ಹೊಸ ವರ್ಷ ಪಾರ್ಟಿ ಮಾಡಿದ್ಮೇಲೆ ಹ್ಯಾಂಗೋವರ್ ಸಮಸ್ಯೆನಾ? ಇದನ್ನು ತಿಂದರೆ ಟೆನ್ಶನ್ ಫ್ರೀ

Published : Dec 31, 2025, 06:52 PM IST

ಹೊಸ ವರ್ಷ ಪಾರ್ಟಿ ಮಾಡಿದ್ಮೇಲೆ ಹ್ಯಾಂಗೋವರ್ ಸಮಸ್ಯೆನಾ? ಇದನ್ನು ತಿಂದರೆ ಟೆನ್ಶನ್ ಫ್ರೀ, ಪಾರ್ಟಿ ಮಾಡುವ ಮೊದಲು ಕೆಲವೇ ಕೆಲವು ಫುಡ್ ಸೇವಿಸಿದರೆ ಸಾಕು, ಪಾರ್ಟಿ ಎಷ್ಟು ಹೊತ್ತಾದರೂ, ಲಿಮಿಟ್ ಮೀರಿದರೂ ಹ್ಯಾಂಗೋವರ್ ಸಮಸ್ಯೆ ಸಾಧ್ಯತೆ ಕಡಿಮೆ. 

PREV
16
ಹೊಸ ವರ್ಷದ ಸೆಲೆಬ್ರೆಷನ್

ಹೊಸ ವರ್ಷದ ಸಂಭ್ರಮ ಕಳಗಟ್ಟಿದೆ. ಪ್ರವಾಸಿ ತಾಣಗಳು ಭರ್ತಿಯಾಗಿದೆ. ಪಬ್, ರೆಸ್ಟೋರೆಂಟ್, ನಟ್ ಕ್ಲಬ್ ಸೇರಿದಂತೆ ಹಲವು ಪ್ರಸಿದ್ಧ ಹ್ಯಾಂಗೌಟ್ ಸ್ಥಳಗಳು ಕಿಕ್ಕಿರಿದು ತುಂಬಿದೆ. ಹೊಸ ವರ್ಷದ ವಿಶೇಷ ಅಂದರೆ ಪಾರ್ಟಿ. ಹೊಸ ವರ್ಷ ಬರ ಮಾಡಿಕೊಳ್ಳುತ್ತಾ ಕುಣಿದು ಕುಪ್ಪಳಿಸುವುದೇ ಈ ಸಂಭ್ರಮದ ವಿಶೇಷ

26
ಹ್ಯಾಂಗೋವರ್ ಸಮಸ್ಯೆ

ಹೊಸ ವರ್ಷದಲ್ಲಿ ಪಾರ್ಟಿಯೇ ಪ್ರಧಾನ. ಅದು ಮನೆ ಆಗಿರಲಿ, ಪಬ್, ಅಥವಾ ಕಾರ್ಯಕ್ರಮಗಳೇ ಆಗಿರಲಿ ಕಿಕ್ ಪಾರ್ಟಿ ಇರಲೇಬೇಕು. ತಡ ರಾತ್ರಿವರೆಗೆ ಪಾರ್ಟಿ, ಮಿತಿಗಿಂತ ಹೆಚ್ಚು ಮದ್ಯ ಸೇವನೆ ಕಾರಣ ಮರು ದಿನ ಹಲವರು ಹ್ಯಾಂಗೋವರ್ ಸಮಸ್ಯೆ ಎದುರಿಸುತ್ತಾರೆ. ತಲೆ ನೋವು, ಸುಸ್ತು, ತಿಂಡಿ ಸೇರದಂತೆ ಆಹಾರ ಸೇವನೆಯೂ ಕಷ್ಟದ ಪರಿಸ್ಥಿತಿ ಎದುರಿಸುತ್ತಾರೆ.

36
ಪಾರ್ಟಿಗೂ ಮೊದಲು ಇದನ್ನು ಸೇವಿಸಿ

ಪಾರ್ಟಿ ಮಾಡುವ ಮೊದಲು ನೀವು ಕೆಲ ಆಹಾರಗಳನ್ನು ಸೇವಿಸಿದರೆ ಮರು ದಿನ ಹ್ಯಾಂಗೋವರ್ ಸಮಸ್ಯೆ ಹೆಚ್ಚಾಗಿ ಕಾಡುವುದಿಲ್ಲ. ಪಾರ್ಟಿಗೂ ಮೊದಲು ಈ ಆಹಾರಗಳನ್ನು ಸೇವಿಸಿದರೆ ಬಳಿಕ ಅದೆಷ್ಟೇ ಪಾರ್ಟಿ ಮಾಡಿದರೂ, ಸಮಯ, ಪ್ರಮಾಣ ಮೀರಿದರೂ ಸಮಸ್ಯೆಯಾಗುವುದಿಲ್ಲ.

46
ಹ್ಯಾಂಗೋವರ್ ಓಡಿಸಲು ತಿನ್ನಬೇಕಾದ ಫುಡ್

ಹ್ಯಾಂಗೋವರ್‌ನಿಂದ ದೂರವಿರಲು ಪಾರ್ಟಿಗೂ ಮೊದಲು ತಿನ್ನಬೇಕಾದ ಕೆಲ ಆಹಾರಗಳ ವಿವರ ಇಲ್ಲಿದೆ. ಆರೋಗ್ಯಕರ ಫ್ಯಾಟ್ ಇರುವ ಆಹಾರ ಈ ಪೈಕಿ ಬಟರ್ ಫುಟ್ ಅತ್ಯಂತ ಉತ್ತಮವಾಗಿದೆ. ಹೆಚ್ಚಿನ ಫೈಬರ್ ಭರಿತ ಆಹಾರಗಳನ್ನು ಸೇವಿಸಬೇಕು. ಸೊಪ್ಪು ತಕಾರಿ, ಕಾಳು ಸೇರದಂತೆ ಇತರ ಫೈಬರ್‌ಯುಕ್ತ ಆಹಾರ ಸೇವನೆ ಹ್ಯಾಂಗೋವರ್ ಸಮಸ್ಯೆ ದೂರವಿಡಲು ಉತ್ತಮವಾಗಿದೆ.

56
ವಿಟಮಿನ್ ಸಿ ಹಣ್ಣುಗಳು

ಮಿಟಮಿನ್ ಸಿ ಯುಕ್ತ ಆಹಾರಗಳಾದ ಆರೇಂಜ್, ಸೀಬೆ ಹಣ್ಣು, ಸ್ಟ್ರಾಬೆರಿ, ಮಾವಿನ ಹಣ್ಮು ಸೇರಿದಂತೆ ಕೆಲ ಹಣ್ಣುಗಳ ಸೇವನೆ ಹ್ಯಾಂಗೋವರ್ ಓಡಿಸಲು ಉತ್ತಮ ಆಹಾರವಾಗಿದೆ. ಇದೇ ವೇಳೆ ಈರುಳ್ಳಿ ಸೂಪ್ ಸೇರಿದಂತೆ ದ್ರವ ಆಹಾರ, ಪಾನೀಯಗಳು ದೇಹದ ಬ್ಲಡ್ ಶುಗರ್ ನಿಯಂತ್ರಸಲು ಸಹಾಯ ಮಾಡುತ್ತದೆ.

ವಿಟಮಿನ್ ಸಿ ಹಣ್ಣುಗಳು

66
ಪಾರ್ಟಿ ದಿನ ಆಹಾರ ಸೇವನೆಯಲ್ಲೂ ಇರಲಿ ಶಿಸ್ತು

ಪಾರ್ಟಿ ದಿನ ಅಂದರೆ ಪಾರ್ಟಿಗೆ ಹೋಗುವ ಮೊದಲು ಆಹಾರ ಸೇವನೆಯಲ್ಲೂ ಶಿಸ್ತು ಕಾಪಾಡಿ, ಕಾರಣ ಪಾರ್ಟಿಯಲ್ಲಿ ಯಾವುದೇ ಶಿಸ್ತು ಪಾಲಿಸಲು ಸಾಧ್ಯವಾಗದ ಕಾರಣ ಆಹಾರದಲ್ಲಿ ಶಿಸ್ತು ಮುಖ್ಯ. ಮೂರು ಬಾರಿ ತಿನ್ನವುದಕ್ಕಿಂತ ಸ್ವಲ್ಪ ಸ್ವಲ್ಪವಾಗಿ ಆಹಾರ ದಿನವಿಡಿ ಸೇವಿಸುತ್ತಾ ಇರಿ.

ಪಾರ್ಟಿ ದಿನ ಆಹಾರ ಸೇವನೆಯಲ್ಲೂ ಇರಲಿ ಶಿಸ್ತು

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories