ಕೆಟ್ಟ ಆಹಾರ ಲಿಸ್ಟಲ್ಲಿ ಫೇಮಸ್ ದೇವರ ಪ್ರಸಾದ! ಯಾರಪ್ಪ ಇವ್ನು ಲಿಸ್ಟ್ ಮಾಡಿದೋದು ಕೇಳ್ತಿದ್ದಾರೆ!

First Published | Jul 4, 2024, 4:25 PM IST

ಕೆಟ್ಟ ರೇಟಿಂಗ್ ಪಡೆದ ಭಾರತೀಯ ಆಹಾರಗಳ ಲಿಸ್ಟ್ ಕೂಡ ಮಾಡಿದ್ದು,  ಈ ಪಟ್ಟಿಯಲ್ಲಿ, 'ಜಲ್ ಜೀರಾ'  ಮಾಲ್ಪೋವಾ, ಅಚ್ಚಪ್ಪಮ್ ಎಲ್ಲವೂ ಸೇರಿದೆ. 
 

ಕೆಟ್ಟ ರೇಟಿಂಗ್ (worst rated Indian food)  ಪಡೆದ ಭಾರತೀಯ ಆಹಾರಗಳ ಲಿಸ್ಟ್ ಕೂಡ ಮಾಡಿದ್ದು, ಈ ಭಕ್ಷ್ಯಗಳನ್ನು ನೋಡಿದ ಜನ ಯಾರಪ್ಪ ಇಷ್ಟೊಳ್ಳೆ ಆಹಾರಗಳನ್ನ ಕೆಟ್ಟ ಆಹಾರ ಅಂತಿದ್ದಾರೆ ಎಂದು ಹೌಹಾರಿದ್ದಾರೆ. ಈ ಪಟ್ಟಿಯಲ್ಲಿ, 'ಜಲ್ ಜೀರಾ'  ಮಾಲ್ಪೋವಾ, ಅಚ್ಚಪ್ಪಮ್ ಎಲ್ಲವೂ ಸೇರಿದೆ. 
 

ಜಲ್ ಜೀರಾ (Jal Jeera) : ಜೀರಿಗೆ ಮತ್ತು ನೀರು ಜೊತೆಗೆ ನಿಂಬೆ ರಸ ಸೇರಿಸಿ ತಯಾರಿಸುವಂತಹ ಡ್ರಿಂಕ್ ಇದು. ಇದನ್ನ ಹೆಚ್ಚಾಗಿ ಜನರು ಬೇಸಿಗೆಯಲ್ಲಿ ಸೇವಿಸೋಕೆ ಇಷ್ಟ ಪಡ್ತಾರೆ. 
 

Latest Videos


Image: Freepik

ಗಜಕ್ (Gajak) : ಬಿಳಿ ಎಳ್ಳು ಅಥವಾ ನೆಲಕಡಲೆ ಜೊತೆಗೆ ಶುಗರ್ ಸಿರಪ್ ಸೇರಿಸಿ, ತೆಳು ಲೇಯರ್ ನಲ್ಲಿ ಮಾಡಿರುವಂತಹ ಸ್ವೀಟ್ ಡಿಶ್ ಇದಾಗಿದೆ. ಇದನ್ನ ಒಂದು ತಿಂಗಳವರೆಗೆ ಇಟ್ಟು ಸೇವಿಸಬಹುದು. 
 

ತೆಂಗೈ ಸದಮ್ (Coconut Rice) : ಇದನ್ನ ಕೋಕನಟ್ ರೈಸ್ ಅಂತಾನು ಕರಿತಾರೆ. ಅನ್ನಕ್ಕೆ ತೆಂಗಿನ ತುರಿ ಸೇರಿ , ಅದಕ್ಕೆ ಒಗ್ಗರಣೆ ಕೊಟ್ಟು ಮಾಡುವಂತಹ ಬ್ರೇಕ್ ಫಾಸ್ಟ್ ತಿನಿಸು ಇದಾಗಿದೆ. ದೇವಸ್ಥಾನಗಳಲ್ಲಿ ಪ್ರಸಾದವಾಗಿಯೂ ನೀಡೋ ಈ ಆಹಾರ ತುಂಬ ಸಾತ್ವಿಕವೆಂದೇ ಹೆಸರು ಪಡೆದಿದೆ.

ಪಂತಾ ಭತ್ : ಇದು ನಿನ್ನೆ ಉಳಿದ ಅನ್ನವನ್ನು ನೀರಿನಲ್ಲಿ ನೆನೆಸಿಟ್ಟು, ಅದನ್ನ ಮರುದಿನ ಬೆಳಗ್ಗೆ, ಉಪ್ಪು, ಮೆಣಸು, ಈರುಳ್ಳಿ ಮತ್ತು ಬೇಯಿಸಿದ ಆಲೂಗಡ್ಡೆಯ ಜೊತೆ ಸಾಂಪ್ರದಾಯಿಕವಾಗಿ ಸೇವಿಸ್ತಾರೆ.
 

Aloo Baingan

ಆಲೂ ಬೇಂಗನ್ : ಆಲೂ ಗಡ್ಡೆ ಮತ್ತು ಬದನೆಕಾಯಿಯನ್ನು ಜೊತೆಯಾಗಿ ಸೇರಿಸಿ ಮಾಡುವಂತಹ ಭಾರತದ ಜನಪ್ರಿಯ ಸಿಂಪಲ್ ಡಿಶ್ ಇದಾಗಿದೆ. ಹೆಚ್ಚಿನ ಎಲ್ಲಾ ಮನೆಯಲ್ಲಿ ಮಾಡುತ್ತಾರೆ. 
 

ಥಂಡೈ : ಥಂಡೈ ಎಂಬುದು ಬಾದಾಮಿ, ಸೋಂಪು ಬೀಜಗಳು, ಕಲ್ಲಂಗಡಿ ಬೀಜ, ಗುಲಾಬಿ ದಳಗಳು, ಗಸಗಸೆ ಬೀಜಗಳು, ಏಲಕ್ಕಿ, ಕೇಸರಿ, ಹಾಲು ಮತ್ತು ಸಕ್ಕರೆಯ ಮಿಶ್ರಣದಿಂದ ತಯಾರಿಸಿದ ಭಾರತೀಯ ಕೋಲ್ಡ್ ಡ್ರಿಂಕ್ಸ್. ಇದನ್ನ ಹೆಚ್ಚಾಗಿ ಮಹಾ ಶಿವರಾತ್ರಿ ಮತ್ತು ಹೋಳಿ ಸಮಯದಲ್ಲಿ ತಯಾರಿಸ್ತಾರೆ. 
 

ಅಚ್ಚಪ್ಪಮ್ : ಇದು ಅಕ್ಕಿಯಿಂದ ತಯಾರಿಸುವಂತಹ ಡೀಪ್ ಫ್ರೈ ಮಾಡಿದಂತಹ ತಿನಿಸು. ಇದನ್ನ ರೋಸ್ ಕುಕ್ಕೀಸ್ ಅಂತಾನೂ ಹೇಳ್ತಾರೆ. ಇದು ಕೇರಳದ ಫೇಮಸ್ ತಿನಿಸು. ಡಚ್ಚರ ಕಾಲದಿಂದ ಇದು ಕೇರಳಕ್ಕೆ ಬಂತೆಂಬ ಪ್ರತೀತಿ ಇದೆ. 
 

ಮಿರ್ಚಿ ಕಾ ಸಲನ್ : ಮಿರ್ಚಿ ಕಾ ಸಲನ್, ಅಥವಾ ಕರಿದ ಮೆಣಸಿನಕಾಯಿ, ಇದು ತೆಲಂಗಾಣದ ಹೈದರಾಬಾದ್‌ನ ಜನಪ್ರಿಯ ಭಾರತೀಯ ಮೆಣಸಿನಕಾಯಿ ಮತ್ತು ಕಡಲೆಕಾಯಿ ಪಲ್ಯವಾಗಿದ್ದು, ಇದು ಸಾಮಾನ್ಯವಾಗಿ ದಹಿ ಚಟ್ನಿಯೊಂದಿಗೆ ಹೈದರಾಬಾದಿ ಬಿರಿಯಾನಿ ಜೊತೆ ಸರ್ವ್ ಮಾಡುತ್ತೆ.
 

ಮಾಲ್ಪೋವಾ : ಭೂತಾನ್, ಭಾರತ, ನೇಪಾಳ, ಬಾಂಗ್ಲಾದೇಶದಲ್ಲಿನ ಜನಪ್ರಿಯ ಸ್ವೀಟ್ ಡಿಶ್ ಮಾಲ್ಫೋವಾ. ಇದು ನಿಜವಾಗಿ ಭಾರತದ ಜನರ ಫೇವರಿಟ್ ಡಿಶ್. ಆದ್ರೆ ಇದನ್ನ ಯಾಕೆ ಕೆಟ್ಟ ತಿಂಡಿಗಳ ಲಿಸ್ಟ್ ನಲ್ಲಿ ಸೇರಿಸಿದ್ದಾರೆ ಅನ್ನೋದು ಮಾತ್ರ ಗೊತ್ತಿಲ್ಲ. 
 

ಉಪ್ಮಾ : ಉಪ್ಮಾ, ಉಪ್ಪಿಟ್ಟು ಎಂದು ಹೇಳಲಾಗುವ ಈ ತಿನಿಸು ಕೆಟ್ಟ ತಿನಿಸುಗಳ ಲಿಸ್ಟ್ ನಲ್ಲಿ ಹತ್ತನೇ ಸ್ಥಾನದಲ್ಲಿದೆ. ಹೆಚ್ಚಾಗಿ ಮನೆಯಲ್ಲಿ ಬ್ರೇಕ್ ಫಾಸ್ಟ್ ಗೆ ಇದನ್ನೇ ಮಾಡ್ತಾರೆ ಅಂತ, ಜನರಿಗೆ ಇಷ್ಟಾನೆ ಆಗೋದಿಲ್ಲ ಈ ತಿನಿಸು. 
 

click me!