ಭಾರತ ವೈವಿಧ್ಯಮಯ ಸಂಸ್ಕೃತಿ, ಧರ್ಮಗಳ ತವರೂರು. ಇಲ್ಲಿನ ವೈಬ್ರೆಂಟ್ ಸಂಸ್ಕೃತಿ, ಆಚರಣೆಗಳಿಗೆ ಹೆಚ್ಚಿನ ಜನ ಮನಸೋಲುತ್ತಾರೆ. ಅದರ ಜೊತೆಗೆ ಜನರಿಗೆ ಭಾರತ ತುಂಬಾನೆ ಇಷ್ಟವಾಗೋದು ಇಲ್ಲಿನ ರುಚಿಯಾದ ಆಹಾರಗಳಿಂದ. ಭಾರತದ ಅದೆಷ್ಟೋ ಆಹಾರಗಳು, ಇವತ್ತು ವಿದೇಶಿಯರ ಬಾಯಲ್ಲಿ ನಲಿದಾಡುತ್ತಿದೆ ಅಂದ್ರೆ, ಅದಕ್ಕೆ ಇಲ್ಲಿನ ಆಹಾರಗಳ ರುಚಿಯೇ ಕಾರಣ. ಹಾಗಂತ ಇಲ್ಲಿ ನಾವು ತಿನ್ನೋ ಎಲ್ಲಾ ರುಚಿಕರವಾದ ತಿಂಡಿ ನಮ್ಮ ದೇಶದಲ್ಲೇ ಹುಟ್ಟಿಕೊಂಡಿದ್ದು ಅಲ್ಲ ಅನ್ನೋದು ನಿಮಗೆ ಗೊತ್ತಾ? ಹೌದು ಈ ಎಂಟು ಜನಪ್ರಿಯ ಆಹಾರಗಳು (popular Indian dishes) ಭಾರತದ್ದೆ ಅಲ್ವಂತೆ, ಮೊಘಲರು ಇಲ್ಲಿಗೆ ತಂದಂತಹ ಆಹಾರಗಳಿವು.