ಪುಟ್ಟ ಮಗುವಿಗೆ ಚಹಾ ಜೊತೆ ಬಿಸ್ಕೆಟ್ ಕೊಡ್ತೀರಾ? ವಿಷ ಕೊಟ್ಟಂತೆ ಎಚ್ಚರ!

First Published Jun 30, 2024, 5:22 PM IST

ನೀವು ನಿಮ್ಮ ಮಗುವಿಗೆ ಬಿಸ್ಕತ್ತು ಮತ್ತು ಚಹಾ ಕೊಡ್ತೀರಾ? ಹಾಗಿದ್ರೆ ಹುಷಾರಾಗಿರಿ. ಯಾಕಂದ್ರೆ ಇದರಿಂದ ಮಕ್ಕಳಿಗೆ ಎಷ್ಟೊಂದು ಸಮಸ್ಯೆ ಆಗುತ್ತೆ, ಯಾವ ರೀತಿ ಇದು ವಿಷದಂತೆ ಪರಿಣಾಮ ಹೊಂದಬಹುದು ಅನ್ನೋದನ್ನು ನೀವು ತಿಳಿಯಲೇಬೇಕು. 
 

ಮಗು ಜನಿಸಿದಾಗ 6 ತಿಂಗಳವರೆಗೆ ತಾಯಿಯ ಹಾಲನ್ನು ನೀಡಲಾಗುತ್ತದೆ. 6 ತಿಂಗಳ ವಯಸ್ಸಿನ ನಂತರ, ಮಗುವಿಗೆ ಘನ ಆಹಾರ ನೀಡಲು ಪ್ರಾರಂಭಿಸಲಾಗುತ್ತದೆ. ಈ ಘನ ಆಹಾರದಲ್ಲಿ, ಮಗುವಿಗೆ ಹಣ್ಣು ಮತ್ತು ತರಕಾರಿ ಪ್ಯೂರಿ, ಸೆರೆಲಾಕ್ ನಂತಹ ಅನೇಕ ಪೌಷ್ಟಿಕ ವಸ್ತುಗಳನ್ನು ನೀಡಲಾಗುತ್ತದೆ. ಇದಲ್ಲದೆ, ಕೆಲವೊಮ್ಮೆ ಮಗುವಿಗೆ ಚಹಾದಲ್ಲಿ ಬಿಸ್ಕೆಟ್ ನ್ನು (tea with biscuit) ಅದ್ದಿ ಅದನ್ನೂ ತಿನಿಸೋರು ಇದ್ದಾರೆ. 
 

ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆಯ ಸುತ್ತಲೂ ಮಕ್ಕಳು ಚಹಾದಲ್ಲಿ ಬಿಸ್ಕತ್ತುಗಳನ್ನು ನೆನೆಸಿ ತಿನ್ನೋದನ್ನು ನೀವು ನೋಡಿರಬಹುದು. ಆದರೆ ಹಾಗೆ ಮಾಡುವುದು ಎಷ್ಟು ಸರಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?  ನಿವು ಮಕ್ಕಳಿಗೆ ಬಿಸ್ಕೆಟ್ ಮತ್ತು ಚಹಾ ನೀಡುತ್ತಿದ್ರೆ ಇದನ್ನ ನೀವು ಓದಲೇಬೇಕು. ಯಾಕಂದ್ರೆ ಮಕ್ಕಳಿಗೆ ಚಹಾ ಮತ್ತು ಬಿಸ್ಕತ್ತುಗಳನ್ನು ನೀಡಬಾರದು ಎಂದು ವೈದ್ಯರು ಹೇಳುತ್ತಾರೆ. 

Latest Videos


ಬಿಸ್ಕತ್ತುಗ ಮೈದಾ ಹಿಟ್ಟಿನಿಂದ (maida) ತಯಾರಿಸಲಾಗುತ್ತದೆ. ಇದಲ್ಲದೆ, ಅವು ಸಕ್ಕರೆ ಮತ್ತು ಪಾಮ್ ಆಯಿಲ್ ಅನ್ನು ಸಹ ಹೊಂದಿರುತ್ತವೆ, ಇದು ಮಗುವಿನ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇದರ ಜೊತೆಗೆ ಚಹಾ ಕುಡಿಯುವುದರಿಂದ ಹೆಚ್ಚು ಸೋಮಾರಿತನ, ನಿದ್ರೆಗೆ ಭಂಗ ಮತ್ತು ಮಗುವಿನಲ್ಲಿ ಕಬ್ಬಿಣಾಂಶ ಹೀರಿಕೊಳ್ಳುವಿಕೆಗೆ ಅಡ್ಡಿ ಮೊದಲಾದ ಸಮಸ್ಯೆಗೆ ಕಾರಣವಾಗಬಹುದು.
 

ಕ್ಯಾಲರಿ ಮಾತ್ರ ಇರುತ್ತೆ
ಬಿಸ್ಕತ್ತುಗಳನ್ನು ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಇದು ಯಾವುದೇ ಆರೋಗ್ಯಕರ ಕ್ಯಾಲೊರಿಗಳನ್ನು (calory) ಒದಗಿಸುವುದಿಲ್ಲ. ಅವು ಕೇವಲ ನಿಮ್ಮ ಹೊಟ್ಟೆ ತುಂಬಬಹುದು.ಆದರೆ ಅವುಗಳಿಂದ ಯಾವುದೇ ಪೋಷಕಾಂಶಗಳನ್ನು ಪಡೆಯುವುದಿಲ್ಲ. ಆದರೆ ಮಗುವಿನ ಬೆಳವಣಿಗೆಗೆ ಪೌಷ್ಠಿಕಾಂಶವು ಬಹಳ ಮುಖ್ಯ, ಆದ್ದರಿಂದ ಮಗುವಿಗೆ ಬಿಸ್ಕತ್ತುಗಳನ್ನು ನೀಡದಿರುವುದು ಉತ್ತಮ.

ಪ್ರಿಸರ್ವೇಟೀವ್ ಇರುತ್ತೆ
ಬ್ಯೂಟಿಲೇಟೆಡ್ ಹೈಡ್ರಾಕ್ಸಿಯನಿಸೋಲ್ (ಬಿಎಚ್ಎ) ಮತ್ತು ಬ್ಯೂಟಿಲೇಟೆಡ್ ಹೈಡ್ರಾಕ್ಸಿಟೊಲುಯೆನ್ (ಬಿಎಚ್ಟಿ), ಎನ್ನುವ ಪ್ರಿಸರ್ವೇಟೀವ್ ಗಳು (preservative) ಬಿಸ್ಕತ್ತುಗಳಲ್ಲಿ ಕಂಡುಬರುತ್ತವೆ. ಅಧ್ಯಯನಗಳ ಪ್ರಕಾರ, ಇವೆರಡೂ ರಕ್ತವನ್ನು ಹಾಳುಮಾಡುತ್ತವೆ. ಇದಲ್ಲದೆ, ಬಿಸ್ಕತ್ತುಗಳು ಸೋಡಿಯಂ ಬೆಂಜೊಯೇಟ್ ಅನ್ನು ಸಹ ಹೊಂದಿರುತ್ತವೆ, ಇದು ಡಿಎನ್ಎಯನ್ನು ಸ್ವಲ್ಪ ಮಟ್ಟಿಗೆ ಹಾನಿಗೊಳಿಸುತ್ತೆ ಹಾಗಾಗಿ ಮಗುವಿಗೆ ಇದನ್ನ ಕೊಡದೇ ಇದ್ದರೆ ಉತ್ತಮ.

ಬೇಕಿಂಗ್ ಸೋಡಾ 
ಬೇಕಿಂಗ್ ಸೋಡಾವನ್ನು (baking soda) ಬಿಸ್ಕತ್ತುಗಳಿಗೆ ಸೇರಿಸಲಾಗುತ್ತದೆ, ಇದರಿಂದಾಗಿ ಶಿಶುಗಳು ಮತ್ತು ಅಂಬೆಗಾಲಿಡುವ ಮಕ್ಕಳು ಆಸಿಡ್ ರಿಫ್ಲಕ್ಸ್ ನಂತಹ ಸಮಸ್ಯೆಗಳನ್ನು ಹೊಂದಬಹುದು. ಅಷ್ಟೇ ಅಲ್ಲ, ಬಿಸ್ಕತ್ತುಗಳಿಗೆ ಫ್ಲೇವರ್ ನೀಡಲು ಬಳಸುವ ಸಂಯುಕ್ತಗಳು ಕ್ಯಾನ್ಸರ್, ಶ್ವಾಸಕೋಶದ ಕಾಯಿಲೆ ಮತ್ತು ಮೆದುಳಿನ ಹಾನಿಗೆ ಕಾರಣವಾಗಬಹುದು.
 

ಮಲಬದ್ಧತೆ ಉಂಟಾಗಬಹುದು
ಮೈದಾ ಹಿಟ್ಟಿನ ಬಿಸ್ಕೆಟ್ ತಿನ್ನೋದ್ರಿಂದ ಮಕ್ಕಳು ಮತ್ತು ವಯಸ್ಕರಲ್ಲಿ ಮಲಬದ್ಧತೆಗೆ (constipation) ಕಾರಣವಾಗಬಹುದು. ಇದರಲ್ಲಿ ಫೈಬರ್ ಇಲ್ಲದ ಕಾರಣ, ಪ್ರತಿಯೊಬ್ಬರೂ ಅವುಗಳನ್ನು ಜೀರ್ಣಿಸಿಕೊಳ್ಳಲು ಕಷ್ಟ. ಮಗುವಿನ ಜೀರ್ಣಾಂಗ ವ್ಯವಸ್ಥೆಯು ತುಂಬಾ ನಿಧಾನವಾಗಿರುತ್ತದೆ. ಮಲಬದ್ಧತೆಯಿಂದಾಗಿ, ಮಗು ವಾಂತಿ, ಹೊಟ್ಟೆ ನೋವು ಮತ್ತು ಹೊಟ್ಟೆಯುಬ್ಬರ ಮೊದಲಾದ ಸಮಸ್ಯೆಗಳನ್ನ ಎದುರಿಸಬೇಕಾಗಿ ಬರಬಹುದು. 

click me!