Hormonal Imbalance: ಪುರುಷರು ದೇಹ ನೀಡೋ ಈ 5 ಸಿಗ್ನಲ್ಸ್ ಮಿಸ್ ಮಾಡ್ಬೇಡಿ

Published : Mar 25, 2026, 07:38 PM IST

Low testosterone symptoms: ಹಾರ್ಮೋನ್ ಸಮಸ್ಯೆಗಳು ಅಂದ್ರೆ ಅದು ಕೇವಲ ಮಹಿಳೆಯರಿಗೆ ಮಾತ್ರ ಅಂತ ಹೆಚ್ಚಿನವರು ಅಂದುಕೊಂಡಿರುತ್ತಾರೆ. ಆದರೆ, ಪುರುಷರು ಕೂಡ ಹಾರ್ಮೋನುಗಳ ಅಸಮತೋಲನದಿಂದ ಬಳಲುತ್ತಾರೆ. ಅದರಲ್ಲೂ 'ಟೆಸ್ಟೋಸ್ಟೆರಾನ್' ಹಾರ್ಮೋನ್ ಪುರುಷರ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

PREV
16
ಪುರುಷರಲ್ಲಿ 'ಟೆಸ್ಟೋಸ್ಟೆರಾನ್' ಹಾರ್ಮೋನ್ ಪಾತ್ರ

ಸಾಮಾನ್ಯವಾಗಿ ಹಾರ್ಮೋನುಗಳ ಬದಲಾವಣೆ ಅಂದ್ರೆ ಅದು ಮಹಿಳೆಯರಿಗೆ ಮಾತ್ರ ಸೀಮಿತ ಅಂತ ಅಂದುಕೊಳ್ಳುತ್ತೇವೆ. ಆದರೆ ಪುರುಷರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾರ್ಮೋನುಗಳು ಬಹಳ ಮುಖ್ಯ. ಅದರಲ್ಲೂ 'ಟೆಸ್ಟೋಸ್ಟೆರಾನ್' ಹಾರ್ಮೋನ್ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ವೇಗದ ಜೀವನ, ಕೆಲಸದ ಒತ್ತಡ, ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಅನೇಕ ಪುರುಷರು ಹಾರ್ಮೋನುಗಳ ಅಸಮತೋಲನದಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಹಾರ್ಮೋನುಗಳ ಸಮತೋಲನ ತಪ್ಪಿದಾಗ ನಮ್ಮ ಶರೀರ ಕೆಲವು ಸಂಕೇತಗಳನ್ನು ನೀಡುತ್ತದೆ. ಅವು ಯಾವುವು ಎಂದು ಈಗ ವಿವರವಾಗಿ ತಿಳಿಯೋಣ.          

26
ದೇಹದ ತೂಕ ಹೆಚ್ಚಾಗುವುದು

ನೀವು ಡಯೆಟ್ ಮತ್ತು ವ್ಯಾಯಾಮ ಮಾಡಿದರೂ ತೂಕ ಇಳಿಯುತ್ತಿಲ್ಲವೇ? ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರಣೆಯಾಗುತ್ತಿದೆಯೇ? ಹಾಗಿದ್ರೆ ಇದು ಹಾರ್ಮೋನ್ ಅಸಮತೋಲನದ ಪ್ರಮುಖ ಸಂಕೇತವಾಗಿರಬಹುದು. ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾದಾಗ, ಪುರುಷರಲ್ಲಿ ಚಯಾಪಚಯ ಕ್ರಿಯೆ (ಮೆಟಬಾಲಿಸಂ) ನಿಧಾನವಾಗುತ್ತದೆ. ಇದರಿಂದಾಗಿ ಸ್ನಾಯುಗಳ ಪ್ರಮಾಣ ಕಡಿಮೆಯಾಗಿ, ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಪುರುಷರ ಎದೆಯ ಭಾಗವೂ ಬೆಳೆಯಲು ಶುರುವಾಗುತ್ತದೆ.  

36
ಕೂದಲು ಉದುರುವಿಕೆ ಮತ್ತು ಸ್ನಾಯುಗಳ ಕ್ಷೀಣತೆ

ವಯಸ್ಸಿನ ಭೇದವಿಲ್ಲದೆ ಕೂದಲು ವಿಪರೀತವಾಗಿ ಉದುರುತ್ತಿದ್ದರೆ, ಅದು ಹಾರ್ಮೋನುಗಳ ಪ್ರಭಾವವಿರಬಹುದು. ಕೇವಲ ತಲೆಯ ಕೂದಲು ಮಾತ್ರವಲ್ಲದೆ, ಗಡ್ಡ ಅಥವಾ ದೇಹದ ಇತರ ಭಾಗಗಳಲ್ಲಿಯೂ ಕೂದಲು ತೆಳುವಾಗುವುದನ್ನು ಗಮನಿಸಬೇಕು. ಹಾಗೆಯೇ, ಜಿಮ್‌ಗೆ ಹೋದರೂ ಮೈಕಟ್ಟು ಬೆಳೆಯದಿರುವುದು ಅಥವಾ ಇರುವ ಸ್ನಾಯುಗಳು ದುರ್ಬಲವಾಗುವುದು ಕೂಡ ಹಾರ್ಮೋನುಗಳ ಅಸಮತೋಲನದಿಂದಲೇ ಆಗುತ್ತದೆ.

46
ನಿರಂತರ ಆಯಾಸ ಮತ್ತು ನಿಶ್ಯಕ್ತಿ

ರಾತ್ರಿಯಿಡೀ ಚೆನ್ನಾಗಿ ನಿದ್ದೆ ಮಾಡಿದರೂ, ಬೆಳಗ್ಗೆ ಏಳುವಾಗ ತೀವ್ರ ಆಯಾಸ ಎನಿಸುತ್ತಿದೆಯೇ? ಯಾವುದೇ ಕೆಲಸದ ಮೇಲೆ ಆಸಕ್ತಿ ಮೂಡುತ್ತಿಲ್ಲವೇ? ಹಾಗಿದ್ದರೆ ನಿಮ್ಮ ದೇಹದಲ್ಲಿ ಹಾರ್ಮೋನುಗಳು ಹತೋಟಿ ತಪ್ಪಿವೆ ಎಂದರ್ಥ. ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾದಾಗ ದೇಹದಲ್ಲಿ ಶಕ್ತಿಯ ಮಟ್ಟ ಕುಸಿಯುತ್ತದೆ. ಇದರಿಂದಾಗಿ ಸಣ್ಣ ಕೆಲಸ ಮಾಡಿದರೂ ವಿಪರೀತ ನಿಶ್ಯಕ್ತಿ ಕಾಡುತ್ತದೆ. 

56
ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ

ಹಾರ್ಮೋನುಗಳು ಕೇವಲ ದೇಹದ ಮೇಲೆ ಮಾತ್ರವಲ್ಲ, ಮೆದುಳಿನ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತವೆ. ಹಾರ್ಮೋನುಗಳ ಅಸಮತೋಲನದಿಂದ ಪುರುಷರಲ್ಲಿ ಕಿರಿಕಿರಿ, ಕೋಪ ಮತ್ತು ಆತಂಕ (Anxiety) ಹೆಚ್ಚಾಗುತ್ತದೆ. ಅನೇಕ ಪುರುಷರು ಈ ಸಮಯದಲ್ಲಿ ಖಿನ್ನತೆಗೆ ಒಳಗಾಗುತ್ತಾರೆ. ಯಾವುದೇ ವಿಷಯದ ಮೇಲೆ ಏಕಾಗ್ರತೆ ಸಾಧಿಸಲು ಸಾಧ್ಯವಾಗದಿರುವುದು ಕೂಡ ಒಂದು ಮುಖ್ಯ ಲಕ್ಷಣವಾಗಿದೆ.  

66
ಪರಿಹಾರ ಮಾರ್ಗಗಳು ಯಾವುವು?

ಹಾರ್ಮೋನುಗಳ ಅಸಮತೋಲನವನ್ನು ಸರಿಪಡಿಸಲು ಔಷಧಿಗಳಿಗಿಂತ ಜೀವನಶೈಲಿಯ ಬದಲಾವಣೆಗಳು ಹೆಚ್ಚು ಸಹಕಾರಿ.
ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡುವುದು ಅವಶ್ಯಕ. ನಿದ್ದೆಯಲ್ಲೇ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ.
ಸತು (Zinc), ಮೆಗ್ನೀಶಿಯಂ ಮತ್ತು ವಿಟಮಿನ್ ಡಿ ಹೆಚ್ಚಾಗಿರುವ ಆಹಾರಗಳಾದ ಮೊಟ್ಟೆ, ನಟ್ಸ್, ಹಾಗೂ ಸೊಪ್ಪುಗಳನ್ನು ಸೇವಿಸಬೇಕು.
ಧ್ಯಾನ ಅಥವಾ ಯೋಗದ ಮೂಲಕ ಮಾನಸಿಕ ಒತ್ತಡದಿಂದ ದೂರವಿರಬೇಕು.
ವೇಟ್ ಲಿಫ್ಟಿಂಗ್‌ನಂತಹ ವ್ಯಾಯಾಮಗಳು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತವೆ.
ಮೇಲೆ ತಿಳಿಸಿದ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ, ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಹಾರ್ಮೋನುಗಳು ಹತೋಟಿ ತಪ್ಪದಂತೆ ನೋಡಿಕೊಂಡರೆ ಆರೋಗ್ಯ ನಿಮ್ಮ ಕೈಯಲ್ಲಿರುತ್ತದೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories