Videos

click me!