ಮೈಸೂರು ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಮೈಸೂರು ದಸರಾ ನೋಡಲು ವಿದೇಶದಿಂದಲೂ ಆಗಮಿಸುತ್ತಾರೆ. ಮೈಸೂರು ಜಿಲ್ಲೆ ಐತಿಹಾಸಿಕ ಹಿನ್ನೆಲೆಯುಳ್ಳ ಪ್ರವಾಸಿ ತಾಣವಾಗಿದೆ . ಇದರ ಜೊತೆ ಇಲ್ಲಿಯೇ ಆಹಾರವೂ ಇಡೀ ಪ್ರಪಂಚದಲ್ಲಿಯೇ ಫೇಮಸ್. (ಸಾಂದರ್ಭಿಕ ಚಿತ್ರ)
ಒಂದು ವೇಳೆ ನೀವೇನಾದ್ರೂ ಮೈಸೂರು ನಗರ ಅಥವಾ ಜಿಲ್ಲೆಯ ಪ್ರವಾಸಕ್ಕೆ ತೆರಳುತ್ತಿದ್ರೆ ಈ ಆಹಾರಗಳ ರುಚಿಯನ್ನು ನೋಡಿ. ಮೈಸೂರಿನ ಸೌಂದರ್ಯವನ್ನು ಸವಿಯುತ್ತಾ ಇಲ್ಲಿಯ ಸಾಂಪ್ರದಾಯಿಕ ಆಹಾರದ ರುಚಿ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ. (ಸಾಂದರ್ಭಿಕ ಚಿತ್ರ)
ಮೈಸೂರು ಮಸಾಲೆ ದೋಸೆ
ಮೈಸೂರು ಮಸಾಲೆ ದೋಸೆ
ಮಸಾಲೆ ದೋಸೆ ಎಲ್ಲಾ ಕಡೆಯೂ ಸಿಗುತ್ತದೆ. ಆದ್ರೆ ಮೈಸೂರಿನಲ್ಲಿರುವ 80-90ರ ದಶಕದ ಹಳೆ ಹೋಟೆಲ್‌ಗಳಲ್ಲಿ ಸಿಗುವ ದೋಸೆ ತುಂಬಾ ರುಚಿಕರವಾಗಿರುತ್ತದೆ. ಗರಿ ಗರಿಯಾದ ದೋಸೆಯನ್ನು ತೆಂಗಿನಕಾಯಿ ಚಟ್ನಿ ಮತ್ತು ಆಲೂ ಪಲ್ಯದೊಂದಿಗೆ ಸವಿಯಬಹುದು. ಉತ್ತರ ಭಾರತದಲ್ಲಿಯೂ ಮೈಸೂರು ದೋಸೆ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿದೆ. (ಸಾಂದರ್ಭಿಕ ಚಿತ್ರ)
ಮೈಸೂರುಪಾಕ್
ಮೈಸೂರುಪಾಕ್
ಮೈಸೂರಿನ ಸ್ವೀಟ್ ಅಂದ್ರೆ ಅದು ಇಲ್ಲಿಯ ಮೈಸೂರುಪಾಕ್. ಕಡಲೆಹಿಟ್ಟು, ಶುದ್ಧತಪ್ಪು ಮತ್ತು ಸಕ್ಕರೆ ಪಾಕ ಬಳಸಿ ಈ ಸಿಹಿ ಪದಾರ್ಥವನ್ನು ತಯಾರಿಸಲಾಗುತ್ತದೆ. ಮೈಸೂರುಪಾಕ್ ಕರ್ನಾಟಕದ ಪ್ರಸಿದ್ಧ ತಿಂಡಿಗಳಲ್ಲಿ ಒಂದಾಗಿದೆ. ಇಲ್ಲಿಯ ಮೈಸೂರುಪಾಕ್‌ಗೆ ವಿದೇಶದಲ್ಲಿಯೂ ಬೇಡಿಕೆ ಇದೆ. (ಸಾಂದರ್ಭಿಕ ಚಿತ್ರ)
ಮೈಸೂರು ಬೋಂಡಾ
ಮೈಸೂರು ಬೋಂಡಾ
ಆಲೂಗಡ್ಡೆಗೆ ಟೊಮೆಟೋ, ಹಸಿಮೆಣಸಿನಕಾಯಿ ಮತ್ತು ವಿವಿಧ ತರಕಾರಿಗಳನ್ನು ಹಾಕಿ ಮೈಸೂರು ಬೋಂಡಾ ತಯಾರಿಸಲಾಗುತ್ತದೆ. ಮೈಸೂರಿನ ಬೀದಿಗಳಲ್ಲಿಯೂ ಈ ರುಚಿಕರವಾದ ತಿಂಡಿ ಸಿಗುತ್ತದೆ. ಕಾಫಿ-ಟೀ ಕುಡಿಯುತ್ತಾ ಬೋಂಡಾ ಸವಿಯಬಹುದು. (ಸಾಂದರ್ಭಿಕ ಚಿತ್ರ)
ಬಿಸಿಬೇಳೆಬಾತ್
ಬಿಸಿಬೇಳೆಬಾತ್
ಬೆಳಗ್ಗೆ ಬಿಸಿಯಾದ ಬಿಸಿಬೇಳೆಬಾತ್ ಸೇವಿಸಿದ್ರೆ ಇಡೀ ದಿನ ನೀವು ಇದರ ಪರಿಮಳದ ಗುಂಗಿನಲ್ಲಿರುತ್ತೀರಿ. ಮೈಸೂರಿನ ಎಲ್ಲಾ ಹೋಟೆಲ್‌ಗಳಲ್ಲಿ ಬಿಸಿಬೇಳೆಬಾತ್ ಸಿಗುತ್ತದೆ. ವಿವಿಧ ತರಕಾರಿ, ತೊಗರಿಬೇಳೆ ಮತ್ತು ವಿಶೇಷ ಮಸಾಲೆಯನ್ನು ಸೇರಿಸಿ ಬಿಸಿಬೇಳೆಬಾತ್ ತಯಾರಿಸಲಾಗುತ್ತದೆ. ಬಿಸಿಬೇಳೆಬಾತ್ ಮೇಲೆ ಖಾರಾ ಬೂಂದಿ ಹಾಕಿ ಕೊಡಲಾಗುತ್ತದೆ. (ಸಾಂದರ್ಭಿಕ ಚಿತ್ರ)
ರವೆಬಾತ್
ರವೆಬಾತ್
ಬಿಸಿಬೇಳೆಬಾತ್‌ಗೆ ಅಕ್ಕಿ ಬಳಕೆಯಾದ್ರೆ, ರವೆಬಾತ್ ಮಾಡಲು ಬನ್ಸಿ ರವೆ ಬಳಸಲಾಗುತ್ತದೆ. ಆಹಾರದಲ್ಲಿ ಹೆಚ್ಚು ತರಕಾರಿ ಇಷ್ಟಪಡೋರಿಗೆ ರವೆಬಾತ್ ಖಂಡಿತ ಇಷ್ಟವಾಗುತ್ತದೆ. ಡಯಟ್ ಫಾಲೋ ಮಾಡೋರಿಗೆ ರವೆಬಾತ್ ಆರೋಗ್ಯಕರ ಆಹಾರವಾಗಿದೆ. (ಸಾಂದರ್ಭಿಕ ಚಿತ್ರ)
ಕೊರ್ರಿ ಗಸ್ಸಿ (ಚಿಕನ್ ಕರ್ರಿ)
ಕೊರ್ರಿ ಗಸ್ಸಿ (ಚಿಕನ್ ಕರ್ರಿ)
ಕೊರ್ರಿ ಗಸ್ಸಿ ಅಂದ್ರೆ ಚಿಕನ್ ಕರ್ರಿ. ನಾನ್‌ವೆಜ್ ಪ್ರಿಯರು ರುಚಿಯಾದ ಕೊರ್ರಿ ಗಸ್ಸಿ ಟ್ರೈ ಮಾಡಬಹುದು. ಹಸಿತೆಂಗಿನಕಾಯಿ ಮತ್ತು ಅದರ ಹಾಲು ಬಳಸಿ ಈ ವಿಶೇಷ ಚಿಕನ್ ಕರ್ರಿ ಸಿದ್ಧಪಡಿಸಲಾಗುತ್ತದೆ. ಚಪಾಯಿ, ನೀರ್‌ದೋಸೆ ಜೊತೆಗೆ ಕೊರ್ರಿ ಗಸ್ಸಿ ಒಳ್ಳೆಯ ಕಾಂಬಿನೇಷನ್ ಆಗಿದೆ. (ಸಾಂದರ್ಭಿಕ ಚಿತ್ರ)
ಮೈಸೂರು ಹನುಮಂತು ಪಲಾವ್
ಮೈಸೂರು ಹನುಮಂತು ಪಲಾವ್
ನಾನ್ ವೆಜ್ ಪ್ರಿಯರಿಗೆ ಮೈಸೂರು ಹನುಮಂತು ಪಲಾವ್ ಒಳ್ಳೆಯ ಆಯ್ಕೆಯಾಗಿದೆ. 1930ರಿಂದಲೂ ಈ ಹೋಟೆಲ್ ಆರಂಭವಾಗಿದ್ದು, ಇಲ್ಲಿ ನಿಮಗೆ ಬಗೆ ಬಗೆಯ ನಾನ್ ವೆಜ್ ಸಿಗುತ್ತದೆ. ಬಿರಿಯಾನಿಯನ್ನು ಇಲ್ಲಿ ಹನುಮಂತ್ ಪಲಾವ್ ಎಂದು ಕರೆಯಲಾಗುತ್ತದೆ. (ಸಾಂದರ್ಭಿಕ ಚಿತ್ರ)