ಇನ್ನೇನು ಕೆಲವೇ ದಿನಗಳಲ್ಲಿ 2024ರ ವರ್ಷ ಕೊನೆಗೊಳ್ಳಲಿದೆ. ಈ ವರ್ಷದಲ್ಲಿ ಯಾರೂ ಕೇಳಲಾಗದ ಸಾಕಷ್ಟು ಘಟನೆಗಳು ನಡೆದಿವೆ. ಇನ್ನೂ ಕೆಲವು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ನಡೆದಿವೆ. ನೀವು ಹಿಂದೆಂದೂ ಕೇಳಿರದ ರೆಸಿಪಿಗಳು ಈ ವರ್ಷವೂ ಸೋಶಿಯಲ್ ಮೀಡಿಯಾದಲ್ಲಿ ಕಾಲಿಟ್ಟವು. ಇವುಗಳನ್ನು ಕೇಳುವಾಗಲೇ ವಾಕರಿಕೆ ತರಿಸುವಂತಿದ್ದವು. ಸೋಶಿಯಲ್ ಮೀಡಿಯಾಗೆ ಶಾಕ್ ತರಿಸಿದ್ದ ಅಂಥ ವರ್ಷದ ರೆಸಿಪಿಗಳು ಇಲ್ಲಿವೆ. ಇಂಥದ್ದೊಂದು ಫುಡ್‌ಅನ್ನು ಮಾಡೋಕೆ ಸಾಧ್ಯನಾ ಎಂದು ಕೆಲವರು ಅಚ್ಚರಿಪಟ್ಟಿದ್ದರು. ಆದರೆ, ಇದು ಸೋಶಿಯಲ್ ಮೀಡಿಯಾ ಯುಗ ಇಲ್ಲಿ ವೀವ್ಸ್, ಲೈಕ್ಸ್‌ಗಾಗಿ ಏನು ಬೇಕಾದರೂ ಮಾಡಲು ಸಾಧ್ಯ ಅನ್ನೋದಕ್ಕೆ ಇವರು ಟ್ರೈ ಮಾಡಿದ ಈ ರೆಸಿಪಿಗಳೇ ಸಾಕ್ಷಿ.
ಮಟನ್ ಖೀಮಾ ಕೇಕ್: ಇಲ್ಲಿಯವರೆಗೂ ನೀವು ಚಾಕೋಲೆಟ್, ಪೈನಾಪಲ್, ಬಟರ್‌ಸ್ಕಾಚ್ ಸೇರಿದಂತೆ ಹಲವು ಮಾದರಿಯ ಕೇಕ್‌ಗಳನ್ನು ತಿಂದಿರಬಹುದು. ಆದರೆ, ತಮಿಳುನಾಡಿದ ಬೇಕರ್‌ವೊಬ್ಬ ಮಟನ್ ಖೀಮಾ ಕೇಕ್ ಮಾಡಿದ್ದ. ಇದಕ್ಕಾಗಿ ಸಣ್ಣದಾಗಿ ಕತ್ತರಿಸಿದ ಮಟನ್ ಮಾಂಸವನ್ನು ಕೇಕ್‌ನ ಮೇಲೆ ಹಾಕಿದ್ದ. ಅದರ ಮೇಲೆ ಫ್ರೆಶ್ ಕ್ರೀಮ್‌ಅನ್ನು ಹಾಕಿದ ಬಳಿಕ ಮತ್ತೆ ಅಲಂಕಾರಕ್ಕೆ ಮಟನ್ ಮಾಂಸವನ್ನು ಹಾಕಿದ್ದ. ಕೊನೆಗೆ ಕೆಂಪು ಮೆಣಸು ಹಾಗೂ ಕೊತ್ತಂಬರಿ ಸೊಪ್ಪಿನಲ್ಲಿ ಕೇಕ್‌ಅನ್ನು ಅಲಂಕಾರ ಮಾಡಿದ್ದ. ಇದನ್ನು ನೋಡಿಯೇ ಸೋಶಿಯಲ್ ಮೀಡಿಯಾ ಮಂದಿ ಶಾಕ್ ಆಗಿದ್ದರು.
ಗುಲಾಬ್ ಜಾಮೂನ್ ಚಾಟ್: ಚಾಟ್ ಹಾಗೂ ಗುಲಾಬ್ ಜಾಮೂನ್ ಎರಡೂ ವಿರುದ್ಧ. ಒಂದು ಖಾರ ಇನ್ನೊಂದು ಸಿಹಿ. ಆದರೆ, ಇವೆರಡನ್ನು ಸೇರಿಸಿ ಪುಣ್ಯಾತ್ಮನೊಬ್ಬ ಗುಲಾಬ್ ಜಾಮೂನ್ ಚಾಟ್ ಮಾಡಿದ್ದ. ಗುಲಾಬ್ ಜಾಮೂನ್ ಚಾಟ್ ಮಾಡಿ, ಮೊಸರು ಹಾಗೂ ಹುಳಿ ಚಟ್ನಿಯೊಂದಿಗೆ ಗ್ರಾಹಕನಿಗೆ ನೀಡಿದ್ದ. ಇದನ್ನು ನೋಡಿ ಸೋಶಿಯಲ್ ಮೀಡಿಯಾ ಮಂದಿ ಅಚ್ಚರಿಪಟ್ಟಿದ್ದರು.
ಮೊಟ್ಟೆ ಹಲ್ವಾ: ಸಸಾಮಾನ್ಯವಾಗಿ ಮೊಟ್ಟೆಯನ್ನು ಕೇಕ್‌ಗಳಲ್ಲಿ ಬಳಸೋದನ್ನ ಕೇಳಿದ್ದೇವೆ. ಆದರೆ, ಒಬ್ಬ ವ್ಯಕ್ತಿ ಮೊಟ್ಟೆಯ ಹಲ್ವಾ ಮಾಡಿದ್ದ. ಇದು ಸಾಕಷ್ಟು ದಿನಗಳ ಕಾಲ ವೈರಲ್ ಆಗಿತ್ತು. ಇದಕ್ಕಾಗಿ ಮೊಟ್ಟೆಯನ್ನು ಒಂದು ಬೌಲ್‌ಗೆ ಒಡೆದು ಅದಕ್ಕೆ ಸಕ್ಕರೆ ಹಾಗೂ ಹಾಲನ್ನು ಮಿಕ್ಸ್ ಮಾಡಿದ್ದ. ಎಲೆಕ್ಟ್ರಿಕ್ ಬ್ಲೆಂಡರ್ ಬಳಸಿ ಹದವಾಗಿ ಮಿಕ್ಸ್ ಮಾಡಿದ್ದ. ಬಳಿಕ ಇದನ್ನು ಮತ್ತೊಂದು ಬೌಲ್‌ಗೆ ಹಾಕಿ, ಒಲೆಯ ಮೇಲೆ ಇರಿಸಿ ತುಪ್ಪ, ಒಣ ಹಣ್ಣುಗಳನ್ನು ಹಾಕಿ ಸಣ್ಣ ಕುದಿಯಲ್ಲಿ ಬೇಯಿಸಿದ್ದ.
ಚಾಕೋಲೆಟ್ ಗ್ರೀನ್ ಪೀಸ್: ಹಿಂದೆಂದೂ ಕೇಳಿರದ ಚಾಕೋಲೆಟ್ ಗ್ರೀನ್ ಪೀಸ್ ರೆಸಿಪಿ ಕೂಡ ಈ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿತು. ಫುಡ್‌ಮೇಕ್ಸ್‌ಸ್ಕಲ್ಸ್ ಹ್ಯಾಪಿ ಅನ್ನೋ ಇನ್ಸ್‌ಟಾಗ್ರಾಮ್ ಪೇಜ್ ಈ ರೆಸಿಪಿಯನ್ನು ತನ್ನ ಪೇಜ್‌ನಲ್ಲಿ ಪೋಸ್ಟ್ ಮಾಡಿತ್ತು. ಫುಡ್ ಬ್ಲಾಗರ್‌ವೊಬ್ಬ ಮೈಕ್ರೋವೇವಬಲ್ ಬೌಲ್‌ನಲ್ಲಿ ಚಾಕೋಲೆಟ್ ಬಾರ್‌ಅನ್ನು ಇರಿಸಿದ್ದ. ಅದಕ್ಕೆ ಗ್ರೀನ್ ಪೀಸ್ ಅಂದರೆ ಹಸಿರು ಬಟಾಣಿ ಹಾಕಿದ್ದ. ಕೆಲವು ನಿಮಿಷಗಳ ಕಾಲ ಮೈಕ್ರೋವೇವ್‌ನಲ್ಲಿ ಬೇಯಿಸಿ ಅದನ್ನು ಆನಂದದಿಂದ ತಿಂದಿದ್ದ.
ಬೆಮೆಲ್ ನಿರ್ಮಿತ ಕೋಚ್ ಕಳಪೆ, ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ಟ್ರೇನ್ ಇನ್ನಷ್ಟು ವಿಳಂಬ